ದೇಶಿಯ ಕಿಂಗ್ಫಿಶರ್ ಏರ್ಲೈನ್ಸ್ ಮೇ 15ರಿಂದ ಕೋಲ್ಕತಾ-ಢಾಕಾ ನಡುವೆ ನೂತನ ವಿಮಾನ ಸಂಚಾರ ಆರಂಭಿಸಲಿದೆ ಎಂದು ಏರ್ಲೈನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೇ 15ರಿಂದ ಕೋಲ್ಕತಾದಿಂದ ಢಾಕಾಕ್ಕೆ ಪ್ರಥಮ ವಿಮಾನ ಸಂಚಾರ ಆರಂಭಿಸುತ್ತಿರುವುದಾಗಿ ಕಿಂಗ್ ಫಿಶರ್ ಏರ್ಲೈನ್ಸ್ ವಕ್ತಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಮದ್ಯದ ದೊರೆ ವಿಜಯ್ ಮಲ್ಯ ಒಡೆತನದ ಕಿಂಗ್ ಫಿಶರ್ ಏರ್ಲೈನ್ಸ್ ಈಗಾಗಲೇ ಲಂಡನ್ ಮತ್ತು ಕೊಲಂಬೊ ನಡುವೆ ವಿಮಾನ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದು, ಇದೀಗ ಶ್ರೀಲಂಕಾ ಸರ್ಕಾರ 13ಅಂತಾರಾಷ್ಟ್ರೀಯ ಮಾರ್ಗವಾಗಿ ವಿಮಾನ ಸಂಚರಿಸಲು ಅನುಮತಿಯನ್ನು ನೀಡಿರುವುದಾಗಿ ಕಿಂಗ್ ಫಿಶರ್ ಹೇಳಿದೆ.
ಎಟಿಆರ್ 72-500(60 ಆಸನವುಳ್ಳ ವಿಮಾನ) ಕಿಂಗ್ ಫಿಶರ್ ಏರ್ಲೈನ್ಸ್ ಕೋಲ್ಕತಾದಿಂದ ಢಾಕಾಕ್ಕೆ ಪ್ರತಿದಿನ ಸಂಚರಿಸಲಿದೆ ಎಂದು ವಿವರಿಸಿದೆ. ಐಟಿ-73 ಮಧ್ನಾಹ್ನ 2.45ಕ್ಕೆ(ಸ್ಥಳೀಯ ಸಮಯ) ಕೋಲ್ಕತಾದಿಂದ ಹೊರಟು, 4-15ಕ್ಕೆ ಶ್ರೀಲಂಕಾಕ್ಕೆ ತಲುಪಲಿದೆ. ಶ್ರೀಲಂಕಾದಿಂದ ವಾಪಸು ಬರಲು ಢಾಕಾದಿಂದ 5ಗಂಟೆಯ ಹೊರಡುವ ಕಿಂಗ್ ಫಿಶರ್ 5.30ಕ್ಕೆ ಕೋಲ್ಕತಾ ವಿಮಾನ ನಿಲ್ದಾಣಕ್ಕೆ ತಲುಪಲಿದೆ. |