ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಉಗ್ರರ ದಾಳಿಗೆ ನಲುಗಿದ್ದ ಸೀರಾಕ್ ಹೋಟೆಲ್ ತಾಜ್ ತೆಕ್ಕೆಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರರ ದಾಳಿಗೆ ನಲುಗಿದ್ದ ಸೀರಾಕ್ ಹೋಟೆಲ್ ತಾಜ್ ತೆಕ್ಕೆಗೆ
1993ರ ಮುಂಬೈ ಸರಣಿ ಕಾರ್ ಬಾಂಬ್ ಸ್ಫೋಟದಲ್ಲಿ ನಲುಗಿದ್ದ, ಬಾಲಿವುಡ್ ತಾರೆಗಳ ಹಾಟ್ ಫೇವರಿಟ್ ಹೋಟೆಲ್ ಮುಂಬೈನ ಬಾಂದ್ರಾದ 'ಸೀರಾಕ್' ಇದೀಗ ತಾಜ್ ಗ್ರೂಪ್‌ ತನ್ನ ತೆಕ್ಕೆಯಲ್ಲಿ ಸೇರಿಸಿಕೊಂಡಿದೆ.

ಬಾಲಿವುಡ್ ಚಿರಯೌವ್ವನೆ ರೇಖಾ ಆಗಾಗ ಬಂದು ಹೋಗುತ್ತಿದ್ದ, ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಹಾಗೂ ಆತನ ಮಾಜಿ ಪ್ರೇಯಸಿ ಸಂಗೀತಾ ಬಿಜಲಾನಿ ಜತೆಗೆ ಕೂತು ಕಾಫಿ ಹೀರುತ್ತಿದ್ದ ಬಾಂದ್ರಾದ ಈ ಸೀರಾಕ್ ಹೋಟೆಲನ್ನು ಇದೀಗ ಪ್ರತಿಷ್ಠಿತ ತಾಜ್ ಗ್ರೂಪ್ ಇದೀಗ ಲೀಸ್‌ಗೆ ಪಡೆದುಕೊಂಡಿದೆ. 440 ರೂಮ್‌ಗಳನ್ನು ಹೊಂದಿರುವ ಅತ್ಯಂತ ಹಳೆಯ ಪಂಚತಾರಾ ಡಿಲಕ್ಸ್ ಹೋಟೆಲ್ ಸೀರಾಕ್ ಇನ್ನು ತಾಜ್ ಗ್ರೂಪ್ ಸರಣಿಯೊಂದಿಗೆ ಸೇರಿಕೊಳ್ಳಲಿದೆ.

ಸೀರಾಕ್ ಹೋಟೆಲ್ ಬಳಿಯೇ ತಾಜ್ ಗ್ರೂಪ್‌ನ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್ ಇದ್ದು, ಅದರಲ್ಲಿ ಒಂದು ಸಾವಿರ ರೂಮುಗಳ ಸೌಲಭ್ಯವಿದೆ. ಈಗ ಅದು ತನ್ನ ಪಕ್ಕದಲ್ಲೇ ಇರುವ ಸೀರಾಕ್‌ಗೂ ವಿಸ್ತರಿಸಿದಲಿದೆ. ಇದು ಸುಮಾರು 700ರಿಂದ 800 ಕೋಟಿ ರೂಪಾಯಿಗಳ ಒಪ್ಪಂದವಾಗಿದ್ದು, ಈ ವರ್ಷದ ಜನವರಿಯಿಂದಲೇ ತಾಂತ್ರಿಕ ಹಾಗೂ ವ್ಯವಸ್ಥಾಪನಾ ತಯಾರಿಗಳು ಆರಂಭವಾಗಿದ್ದವು. ಈಗ ಇದು ಅಧಿಕೃತಗೊಂಡಿದೆ.

1993ರ ಮುಂಬೈಯ ಸರಿಣಿ ಕಾರ್ ಬಾಂಬ್ ಸ್ಫೋಟದಲ್ಲಿ ಸೀರಾಕ್ ಹೋಟೆಲ್ ಬಹುತೇಕ ಹಾನಿಗೊಳಗಾಗಿತ್ತು. ಅಂದಿನಿಂದಲೇ ಈ ಹೋಟೆಲ್ ಕೆಲಸ ಮಾಡುವುದನ್ನು ನಿಲ್ಲಿಸಿತ್ತು. ನಂತರ 2005ರಲ್ಲಿ ಈ ಹೋಟೆಲನ್ನು 330 ಕೋಟಿ ರೂಪಾಯಿಗಳಿಗೆ ದೆಹಲಿ ಮೂಲದ ಉದ್ಯಮಿಯೊಬ್ಬರು ಖರೀದಿಸಿದ್ದರು. ನಂತರ ಸೀರಾಕ್ ಹೋಟೆಲ್ ಇದೀಗ ಮತ್ತೆ ಅಭಿವೃದ್ಧಿಪಡಿಸಲಾದರೂ, ಸರಿಯಾಗಿ ಹಿಂದಿನಂತೆ ಕಾರ್ಯ ನಡೆಸುತ್ತಿರಲಿಲ್ಲ. ತಾಜ್ ಗ್ರೂಪ್ ಇದೀಗ ಹಣ ಹೂಡಿಕೆ ಮಾಡಿ ಹೋಟೆಲನ್ನು ಮತ್ತೆ ವಿನ್ಯಾಸಗೊಳಿಸಲಿದೆ. ಆರು ಎಕರೆ ಭೂಮಿಯಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಸೀರಾಕ್ ಹೋಟೆಲ್ ಪ್ರಸಿದ್ಧ ಹೋಟೆಲ್‌ ಸರಣಿಗಳಲ್ಲಿ ಒಂದಾದ ಐಟಿಸಿ ಜತೆಗೆ ಒಪ್ಪಂದ ಮಾಡಿಕೊಂಡು ಸೀರಾಕ್ ಶೆರಟಾನ್ ಎಂದು ಇತ್ತೀಚೆಗಷ್ಟೆ ಹೆಸರು ಬದಲಾಯಿಸಿಕೊಂಡಿತ್ತು.

ವಿಶೇಷವೆಂದರೆ, 2005ರಲ್ಲೇ ಇದನ್ನು ಖರೀದಿಸಿದ ನಂತರ ಮಾರಲು ಯೋಚಿಸಿದ್ದಾಗ ತಾಜ್ ಗ್ರೂಪ್ ಖರೀದಿಸಲು ಇಚ್ಛೆಪಟ್ಟಿರಲಿಲ್ಲ. ಇದೀಗ ಅದೇ ಸೀರಾಕ್ ಮತ್ತೆ ತಾಜ್ ಗ್ರೂಪ್‌ಗೇ ಸೇರಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಂಪನಿಗಳಿಂದ ಉದ್ಯೋಗಿಗಳಿಗೆ ನ್ಯಾನೋ ಕಾರು ಕೊಡುಗೆ
ಹುಂಡೈ ಲಾಭ ಹಾಗೂ ಮಾರಾಟದಲ್ಲಿ ಕುಸಿತ
ರೂಪಾಯಿ ಮೌಲ್ಯ 9 ಪೈಸೆ ಕುಸಿತ
ಹಣಕಾಸು ವರ್ಷದ ಲಾಭ
12 ಪೈಲಟ್‌ಗಳು ಕತಾರ್‌ಗೆ
ಆರ್‌ಬಿಐ ನಿರ್ಣಯದಿಂದ ಎನ್‌ಬಿಎಫ್‌ಸಿಗಳು ಸಧ್ಯಕ್ಕೆ ನಿರಾಳ