ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ 630.88 ಕೋಟಿ ನಿವ್ವಳ ಲಾಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ 630.88 ಕೋಟಿ ನಿವ್ವಳ ಲಾಭ
ದೇಶದ ಖಾಸಗಿ ಕ್ಷೇತ್ರದ ಪ್ರಮುಖ ಬ್ಯಾಂಕ್‌ ಎಚ್‌ಡಿಎಫ್‌ಸಿ, 2009 ಮಾರ್ಚ್ 31ಕ್ಕೆ ಅಂತ್ಯಗೊಂಡಂತೆ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ 630.88 ಕೋಟಿ ರೂಪಾಯಿ ನಿವ್ವಳ ಲಾಭಗಳಿಸಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಕಳೆದ ವರ್ಷದ ಆರ್ಥಿಕ ಸಾಲಿನಲ್ಲಿ ಬ್ಯಾಂಕ್ 471.11 ಕೋಟಿ ರೂಪಾಯಿಗಳ ನಿವ್ವಳ ಲಾಭಗಳಿಸಿತ್ತು. 2007-08ರ ಸಾಲಿನಲ್ಲಿ ಒಟ್ಟು 1590.18 ಕೋಟಿ ರೂಪಾಯಿ ನಿವ್ವಳ ಲಾಭಗಳಿಸಿತ್ತು.

ಜಾಗತಿಕ ಆರ್ಥಿಕ ಕುಸಿತದ ಸಂದರ್ಭದಲ್ಲಿ ಕೂಡಾ ಎಚ್‌ಡಿಎಫ್‌ಸಿ ಬ್ಯಾಂಕ್, ಚಿಲ್ಲರೆ ಮತ್ತು ಸಗಟು ವಹಿವಾಟಿನಲ್ಲಿ ಉತ್ತಮ ಕಾರ್ಯನಿರ್ವಹಿಸಿ ಲಾಭಾಂಶದಲ್ಲಿ ಹೆಚ್ಚಳವಾಗಿದೆ ಎಂದು ಬ್ಯಾಂಕ್‌ನ ಕಾರ್ಯಕಾರಿ ನಿರ್ದೇಶಕ ಪರೇಶ್ ಸುಖಾಂತ್‌ಕರ್ ಹೇಳಿದ್ದಾರೆ.

ಬ್ಯಾಂಕ್‌ನ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ನಿವ್ವಳ ಬಡ್ಡಿ ಆದಾಯ ದರ ಶೇ.4.2 ರಷ್ಟು ಏರಿಕೆಯಾಗಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಮೂಲಗಳು ತಿಳಿಸಿವೆ.

ಬ್ಯಾಂಕ್‌ನ ಶುಲ್ಕ ಮತ್ತು ಕಮಿಶನ್ ಆದಾಯದಲ್ಲಿ ಶೇ.45.8 ರಷ್ಟು ಹೆಚ್ಚಳವಾಗಿದ್ದು,490.4 ಕೋಟಿ ರೂಪಾಯಿಗಳಿಂದ 714.8 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದ್ದು, ಫಾರೆಕ್ಸ್ ಆದಾಯ, ಹೂಡಿಕೆ ಮಾರಾಟ ಮತ್ತಿತರ ಆದಾಯಗಳಲ್ಲಿ 60.4 ಕೋಟಿ ರೂಪಾಯಿಗಳಿಂದ 152.80 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಕಾರ್ಯಕಾರಿ ನಿರ್ದೇಶಕ ಪರೇಶ್ ಸುಖಾಂತ್‌ಕರ್ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವೃದ್ಧಿ ದರ ಶೇ.6ಕ್ಕೆ ತಲುಪುವ ವಿಶ್ವಾಸ : ಆರ್‌ಬಿಐ
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
'ಪತ್ವಾ ಪ್ರಶಸ್ತಿ' ಏರ್ ಇಂಡಿಯಾಗೆ
ಹಣದುಬ್ಬರ ದರ ಶೇ.0.26ಕ್ಕೆ ಏರಿಕೆ
3ಜಿ: ಎರಿಕ್ಸನ್ ಜೊತೆ ಬಿಎಸ್ಸೆನ್ನೆಲ್ ಒಪ್ಪಂದ
ರಿಲಯನ್ಸ್ ಆದಾಯ ಕುಸಿತ, ಶೇರು ಬೆಲೆ ಏರಿಕೆ