ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಇನ್ಫಿ, ವಿಪ್ರೋ ಕಚೇರಿಗಳಿಗೆ ವ್ಯಾಪಕ ಭಧ್ರತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇನ್ಫಿ, ವಿಪ್ರೋ ಕಚೇರಿಗಳಿಗೆ ವ್ಯಾಪಕ ಭಧ್ರತೆ
PTI
ಸಿಲಿಕಾನ್ ನಗರವಾದ ಬೆಂಗಳೂರಿನಲ್ಲಿರುವ ಮಾಹಿತಿ ತಂತ್ರಜ್ಞಾನ ದಿಗ್ಗಜ ಕಂಪೆನಿಗಳಾದ ಇನ್ಫೋಸಿಸ್ ಮತ್ತು ವಿಪ್ರೋ ಹಾಗೂ ಗುಜರಾತ್‌ನಲ್ಲಿರುವ ರಿಲಯನ್ಸ್ ರಿಫೈನರಿ ಘಟಕಕ್ಕೆ ಕೇಂದ್ರ ಕೈಗಾರಿಕೆ ಭಧ್ರತೆಯನ್ನು ಒದಗಿಸಲು ಕೇಂದ್ರ ಸರಕಾರದ ಗೃಹ ಸಚಿವಾಲಯ ಸಮ್ಮತಿ ಸೂಚಿಸಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

ಪಾಕಿಸ್ತಾನದಲ್ಲಿ ನೆಲೆಸಿರುವ ಉಗ್ರರು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳ ಕಚೇರಿಗಳ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿವೆ ಎನ್ನುವ ಗುಪ್ತಟಚರ ವರದಿಗಳ ಆಧಾರದ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಸರಕಾರ ಆದೇಶಿಸಿದೆ.

ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಇನ್ಫೋಸಿಸ್ ಹಾಗೂ ವಿಪ್ರೋದ ಕೇಂದ್ರ ಕಚೇರಿ ಮತ್ತು ಇತರ ಐಟಿ ಕಂಪೆನಿಗಳ ಕಚೇರಿಗಳಿಗೆ ವ್ಯಾಪಕ ಭದ್ರತೆಯನ್ನು ಒದಗಿಸಲಾಗಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

ಗುಜರಾತ್‌ನ ಜಾಮ್‌ನಗರದಲ್ಲಿರುವ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ರಿಫೈನರಿ ಘಟಕಕ್ಕೆ ಕೈಗಾರಿಕೆ ಭಧ್ರತಾ ಪಡೆಗಳನ್ನು ಆಯೋಜಿಸಲು ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ಮುಂಬೈ ಮಾದರಿಯ ದಾಳಿ ನಡೆಯುವ ಸಾಧ್ಯತೆಗಳಿವೆ ಎಂದು ಕೇಂದ್ರ ಗುಪ್ತಚರ ಪಡೆಗಳು ಎಚ್ಚರಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾರುತಿ: ನಿವ್ವಳ ಲಾಭದಲ್ಲಿ ಶೇ.18 ರಷ್ಟು ಕುಸಿತ
ಆರ್‌ಬಿಐನಿಂದ ಶೀಘ್ರದಲ್ಲಿ ಹೊಸ ನೋಟುಗಳ ಬಿಡುಗಡೆ
ಕಾರ್ಪೋರೇಷನ್ ಬ್ಯಾಂಕ್ 260 ಕೋಟಿ ನಿವ್ವಳ ಲಾಭ
ಎಸ್‌ಬಿಎಂ ವ್ಯವಸ್ಥಾಪಕ ನಿರ್ದೇಶಕರಾಗಿ ದಿಲೀಪ್
ನ್ಯಾನೋ ಗ್ರಾಹಕರಿಗೆ ಸ್ಥಿರ ಠೇವಣಿಗಿಂತಲೂ ಹೆಚ್ಚಿನ ಬಡ್ಡಿ
ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭದಲ್ಲಿ ಕುಸಿತ