ಅನಿವಾಸಿ ಭಾರತೀಯ ಉಕ್ಕು ಸಾಮ್ರಾಜ್ಯದ ಅಧಿಪತಿ ಲಕ್ಷ್ಮಿ ಮಿತ್ತಲ್, ಜಾಗತಿಕ ಆರ್ಥಿಕ ಕುಸಿತದಿಂದಾಗಿ ಕೇವಲ ಒಂದು ವರ್ಷದ ಅವಧಿಯಲ್ಲಿ 23.5 ಬಿಲಿಯನ್ ಪೌಂಡ್ಸ್ ನಷ್ಟ ಅನುಭವಿಸಿದ್ದಾರೆ ಎಂದು ಡೈಲಿ ಟೆಲಿಗ್ರಾಫ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸಂಡೇ ಟೈಮ್ಸ್ ರಿಚ್ ಲಿಸ್ಟ್ ಎನ್ನುವ ಶಿರೋನಾಮೆಯಡಿಯಲ್ಲಿ ಇಂಗ್ಲೆಂಡಿನ ಶ್ರೀಮಂತ ವ್ಯಕ್ತಿ ಮಿತ್ತಲ್ ಸಂಪತ್ತು 33 ಬಿಲಿಯನ್ ಪೌಂಡ್ಗಳಿಂದ 9.5 ಮಿಲಿಯನ್ ಪೌಂಡ್ಗಳಿಗೆ ಇಳಿಕೆಯಾಗಿದೆ ಎಂದು ಡೈಲಿ ಟೆಲಿಗ್ರಾಫ್ ಪ್ರಕಟಿಸಿದೆ.ದೇಶದ 1ಸಾವಿರ ಶ್ರೀಮಂತ ಉದ್ಯಮಿಗಳ ಅರ್ಧದಷ್ಟು ಸಂಪತ್ತು ಜಾಗತಿಕ ಆರ್ಥಿಕ ಕುಸಿತದಿಂದ ಕರಗಿಹೋಗಿ 412 ಬಿಲಿಯನ್ ಪೌಂಡ್ಸ್ಗಳಿಂದ 200 ಬಿಲಿಯನ್ ಪೌಂಡ್ಸ್ಗಳಿಗೆ ಇಳಿಕೆಯಾಗಿದೆ ಎಂದು ವಿವಿರಣೆ ನೀಡಿದೆ.ಮಿತ್ತಲ್ ನಂತರ ಟೆಲ್ಸಿಯಾ ಫುಟ್ಬಾಲ್ ಕ್ಲಬ್ ಮಾಲೀಕ ರೊಮನ್ಸ್ ಅಬ್ರಾಂವಿಚ್ ಅವರ ಸಂಪತ್ತು 15 ಬಿಲಿಯನ್ ಡಾಲರ್ಗಳಿಂದ 9.6 ಬಿಲಿಯನ್ ಪೌಂಡ್ಸ್ಗಳಿಗೆ ಕುಸಿತವಾಗಿದೆ.ಪಾಪ್ ಗಾಯಕ ಸರ್ ಎಲ್ಟಾನ್ ಜಾನ್ ಅವರೂ ಕೂಡಾ ಆರ್ಥಿಕ ಕುಸಿತ ಹೊಡೆತಕ್ಕೆ ತತ್ತರಿಸಿದ್ದು ಅವರ ಸಂಪತ್ತು 238 ಮಿಲಿಯನ್ ಪೌಂಡ್ಸ್ಗಳಿಂದ 175 ಮಿಲಿಯನ್ ಪೌಂಡ್ಸ್ಗಳಿಗೆ ಕುಸಿತವಾಗಿದೆ. |