ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
PTI
ಜಾಗತಿಕ ಶೇರುಪೇಟೆ ಹಾಗೂ ಏಷ್ಯಾ ಶೇರುಪೇಟೆಗಳ ಚೇತರಿಕೆಯಿಂದಾಗಿ ದೇಶಿಯ ಶೇರುಪೇಟೆಯಲ್ಲಿ ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳವಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 7 ಪೈಸೆ ಏರಿಕೆ ಕಂಡಿದೆ.

ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ 49.85 ರೂ.ಗಳಾಗಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 7 ಪೈಸೆ ಏರಿಕೆ ಕಂಡು 49.92/94 ರೂಪಾಯಿಗಳಿಗೆ ತಲುಪಿದೆ.

ದೇಶಿಯ ಶೇರುಪೇಟೆಯ ಚೇತರಿಕೆ ವಹಿವಾಟಿನಿಂದಾಗಿ ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳವಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಡಾಲರ್ ಎದುರಿಗೆ ದೇಶಿಯ ಕರೆನ್ಸಿ ರೂಪಾಯಿ ಚೇತರಿಸಿಕೊಂಡಿದೆ ಎಂದು ಫಾರೆಕ್ಸ್ ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.

ಗುರುವಾರದ ಮಾರುಕಟ್ಟೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 42 ಪೈಸೆ ಏರಿಕೆ ಕಂಡು ದಾಖಲೆ ಸ್ಥಾಪಿಸಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಪತ್ವಾ ಪ್ರಶಸ್ತಿ' ಏರ್ ಇಂಡಿಯಾಗೆ
ಹಣದುಬ್ಬರ ದರ ಶೇ.0.26ಕ್ಕೆ ಏರಿಕೆ
3ಜಿ: ಎರಿಕ್ಸನ್ ಜೊತೆ ಬಿಎಸ್ಸೆನ್ನೆಲ್ ಒಪ್ಪಂದ
ರಿಲಯನ್ಸ್ ಆದಾಯ ಕುಸಿತ, ಶೇರು ಬೆಲೆ ಏರಿಕೆ
ಅಭಿವೃದ್ಧಿ ದರ ಶೇ.6: ಆರ್‌ಬಿಐ
ಏರುತ್ತಲೇ ಇರುವ ಬೆಲೆಗಳು: ಹಣದುಬ್ಬರ ಅಲ್ಪ ಏರಿಕೆ