ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಶೈಕ್ಷಣಿಕ ಸಾಲದ ಬಡ್ಡಿ ದರ ಕಡಿತ:ಎಸ್‌ಬಿಐ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೈಕ್ಷಣಿಕ ಸಾಲದ ಬಡ್ಡಿ ದರ ಕಡಿತ:ಎಸ್‌ಬಿಐ
PTI
ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪ್ರಸಕ್ತ ವಾರದಲ್ಲಿ ವಿದ್ಯಾರ್ಥಿಗಳಿಗೆ ಸಾಲದ ಬಡ್ಡಿ ದರದಲ್ಲಿ ಶೇ.0.25 ರಷ್ಟು ಕಡಿತಗೊಳಿಸುವ ಯೋಜನೆಯ ರೂಪಿಸಲಾಗುತ್ತಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಮೇ 1 ರಿಂದ ಸೆಪ್ಟೆಂಬರ್ 30 ವರೆಗೆ ಶೈಕ್ಷಣಿಕ ಸಾಲ ಪಡೆಯುವ ವಿದ್ಯಾರ್ಥಿಗಳಿಗಾಗಿ ಎಸ್‌ಬಿಐ ಬ್ಯಾಂಕ್, ಪ್ರಸ್ತುತ ವಾರದಲ್ಲಿ ಶೇ.0.25 ರಷ್ಟು ಬಡ್ಡಿ ದರ ಕಡಿತ ಘೋಷಣೆ ಅನ್ವಯವಾಗುತ್ತದೆ ಎಂದು ಎಸ್‌ಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಆರ್ಥಿಕ ಕೊರತೆಯಿಂದ ಬಳಲುತ್ತಿರುವ ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಸಹಾಯಕವಾಗುವ ನಿಟ್ಟಿನಲ್ಲಿ ಸಾಲದ ಮೇಲಿನ ಬಡ್ಡಿ ದರದಲ್ಲಿ ಶೇ.0.25 ರಷ್ಟು ಕಡಿತಗೊಳಿಸಲಾಗಿದೆ. ಮೇ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳವರೆಗಿನ ಅವಧಿಯಲ್ಲಿ ಸಾಲ ಪಡೆಯುವ ವಿದ್ಯಾರ್ಥಿಗಳಿಗೆ ಬಡ್ಡಿ ದರ ಕಡಿತ ಅನ್ವಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ, ಪ್ರಸ್ತುತ ಅವಧಿಯಲ್ಲಿ ಶೈಕ್ಷಣಿಕ ಸಾಲಕ್ಕಾಗಿ ಶೇ.11.75 ರಿಂದ ಶೇ.13.25ವರೆಗೆ ಬಡ್ಡಿ ದರವನ್ನು ವಿಧಿಸುತ್ತದೆ. ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿಗಳಿಗಿಂತ ಶೇ.0.5 ರಷ್ಟು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತದೆ.

ವಿದ್ಯಾರ್ಥಿಗಳು ಶೈಕ್ಷಣಿಕ ಸಾಲಕ್ಕಾಗಿ ಪಡೆಯುವ 4 ಲಕ್ಷದವರೆಗಿನ ಸಾಲಕ್ಕೆ ಜಾಮೀನು ಅಗತ್ಯವಿಲ್ಲ. ಆದರೆ 4 ಲಕ್ಷದಿಂದ 7 ಲಕ್ಷದವರೆಗಿನ ಸಾಲಕ್ಕೆ ಮೂರನೇಯವರ ಜಾಮೀನು ಅಗತ್ಯವಿದೆ. 7.5 ಲಕ್ಷದಿಂದ 20 ಲಕ್ಷದವರೆಗಿನ ಸಾಲಕ್ಕೆ ಆಸ್ತಿಯನ್ನು ತೋರಿಸಬೇಕಾಗುತ್ತಿದ್ದು, ಸಾಲದ ಮರುಪಾವತಿ ಅವಧಿ 5 ರಿಂದ 7 ವರ್ಷದವರೆಗಿರುತ್ತದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ
ಸಕ್ಕರೆ ಬೆಲೆ ಏರಿಕೆ
ಟಿಸಿಎಸ್: ವೆಚ್ಚ ಕಡಿತಕ್ಕೆ ಸಿಬ್ಬಂದಿಗಳು ಭಾರತಕ್ಕೆ?
ಮೇ 15: ಕೋಲ್ಕತಾ-ಢಾಕಾಕ್ಕೆ 'ಕಿಂಗ್‌‌ಫಿಶರ್' ಸಂಚಾರ
ಸತ್ಯಂ ರಾಜು ಜಾಮೀನು ಕೋರಿಕೆ ನಕಾರ
ಅನಿಲ್ ಅಂಬಾನಿ ಕಾಪ್ಟರ್ ವಿಧ್ವಂಸ ತನಿಖೆ