ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮೈಕ್ರೋಸಾಫ್ಟ್‌ ಉತ್ಪನ್ನಗಳ ಮಾರಾಟ ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೈಕ್ರೋಸಾಫ್ಟ್‌ ಉತ್ಪನ್ನಗಳ ಮಾರಾಟ ಕುಸಿತ
ಮೈಕ್ರೋಸಾಫ್ಟ್‌ ಕಂಪೆನಿ 23 ವರ್ಷಗಳ ನಂತರ ಪ್ರಥಮ ಬಾರಿಗೆ ತ್ರೈಮಾಸಿಕ ಆದಾಯದಲ್ಲಿ ಕುಸಿತ ಕಂಡಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಜಗತ್ತಿನ ಬೃಹತ್ ಸಾಫ್ಟ್‌ವೇರ್ ಸಂಸ್ಥೆಯಾದ ಮೈಕ್ರೋಸಾಫ್ಟ್ ಕಂಪೆನಿ ಲಾಭದತ್ತ ಸಾಗಲು ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಶೇರುಪೇಟೆಯಲ್ಲಿ ಶೇರು ದರಗಳು ಏರಿಕೆಯಾಗಿದ್ದರಿಂದ ಹೂಡಿಕೆದಾರರು ಹೆಚ್ಚಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಕಂಪೆನಿಯ ತ್ರೈಮಾಸಿಕ ಆದಾಯ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ.6 ರಷ್ಟು ಕುಸಿತವಾಗಿ 13.7 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.ಕಳೆದ ವರ್ಷದ ಆರ್ಥಿಕ ಸಾಲಿನಲ್ಲಿ 4.4 ಬಿಲಿಯನ್ ಡಾಲರ್ ನಿವ್ವಳ ಲಾಭಗಳಿಸಿದ್ದು, ಪ್ರಸಕ್ತ ವರ್ಷದ ನಿವ್ವಳ ಲಾಭದಲ್ಲಿ 3 ಬಿಲಿಯನ್ ಡಾಲರ್‌ಗಳಿಗೆ ಕುಸಿತವಾಗಿದೆ.

ಮೈಕ್ರೋಸಾಫ್ಟ್ ಕಂಪೆನಿಯ ಗ್ರಾಹಕರು ನೂತನ ಕಂಪ್ಯೂಟರ್ಸ್‌ಗಳ ಖರೀದಿಯಲ್ಲಿ ವಿಳಂಬ ಅಥವಾ ಖರೀದಿಯನ್ನು ರದ್ದುಗೊಳಿಸುತ್ತಿರುವುದು ಹಾಗೂ ಮೈಕ್ರೋಸಾಫ್ಟ್ ವಿಂಡೋಸ್ ಆಪರೇಟಿಂಗ್ ಸಿಸ್ಟಮ್‌ಗಳ ಮಾರಾಟದಲ್ಲಿ ಕುಸಿತದಿಂದಾಗಿ ಲಾಭಾಂಶದಲ್ಲಿ ಕುಸಿತವಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸಕ್ತ ತ್ರೈಮಾಸಿಕ ಅವಧಿಯಲ್ಲಿ ಮಾರುಕಟ್ಟೆಯ ವಹಿವಾಟು ದುರ್ಬಲವಾಗಿದ್ದು, ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸಿ ಕಂಪೆನಿಯನ್ನು ಲಾಭದತ್ತ ಮರಳಿಸುವ ಪ್ರಯತ್ನ ಮುಂದುವರಿದಿದೆ ಎಂದು ಮೈಕ್ರೋಸಾಫ್ಟ್‌ನ ಮುಖ್ಯ ಆರ್ಥಿಕ ವಿಭಾಗದ ಅಧಿಕಾರಿ ಕ್ರಿಸ್ ಲಿಡೆಲ್‌ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವೃದ್ಧಿ ದರ ಶೇ.6ಕ್ಕೆ ತಲುಪುವ ವಿಶ್ವಾಸ : ಆರ್‌ಬಿಐ
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
'ಪತ್ವಾ ಪ್ರಶಸ್ತಿ' ಏರ್ ಇಂಡಿಯಾಗೆ
ಹಣದುಬ್ಬರ ದರ ಶೇ.0.26ಕ್ಕೆ ಏರಿಕೆ
3ಜಿ: ಎರಿಕ್ಸನ್ ಜೊತೆ ಬಿಎಸ್ಸೆನ್ನೆಲ್ ಒಪ್ಪಂದ
ರಿಲಯನ್ಸ್ ಆದಾಯ ಕುಸಿತ, ಶೇರು ಬೆಲೆ ಏರಿಕೆ