ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 100 ದಿನಗಳಲ್ಲಿ ಆರ್ಥಿಕತೆ ಪರಿಷ್ಕರಣೆ:ಪ್ರಧಾನಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
100 ದಿನಗಳಲ್ಲಿ ಆರ್ಥಿಕತೆ ಪರಿಷ್ಕರಣೆ:ಪ್ರಧಾನಿ
PTI
ಕೇಂದ್ರದಲ್ಲಿ ಯುಪಿಎ ಸರಕಾರ ಮರಳಿ ಅಧಿಕಾರಕ್ಕೆ ಬಂದಲ್ಲಿ 100 ದಿನಗಳೊಳಗಾಗಿ ಉತ್ತೇಜನ ಪ್ಯಾಕೇಜ್‌ಗಳನ್ನು ಘೋಷಿಸಿ ಉದ್ಯೋಗ ನಷ್ಟವನ್ನು ತಡೆದು ಆರ್ಥಿಕತೆಯನ್ನು ಪರಿಷ್ಕರಿಸಲಾಗುವುದು ಎಂದು ಖ್ಯಾತ ಆರ್ಥಿಕ ತಜ್ಞರಾದ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

ದೇಶದ ವೃದ್ಧಿ ದರವನ್ನು ಶೇ.9 ರಿಂದ ಶೇ.10ಕ್ಕೆ ತಲುಪಿಸುವ ನಿಟ್ಟಿನಲ್ಲಿ ಉತ್ತೇಜನ ಪ್ಯಾಕೇಜ್‌‌ಗಳನ್ನು ಘೋಷಿಸುವುದರಿಂದ ಆರ್ಥಿಕತೆಯನ್ನು ಸುಸ್ಥಿತಿಗೆ ತರಬಹುದಾಗಿದೆ ಎಂದು ಹೇಳಿದ್ದಾರೆ.

ಶೀಘ್ರದಲ್ಲಿ ಆರ್ಥಿಕತೆಯನ್ನು ಮರಳಿ ಸುಸ್ಥಿತಿಗೆ ಬಂದು ಸಿಮೆಂಟ್ ,ಜವಳಿ, ಕಟ್ಟಡ ನಿರ್ಮಾಣ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ನೂತನ ಉದ್ಯೋಗಗಳ ಸೃಷ್ಟಿಯಾಗುವ ಬಗ್ಗೆ ಆಶಾಭಾವನೆಗಳನ್ನು ಹೊಂದಿರುವುದಾಗಿ ಪ್ರಧಾನಿ ತಿಳಿಸಿದ್ದಾರೆ.

100 ದಿನಗಳ ಕಾರ್ಯವ್ಯಾಪ್ತಿಯಲ್ಲಿ ಕಪ್ಪುಹಣವನ್ನು ಸ್ವಿಸ್ ಬ್ಯಾಂಕ್‌ನಿಂದ ಮರಳಿ ಸ್ವದೇಶಕ್ಕೆ ತರಲು ಅಗತ್ಯವಾಗಿರುವ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಬಿಜೆಪಿ ನಾಯಕ ಅಡ್ವಾಣಿಯವರ ಹೇಳಿಕೆಯನ್ನು ತಳ್ಳಿಹಾಕುವುದಿಲ್ಲ.ಆದರೆ ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪುಹಣದ ಮೊತ್ತದ ಬಗ್ಗೆ ಸಂಪೂರ್ಣ ವಿವರಗಳ ಬಗ್ಗೆ ಮಾಹಿತಿಯಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮತ್ತಷ್ಟು ಬಡ್ಡಿ ದರ ಇಳಿಕೆಗೆ ಬ್ಯಾಂಕ್‌ಗಳು ಸಮ್ಮತಿ
ಇನ್ಫಿ, ವಿಪ್ರೋ ಕಚೇರಿಗಳಿಗೆ ವ್ಯಾಪಕ ಭಧ್ರತೆ
ಮಾರುತಿ: ನಿವ್ವಳ ಲಾಭದಲ್ಲಿ ಶೇ.18 ರಷ್ಟು ಕುಸಿತ
ಆರ್‌ಬಿಐನಿಂದ ಶೀಘ್ರದಲ್ಲಿ ಹೊಸ ನೋಟುಗಳ ಬಿಡುಗಡೆ
ಕಾರ್ಪೋರೇಷನ್ ಬ್ಯಾಂಕ್ 260 ಕೋಟಿ ನಿವ್ವಳ ಲಾಭ
ಎಸ್‌ಬಿಎಂ ವ್ಯವಸ್ಥಾಪಕ ನಿರ್ದೇಶಕರಾಗಿ ದಿಲೀಪ್