ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಉನ್ನತ ಅಧಿಕಾರಿಗಳ ವೇತನ ಕಡಿತ:ಜೆಟ್ ಏರ್‌ವೇಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉನ್ನತ ಅಧಿಕಾರಿಗಳ ವೇತನ ಕಡಿತ:ಜೆಟ್ ಏರ್‌ವೇಸ್
PTI
ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆ ಹಾಗೂ ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ನರೇಶ್ ಗೋಯಲ್ ಸಂಚಾಲಿತ ಜೆಟ್ ಏರ್‌ವೇಸ್, ಮಾಸಿಕವಾಗಿ 75 ಸಾವಿರಕ್ಕಿಂತ ಹೆಚ್ಚಿನ ಸಂಬಳ ಪಡೆಯುವ ಉದ್ಯೋಗಿಗಳ ವೇತನದಲ್ಲಿ ಶೇ.25 ರಷ್ಟು ಕಡಿತಗೊಳಿಸಿದೆ ಎಂದು ಜೆಟ್‌ಏರ್‌ವೇಸ್ ಸಂಸ್ಥೆಯ ಮೂಲಗಳು ತಿಳಿಸಿವೆ.

ಜೆಟ್ ಏರ್‌ವೇಸ್ ಸಂಸ್ಥೆ ಆರ್ಥಿಕವಾಗಿ ಭಾರಿ ನಷ್ಟ ಅನುಭವಿಸುತ್ತಿರುವುದರಿಂದ ಮಾಸಿಕವಾಗಿ 75ಸಾವಿರಕ್ಕಿಂತ ಹೆಚ್ಚಿನ ಸಂಬಳ ಪಡೆಯುವ ಉದ್ಯೋಗಿಗಳ ವೇತನದಲ್ಲಿ ಶೇ.25 ರಷ್ಟು ಕಡಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಉದ್ಯೋಗಿಗಳ ವೇತನ ಕಡಿತ ತಾತ್ಕಾಲಿಕವಾಗಿದ್ದು, ಆರ್ಥಿಕ ಬಿಕ್ಕಟ್ಟು ಪರಿಹಾರವಾದ ನಂತರ ವೇತನವನ್ನು ಪರಿಷ್ಕರಿಸಲಾಗುವುದು ಎಂದು ಜೆಟ್ ವಕ್ತಾರರು ತಿಳಿಸಿದ್ದಾರೆ.

ಜೆಟ್ ಏರ್‌ವೇಸ್‌ ಸಂಸ್ಥೆ ಅಡಳಿತ ಮಂಡಳಿಯ ಸದಸ್ಯರುಗಳಿಗೆ ನೀಡಿದ ಹಲವು ಸವಲತ್ತುಗಳನ್ನು ಹಿಂಪಡೆದಿದ್ದು, ಉನ್ನತ ಅಧಿಕಾರಿಗಳ ವೇತನದಲ್ಲಿ ಶೇ.5 ರಿಂದ ಶೇ.25 ರವರಗೆ ವೇತನ ಕಡಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವೇತನ, ಜೆಟ್ ಏರ್ವೇಸ್, jet airways
ಮತ್ತಷ್ಟು
ಮೈಕ್ರೋಸಾಫ್ಟ್‌ ಉತ್ಪನ್ನಗಳ ಮಾರಾಟ ಕುಸಿತ
ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ 630.88 ಕೋಟಿ ನಿವ್ವಳ ಲಾಭ
ವೃದ್ಧಿ ದರ ಶೇ.6ಕ್ಕೆ ತಲುಪುವ ವಿಶ್ವಾಸ : ಆರ್‌ಬಿಐ
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
'ಪತ್ವಾ ಪ್ರಶಸ್ತಿ' ಏರ್ ಇಂಡಿಯಾಗೆ
ಹಣದುಬ್ಬರ ದರ ಶೇ.0.26ಕ್ಕೆ ಏರಿಕೆ