ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮತ್ತಷ್ಟು ಬಡ್ಡಿ ದರ ಇಳಿಕೆಗೆ ಬ್ಯಾಂಕ್‌ಗಳು ಸಮ್ಮತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮತ್ತಷ್ಟು ಬಡ್ಡಿ ದರ ಇಳಿಕೆಗೆ ಬ್ಯಾಂಕ್‌ಗಳು ಸಮ್ಮತಿ
ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ಮತ್ತು ರಿವರ್ಸ್ ರೆಪೊ ದರಗಳನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿರುವುದರಿಂದ ಗೃಹ ಸಾಲ, ವಾಹನ ಸಾಲ, ಕಂಪೆನಿ ಸಾಲ ಮತ್ತು ವ್ಯಯಕ್ತಿಕ ಸಾಲಗಳ ಮೇಲಿ ಬಡ್ಡಿ ದರವನ್ನು ಕಡಿತಗೊಳಿಸುವುದಾಗಿ ಪ್ರಮುಖ ಬ್ಯಾಂಕ್‌ಗಳ ಮುಖ್ಯಸ್ಥರು ಸಮ್ಮತಿ ಸೂಚಿಸಿದ್ದಾರೆ.

ಜಾಗತಿಕ ಆರ್ಥಿಕ ಕುಸಿತದಿಂದಾಗಿ ವ್ಯಾಪಾರ ವಹಿವಾಟು ಕುಂಠಿತಗೊಂಡಿದ್ದರಿಂದ ಪ್ರಸಕ್ತ ಸ್ಥಿತಿಯಲ್ಲಿ ಕೇಂದ್ರ ರಿಸರ್ವ್ ಬ್ಯಾಂಕ್ ಮತ್ತಷ್ಟು ಬೇಸಿಸ್ ಪಾಯಿಂಟ್‌ಗಳನ್ನು ಕಡಿತಗೊಳಿಸುವ ಅಗತ್ಯವಿತ್ತು ಎಂದು ಬ್ಯಾಂಕ್‌ಗಳ ಮುಖ್ಯಸ್ಥರು ಹೇಳಿಕೆ ನೀಡಿದ್ದಾರೆ.

ಪ್ರಸ್ತುತ ಸ್ಥಿತಿಯಲ್ಲಿ ಸಾಲದ ಮೇಲಿನ ಬಡ್ಡಿ ದರ ಗರಿಷ್ಠ ಪ್ರಮಾಣದಲ್ಲಿದ್ದು, ರೆಪೊ ಮತ್ತು ರಿವರ್ಸ್ ರೆಪೊದರಗಳಲ್ಲಿ 50 ರಷ್ಟು ಬೇಸಿಸ್ ಪಾಯಿಂಟ್‌ಗೊಳಿಸಿದಲ್ಲಿ ಉತ್ತಮವಾಗುತ್ತಿತ್ತು ಎಂದು ಭಾರತೀಯ ಕೈಗಾರಿಕೆ ಒಕ್ಕೂಟದ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಬ್ಯಾನರ್ಜಿ ತಿಳಿಸಿದ್ದಾರೆ.

ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ರಿಸರ್ವ್ ಬ್ಯಾಂಕ್ ನಿಗಾವಹಿಸಿದ್ದು, ಬ್ಯಾಂಕ್ ದರಗಳನ್ನು ಕಡಿತ ಮಾಡಿ ಬ್ಯಾಂಕ್‌ಗಳಿಗೆ ಹಾಗೂ ಹಣಕಾಸು ವ್ಯವಸ್ಥೆಗೆ ಮತ್ತಷ್ಟು ಕಡಿತಗೊಳಿಸುವ ಸಂದೇಶ ರವಾನಿಸಿದೆ ಎಂದು ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಶೋಕ್ ಚಾವ್ಲಾ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇನ್ಫಿ, ವಿಪ್ರೋ ಕಚೇರಿಗಳಿಗೆ ವ್ಯಾಪಕ ಭಧ್ರತೆ
ಮಾರುತಿ: ನಿವ್ವಳ ಲಾಭದಲ್ಲಿ ಶೇ.18 ರಷ್ಟು ಕುಸಿತ
ಆರ್‌ಬಿಐನಿಂದ ಶೀಘ್ರದಲ್ಲಿ ಹೊಸ ನೋಟುಗಳ ಬಿಡುಗಡೆ
ಕಾರ್ಪೋರೇಷನ್ ಬ್ಯಾಂಕ್ 260 ಕೋಟಿ ನಿವ್ವಳ ಲಾಭ
ಎಸ್‌ಬಿಎಂ ವ್ಯವಸ್ಥಾಪಕ ನಿರ್ದೇಶಕರಾಗಿ ದಿಲೀಪ್
ನ್ಯಾನೋ ಗ್ರಾಹಕರಿಗೆ ಸ್ಥಿರ ಠೇವಣಿಗಿಂತಲೂ ಹೆಚ್ಚಿನ ಬಡ್ಡಿ