ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಏರುತ್ತಲೇ ಇರುವ ಬೆಲೆಗಳು: ಹಣದುಬ್ಬರ ಅಲ್ಪ ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಏರುತ್ತಲೇ ಇರುವ ಬೆಲೆಗಳು: ಹಣದುಬ್ಬರ ಅಲ್ಪ ಏರಿಕೆ
ಏಪ್ರಿಲ್ 11ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ಹಣದುಬ್ಬರ ಪ್ರಮಾಣವು ಅಲ್ಪ ಏರಿಕೆ ಕಂಡು ಶೇ.0.26 ತಲುಪಿತು. ಆಹಾರ ಧಾನ್ಯಗಳು, ಮೊಟ್ಟೆ, ಉಪ್ಪು, ಮತ್ತು ಹಣ್ಣು-ತರಕಾರಿಗಳಂತಹ ಅಗತ್ಯ ವಸ್ತುಗಳ ಬೆಲೆಗಳು ಮಾತ್ರ ಏರುತ್ತಲೇ ಇರುವುದು ಜನಸಾಮಾನ್ಯರು ಈ ಹಣದುಬ್ಬರದ ಅಂಕಿ ಅಂಶದ ಬಗ್ಗೆ ಭರವಸೆ ಕಳೆದುಕೊಳ್ಳುವಂತೆ ಮಾಡಿದೆ.

ಸಗಟು ಬೆಲೆ ಆಧಾರಿತ ಹಣದುಬ್ಬರವು ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ಶೇ.7.95 ಇತ್ತು. ಅಂದು ಆವಶ್ಯಕ ವಸ್ತುಗಳ ಬೆಲೆಗಳು ಇಂದಿಗಿಂತ ಕಡಿಮೆ ಇದ್ದುದು ವಿಪರ್ಯಾಸ. ಮತ್ತು ಹಣದುಬ್ಬರ ಪ್ರಮಾಣ ಘೋಷಣೆಯ ಹಿಂದೆ ಓಟಿನ ವಾಸನೆ ಇದೆ ಎಂಬ ಬಗ್ಗೆ ಜನತೆಗೆ ಶಂಕೆ ಮೂಡುವಂತೆ ಮಾಡಿದೆ.

ವಾರ್ಷಿಕ ಸಾಲ ನೀತಿ ಪ್ರಕಟಿಸಿರುವ ರಿಸರ್ವ್ ಬ್ಯಾಂಕು, ಬಡ್ಡಿದರಗಳ ಕಡಿತ ಘೋಷಿಸಿದ್ದು, 3 ದಶಕಗಳಷ್ಟು ಕಡಿಮೆ ಮಟ್ಟದಲ್ಲಿರುವ ಹಣದುಬ್ಬರಕ್ಕೆ ಸಂಬಂಧಿಸಿದಂತೆ ಅದನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ.

ಆರ್‌ಬಿಐ ರೆಪೋ (ಸಾಲ) ಮತ್ತು ರಿವರ್ಸ್ ರೆಪೋ (ಖರೀದಿ) ದರಗಳನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಇಳಿಸಿ ಅನುಕ್ರಮವಾಗಿ ಶೇ.4.75 ಮತ್ತು ಶೇ.3.25ಕ್ಕೆ ನಿಗದಿಪಡಿಸಿತ್ತು.

ಉಲ್ಲೇಖಿತ ವಾರದಲ್ಲಿ, ಕಚ್ಚಾ ಆಹಾರದ ಬೆಲೆಯು ಶೇ.0.5ರಷ್ಟು ಏರಿಕೆ ಕಂಡಿದೆ. ಚಹಾ ಬೆಲೆ ಶೇ.5, ಸಜ್ಜೆಯ ಬೆಲೆ ಶೇ.3, ಹಣ್ಣು ಮತ್ತು ತರಕಾರಿಗಳ ಬೆಲೆ ಶೇ.2ರಷ್ಟು ಹಾಗೂ ಮಟನ್ ಮತ್ತು ಜೋಳದ ಬೆಲೆಗಳು ಶೇ.1ರಷ್ಟು ಏರಿಕೆ ಕಂಡಿದ್ದವು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಗ್ರರ ದಾಳಿಗೆ ನಲುಗಿದ್ದ ಸೀರಾಕ್ ಹೋಟೆಲ್ ತಾಜ್ ತೆಕ್ಕೆಗೆ
ಕಂಪನಿಗಳಿಂದ ಉದ್ಯೋಗಿಗಳಿಗೆ ನ್ಯಾನೋ ಕಾರು ಕೊಡುಗೆ
ಹುಂಡೈ ಲಾಭ ಹಾಗೂ ಮಾರಾಟದಲ್ಲಿ ಕುಸಿತ
ರೂಪಾಯಿ ಮೌಲ್ಯ 9 ಪೈಸೆ ಕುಸಿತ
ಹಣಕಾಸು ವರ್ಷದ ಲಾಭ
12 ಪೈಲಟ್‌ಗಳು ಕತಾರ್‌ಗೆ