ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ನ್ಯಾನೋ ಗ್ರಾಹಕರಿಗೆ ಸ್ಥಿರ ಠೇವಣಿಗಿಂತಲೂ ಹೆಚ್ಚಿನ ಬಡ್ಡಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ್ಯಾನೋ ಗ್ರಾಹಕರಿಗೆ ಸ್ಥಿರ ಠೇವಣಿಗಿಂತಲೂ ಹೆಚ್ಚಿನ ಬಡ್ಡಿ
PTI
ಗ್ರಾಹಕರೇ. ನೀವು ಒಂದು ವೇಳೆ ನ್ಯಾನೋ ಬುಕ್ ಮಾಡಿದಲ್ಲಿ ಮತ್ತು ಡ್ರಾದಲ್ಲಿ ನೀವು ಆಯ್ಕೆಯಾಗದಿದ್ದಲ್ಲಿ ನಿಮ್ಮ ಹಣದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ನಿಮ್ಮ ಹಣಕ್ಕೆ ಬ್ಯಾಂಕ್‌ಗಳು ನೀಡುವ ಸ್ಥಿರ ಠೇವಣಿಗಿಂತಲೂ ಹೆಚ್ಚಿನ ಬಡ್ಡಿ ದರವನ್ನು ನೀಡಲು ಟಾಟಾ ಮೋಟಾರ್ಸ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೊ ಮತ್ತು ರಿವರ್ಸ್ ರೆಪೊ ದರಗಳನ್ನು ಕಡಿತಗೊಳಿಸಿದ್ದರಿಂದ ಬ್ಯಾಂಕ್‌ಗಳು ಬಡ್ಡಿ ದರವನ್ನು ಕಡಿತಗೊಳಿಸುತ್ತಿವೆ. ಸ್ಥಿರ ಠೇವಣಿಯ ಮೇಲೆ ನೀಡುತ್ತಿರುವ ಬಡ್ಡಿ ಇಳಿಕೆಯಾಗುತ್ತಿರುವ ಸಮಯದಲ್ಲಿ ಟಾಟಾ ಹೆಚ್ಚಿನ ಬಡ್ಡಿಯನ್ನು ನ್ಯಾನೋ ಗ್ರಾಹಕರಿಗೆ ನೀಡಲು ನಿರ್ಧರಿಸಿದೆ ಎಂದು ಟಾಟಾ ಮೋಟಾರ್ಸ್ ಮೂಲಗಳು ತಿಳಿಸಿವೆ

ನ್ಯಾನೋ ಬುಕ್ಕಿಂಗ್ ಏಪ್ರಿಲ್ 9 ರಿಂದ ಆರಂಭವಾಗಿದ್ದು ಏಪ್ರಿಲ್ 25ಕ್ಕೆ ಮುಕ್ತಾಯವಾಗಲಿದೆ. ಟಾಟಾ ಮೋಟಾರ್ಸ್ ಕಂಪೆನಿ ಬುಕ್ಕಿಂಗ್ ಮುಕ್ತಾಯವಾದ ಎರಡು ತಿಂಗಳ ನಂತರ ಮೊದಲ ಹಂತದಲ್ಲಿ ಕೇವಲ ಒಂದು ಲಕ್ಷ ನ್ಯಾನೋ ಕಾರುಗಳನ್ನು ಮಾತ್ರ ಗ್ರಾಹಕರಿಗೆ ನೀಡಲು ಸಾಧ್ಯವಾಗುತ್ತದೆ. ಮೊದಲ ಹಂತದಲ್ಲಿ ಕಾರುಗಳನ್ನು ಪಡೆಯಲು ಯಶಸ್ವಿಯಾಗದ ಗ್ರಾಹಕರಿಗೆ ಒಂದರಿಂದ ಎರಡು ವರ್ಷಗಳ ಅವಧಿಗೆ ಶೇ8.5 ರಷ್ಟು, ಎರಡು ವರ್ಷಕ್ಕಿಂತಲೂ ಹೆಚ್ಚಾದಲ್ಲಿ ಶೇ.8.75ರಷ್ಟು ಬಡ್ಡಿ ದರವನ್ನು ನೀಡಲಿದೆ ಎಂದು ಟಾಟಾ ಮೋಟಾರ್ಸ್ ಅಧಿಕಾರಿಗಳು ತಿಳಿಸಿದ್ದಾರೆ

ಇದೊಂದು ಉತ್ತಮ ಅವಕಾಶ. ಒಂದು ವೇಳೆ ನ್ಯಾನೋ ಗ್ರಾಹಕ ಮೊದಲ ಹಂತದ ಡ್ರಾ ದಲ್ಲಿ ಕಾರನ್ನು ಪಡೆಯಲು ವಿಫಲವಾದಲ್ಲಿ ಮುಂದಿನ ಆರರಿಂದ ಎಂಟು ತಿಂಗಳುಗಳವರೆಗಿನ ಅವಧಿಗೆ ಬ್ಯಾಂಕ್‌ಗಳು ಠೇವಣಿ ಹಣಕ್ಕೆ ನೀಡುವ ಬಡ್ಡಿಗಿಂತಲೂ ಹೆಚ್ಚಿನ ಬಡ್ಡಿಯನ್ನು ಟಾಟಾ ಮೋಟಾರ್ಸ್ ನೀಡುತ್ತಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭದಲ್ಲಿ ಕುಸಿತ
ಕಾರ್ಪೋರೇಶನ್ ಬ್ಯಾಂಕ್‌‌ಗೆ 260 ಕೋಟಿ ಲಾಭ
ಉನ್ನತ ಅಧಿಕಾರಿಗಳ ವೇತನ ಕಡಿತ:ಜೆಟ್ ಏರ್‌ವೇಸ್
ಮೈಕ್ರೋಸಾಫ್ಟ್‌ ಉತ್ಪನ್ನಗಳ ಮಾರಾಟ ಕುಸಿತ
ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ 630.88 ಕೋಟಿ ನಿವ್ವಳ ಲಾಭ
ವೃದ್ಧಿ ದರ ಶೇ.6ಕ್ಕೆ ತಲುಪುವ ವಿಶ್ವಾಸ : ಆರ್‌ಬಿಐ