ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮಾರುತಿ: ನಿವ್ವಳ ಲಾಭದಲ್ಲಿ ಶೇ.18 ರಷ್ಟು ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾರುತಿ: ನಿವ್ವಳ ಲಾಭದಲ್ಲಿ ಶೇ.18 ರಷ್ಟು ಕುಸಿತ
ಕಚ್ಚಾ ವಸ್ತುಗಳ ದರ ಹೆಚ್ಚಳ ಹಾಗೂ ವಿದೇಶಿ ವಿನಿಮಯ ಕುಸಿತದಿಂದಾಗಿ ದೇಶದ ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಝುಕಿ ನಾಲ್ಕನೇ ತ್ರೈಮಾಸಿಕದಲ್ಲಿ ಶೇ.18 ರಷ್ಟು ಕುಸಿತವಾಗಿ ನಿವ್ವಳ ಲಾಭ 243 ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ವಾಹನಗಳ ಮಾರಾಟದಲ್ಲಿ ಶೇ.17 ರಷ್ಟು ಹೆಚ್ಚಳವಾಗಿದ್ದು, ವಿದೇಶಿ ವಿನಿಮಯದಲ್ಲಿ ಏರಿಳಿಕೆ ಹಾಗೂ ಅಮುದು ತೆರಿಗೆ ಬಿಕ್ಕಟ್ಟಿನಿಂದಾಗಿ ನಷ್ಟ ಎದುರಾಗಿದೆ ಎಂದು ಮಾರುತಿ ಸುಝುಕಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಂಜೋ ನಕಾನಿಶಿ ಹೇಳಿದ್ದಾರೆ.

ಕಳೆದ 2007-08ರಲ್ಲಿ ಕಚ್ಚಾ ವಸ್ತುಗಳ ಖರೀದಿಗೆ 3694 ಕೋಟಿ ರೂಪಾಯಿಗಳನ್ನು ವ್ಯಯ ಮಾಡಲಾಗಿತ್ತು. ಪ್ರಸಕ್ತ ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಕಚ್ಚಾ ವಸ್ತುಗಳ ಖರೀದಿ ದರ 4738 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. 2009- 10ರ ಸಾಲಿನಲ್ಲಿ ಸಕಾರಾತ್ಮಕ ಬೆಳವಣಿಗೆಗಳಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

2007-08ರ ಆರ್ಥಿಕ ಸಾಲಿನ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಮಾರುತಿ ಕಾರುಗಳ ನಿವ್ವಳ ಮಾರಾಟ 4763ಕೋಟಿ ರೂ.ಗಳಾಗಿತ್ತು. 2008-09ರ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ನಿವ್ವಳ ಮಾರಾಟ 6308 ಕೋಟಿ ರೂ.ಗಳಾಗಿದ್ದು, ಶೇ.32ರಷ್ಟು ಹೆಚ್ಚಳವಾಗಿದೆ. ಕಂಪೆನಿಯ ನಿವ್ವಳ ಲಾಭ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ.30 ರಷ್ಟು ಕುಸಿತವಾಗಿ 1218 ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಶಿಂಜೋ ನಕಾನಿಶಿ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರ್‌ಬಿಐನಿಂದ ಶೀಘ್ರದಲ್ಲಿ ಹೊಸ ನೋಟುಗಳ ಬಿಡುಗಡೆ
ಕಾರ್ಪೋರೇಷನ್ ಬ್ಯಾಂಕ್ 260 ಕೋಟಿ ನಿವ್ವಳ ಲಾಭ
ಎಸ್‌ಬಿಎಂ ವ್ಯವಸ್ಥಾಪಕ ನಿರ್ದೇಶಕರಾಗಿ ದಿಲೀಪ್
ನ್ಯಾನೋ ಗ್ರಾಹಕರಿಗೆ ಸ್ಥಿರ ಠೇವಣಿಗಿಂತಲೂ ಹೆಚ್ಚಿನ ಬಡ್ಡಿ
ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭದಲ್ಲಿ ಕುಸಿತ
ಕಾರ್ಪೋರೇಶನ್ ಬ್ಯಾಂಕ್‌‌ಗೆ 260 ಕೋಟಿ ಲಾಭ