ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕಾರ್ಪೋರೇಶನ್ ಬ್ಯಾಂಕ್‌‌ಗೆ 260 ಕೋಟಿ ಲಾಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾರ್ಪೋರೇಶನ್ ಬ್ಯಾಂಕ್‌‌ಗೆ 260 ಕೋಟಿ ಲಾಭ
ಸಾರ್ವಜನಿಕ ಕ್ಷೇತ್ರದ ಪ್ರಮುಖ ಕಾರ್ಪೋರೇಶನ್ ಬ್ಯಾಂಕ್, 2009 ಮಾರ್ಚ್ 31ಕ್ಕೆ ಅಂತ್ಯಗೊಂಡಂತೆ ನಾಲ್ಕನೇ ತ್ರೈಮಾಸಿಕ ಅವಧಿಯ ನಿವ್ವಳ ಲಾಭದಲ್ಲಿ ಶೇ 26.18 ರಷ್ಟು ಏರಿಕೆಯಾಗಿ 260.49ಕೋಟಿ ರೂ.ಗಳಿಗೆ ತಲುಪಿದೆ.

ಕಳೆದ ವರ್ಷದ 2007-08ರ ಮಾರ್ಚ್ ತಿಂಗಳ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ 206.43 ಕೋಟಿ ರೂಪಾಯಿಗಳ ಲಾಭಗಳಿಸಿತ್ತು ಎಂದು ಕಾರ್ಪೋರೇಶನ್ ಬ್ಯಾಂಕ್ ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.

ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕ್‌ನ ಒಟ್ಟು ಆದಾಯ 2,199.64 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ವರ್ಷ ದಲ್ಲಿ ಒಟ್ಟು ಆದಾಯ 1,464.74 ಕೋಟಿ ರೂಪಾಯಿಗಳಾಗಿತ್ತು.

ಬ್ಯಾಂಕ್‌‌ನ 8 ರೂಪಾಯಿ ಮುಖಬೆಲೆಯ ಶೇರಿಗೆ 80 ರೂಪಾಯಿ ಡೆವಿಡೆಂಡ್ ಘೋಷಿಸಲಾಗಿದೆ ಎಂದು ಕಾರ್ಪೋರೇಶನ್ ಬ್ಯಾಂಕ್ ಮೂಲಗಳು ತಿಳಿಸಿವೆ.

2009 ಮಾರ್ಚ್ 31ಕ್ಕೆ ವರ್ಷಾಂತ್ಯಗೊಂಡಂತೆ ಕಾರ್ಪೋರೇಶನ್ ಬ್ಯಾಂಕ್, ನಿವ್ವಳ ಲಾಭದಲ್ಲಿ ಶೇ. 21.46ರಷ್ಟು ಏರಿಕೆಯಾಗಿ 892.76 ಕೋಟಿ ರೂಪಾಯಿಗಳ ನಿವ್ವಳ ಲಾಭಗಳಿಸಿದೆ. ಕಳೆದ ವರ್ಷಾಂತ್ಯದಲ್ಲಿ 734.98 ಕೋಟಿ ರೂಪಾಯಿ ಲಾಭಗಳಿಸಿತ್ತು.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬ್ಯಾಂಕ್‌ನ ನಿವ್ವಳ ಆದಾಯ 5,216.33 ಕೋಟಿ ರೂಪಾಯಿಗಳಿಂದ 7174.56 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಕಾರ್ಪೋರೇಶನ್ ಬ್ಯಾಂಕ್‌ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉನ್ನತ ಅಧಿಕಾರಿಗಳ ವೇತನ ಕಡಿತ:ಜೆಟ್ ಏರ್‌ವೇಸ್
ಮೈಕ್ರೋಸಾಫ್ಟ್‌ ಉತ್ಪನ್ನಗಳ ಮಾರಾಟ ಕುಸಿತ
ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ 630.88 ಕೋಟಿ ನಿವ್ವಳ ಲಾಭ
ವೃದ್ಧಿ ದರ ಶೇ.6ಕ್ಕೆ ತಲುಪುವ ವಿಶ್ವಾಸ : ಆರ್‌ಬಿಐ
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
'ಪತ್ವಾ ಪ್ರಶಸ್ತಿ' ಏರ್ ಇಂಡಿಯಾಗೆ