ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಐಸಿಐಸಿಐ ಬ್ಯಾಂಕ್ ಲಾಭಾಂಶದಲ್ಲಿ ಶೇ.35 ರಷ್ಟು ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಸಿಐಸಿಐ ಬ್ಯಾಂಕ್ ಲಾಭಾಂಶದಲ್ಲಿ ಶೇ.35 ರಷ್ಟು ಕುಸಿತ
ಸಾಲ ಮರುಪಾವತಿ ಕೊರತೆ ಹಾಗೂ ನಿಧಾನಗತಿಯ ಆರ್ಥಿಕತೆಯಿಂದಾಗಿ ನಾಲ್ಕನೇ ತ್ರೈಮಾಸಿಕದಲ್ಲಿ ಶೇ.35.3 ರಷ್ಟು ಲಾಭಾಂಶದಲ್ಲಿ ಕುಸಿತ ಕಂಡಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ನ್ಯೂಯಾರ್ಕ್ ಶೇರುಪೇಟೆ ನೊಂದಾಯಿತ ಐಸಿಐಸಿಐ ಬ್ಯಾಂಕ್, ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ 11.5 ಬಿಲಿಯನ್ ನಿವ್ವಳ ಆದಾಯಗಳಿಸಿದ್ದು ಪ್ರಸಕ್ತ ವರ್ಷ ನಿವ್ವಳ ಲಾಭದಲ್ಲಿ ಕುಸಿತವಾಗಿ 7.44 ಬಿಲಿಯನ್‌ ಡಾಲರ್‌ಗಳಿಗೆ ತಲುಪಿದೆ.

ಸಮೀಕ್ಷಾ ಸಂಸ್ಥೆಗಳು ಹಾಗೂ ಆರ್ಥಿಕ ತಜ್ಞರು, ಐಸಿಐಸಿಐ ಬ್ಯಾಂಕ್ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಅಂದಾಜು 7.7 ಬಿಲಿಯನ್ ಡಾಲರ್ ಕುಸಿತ ಕಾಣುವ ಸಾಧ್ಯತೆಗಳಿವೆ ಎಂದು ಸಮೀಕ್ಷಾ ವರದಿಯಲ್ಲಿ ಬಹಿರಂಗಪಡಿಸಿದ್ದರು.

2007-08ರ ಆರ್ಥಿಕ ಸಾಲಿನಲ್ಲಿ 103.91 ಬಿಲಿಯನ್ ರೂಪಾಯಿಗಳ ಒಟ್ಟು ಆದಾಯ ಗಳಿಸಿದ್ದು, ಪ್ರಸಕ್ತ ವರ್ಷದ ನಿವ್ವಳ ಆದಾಯ 92.03 ಬಿಲಿಯನ್ ರೂಪಾಯಿಗಳಿಗೆ ಕುಸಿತವಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

ನ್ಯೂಯಾರ್ಕ್ ಶೇರುಪೇಟೆಯಲ್ಲಿ ಐಸಿಐಸಿಐ ಬ್ಯಾಂಕ್ ಶೇರುಗಳು ಹಿಂದಿನ ವರ್ಷದಲ್ಲಿ 9.4 ಬಿಲಿಯನ್ ಡಾಲರ್ ಬೆಲೆಬಾಳುತ್ತಿದ್ದು, ಪ್ರಸಕ್ತ ವರ್ಷದಲ್ಲಿ ಶೇ.17 ರಷ್ಟು ಇಳಿಕೆಯಾಗಿ 3.5ಬಿಲಿಯನ್ ಡಾಲರ್‌ಗಳಿಗೆ ಕುಸಿತ ಕಂಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶೇರು ಬೆಲೆ ಆಧಾರವಾಗಿ ಡೆವಿಡೆಂಡ್ ಘೋಷಣೆ:ಸೆಬಿ
100 ದಿನಗಳಲ್ಲಿ ಆರ್ಥಿಕತೆ ಪರಿಷ್ಕರಣೆ:ಪ್ರಧಾನಿ
ಮತ್ತಷ್ಟು ಬಡ್ಡಿ ದರ ಇಳಿಕೆಗೆ ಬ್ಯಾಂಕ್‌ಗಳು ಸಮ್ಮತಿ
ಇನ್ಫಿ, ವಿಪ್ರೋ ಕಚೇರಿಗಳಿಗೆ ವ್ಯಾಪಕ ಭಧ್ರತೆ
ಮಾರುತಿ: ನಿವ್ವಳ ಲಾಭದಲ್ಲಿ ಶೇ.18 ರಷ್ಟು ಕುಸಿತ
ಆರ್‌ಬಿಐನಿಂದ ಶೀಘ್ರದಲ್ಲಿ ಹೊಸ ನೋಟುಗಳ ಬಿಡುಗಡೆ