ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಇನ್ಫೋಸಿಸ್‌ ಹಿರಿಯ ಅಧಿಕಾರಿಗಳ ವೇತನದಲ್ಲಿ ಭಾರಿ ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇನ್ಫೋಸಿಸ್‌ ಹಿರಿಯ ಅಧಿಕಾರಿಗಳ ವೇತನದಲ್ಲಿ ಭಾರಿ ಏರಿಕೆ
PTI
ದೇಶದ ಸಾಫ್ಟ್‌ವೇರ್ ಕ್ಷೇತ್ರದ ದಿಗ್ಗಜ ಕಂಪೆನಿಯಾದ ಇನ್ಫೋಸಿಸ್, ಅಡಳಿತ ಮಂಡಳಿಯ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳಿಗೆ ಕಳೆದ ಆರ್ಥಿಕ ಸಾಲಿನ ವೇತನದಲ್ಲಿ ಒಟ್ಟು 10 ಕೋಟಿ ರೂಪಾಯಿಗಳಿಗೂ ಅಧಿಕ ಏರಿಕೆ ಮಾಡಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿ ವಿ.ಬಾಲಕೃಷ್ಣನ್ ಅವರು 1.73 ಕೋಟಿ ರೂ.ಗಳ ಹೆಚ್ಚಿನ ವೇತನ ಏರಿಕೆ ಪಡೆದು ಮುಂಚೂಣಿಯಲ್ಲಿದ್ದಾರೆ.

ದೇಶದ ಎರಡನೇ ಬೃಹತ್ ಸಾಫ್ಟ್‌ವೇರ್ ಸಂಸ್ಥೆಯ ಮುಖ್ಯಸ್ಥ ನಾರಾಯಣ್ ಮೂರ್ತಿ ಹಾಗೂ ಸಹ ಸಂಚಾಲಕ ನಂದನ್ ನಿಲೇಕಣಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ವೇತನ ಏರಿಕೆ ಅನ್ವಯವಾಗದಿರುವದು ಆಶ್ಚರ್ಯಕರವಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ಫೋಸಿಸ್‌ನ ಯುರೋಪಿಯನ್ ವಹಿವಾಟಿನ ಅಡಳಿತ ಮಂಡಳಿ ಸದಸ್ಯ ಬಿ.ಜಿ.ಶ್ರೀನಿವಾಸ್ ಅವರಿಗೆ 2009 ಮಾರ್ಚ್ 31ಕ್ಕೆ ಅಂತ್ಯಗೊಂಡಂತೆ 4.67 ಕೋಟಿ ರೂಪಾಯಿ ವೇತನ ಏರಿಕೆ ಮಾಡಲಾಗಿದೆ.

ಕಳೆದ ವರ್ಷದ ಆರ್ಥಿಕ ಸಾಲಿನಲ್ಲಿ ಅಡಳಿತ ಮಂಡಳಿಯ ಸದಸ್ಯರು ಹಾಗೂ ಕಂಪೆನಿಯ ಹಿರಿಯ ಅಧಿಕಾರಿಗಳ ಒಟ್ಟು ವೇತನ ಏರಿಕೆ 10.28 ಕೋಟಿ ರೂಪಾಯಿಗಳಿಂದ 29.16 ಕೋಟಿ ರೂಪಾಯಿವರೆಗೆ ಏರಿಕೆಯಾಗಿದೆ ಎಂದು ಇನ್ಫೋಸಿಸ್‌ನ ಲೆಕ್ಕಪರಿಶೋಧಕ ವರದಿಯಲ್ಲಿ ಬಹಿರಂಗಪಡಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶೈಕ್ಷಣಿಕ ಸಾಲದ ಬಡ್ಡಿ ದರ ಕಡಿತ:ಎಸ್‌ಬಿಐ
ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ
ಸಕ್ಕರೆ ಬೆಲೆ ಏರಿಕೆ
ಟಿಸಿಎಸ್: ವೆಚ್ಚ ಕಡಿತಕ್ಕೆ ಸಿಬ್ಬಂದಿಗಳು ಭಾರತಕ್ಕೆ?
ಮೇ 15: ಕೋಲ್ಕತಾ-ಢಾಕಾಕ್ಕೆ 'ಕಿಂಗ್‌‌ಫಿಶರ್' ಸಂಚಾರ
ಸತ್ಯಂ ರಾಜು ಜಾಮೀನು ಕೋರಿಕೆ ನಕಾರ