ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಇಂಡಿಯನ್ ಬ್ಯಾಂಕ್‌ಗೆ 394 ಕೋಟಿ ನಿವ್ವಳ ಲಾಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂಡಿಯನ್ ಬ್ಯಾಂಕ್‌ಗೆ 394 ಕೋಟಿ ನಿವ್ವಳ ಲಾಭ
ಸರಕಾರಿ ಸ್ವಾಮ್ಯದ ಇಂಡಿಯನ್ ಬ್ಯಾಂಕ್ 2009 ಮಾರ್ಚ್ 31ಕ್ಕೆ ಅಂತ್ಯಗೊಂಡಂತೆ ನಾಲ್ಕನೇ ತ್ರೈಮಾಸಿಕದ ನಿವ್ವಳ ಲಾಭಾಂಶದಲ್ಲಿ ಶೇ.63.06 ರಷ್ಟು ಏರಿಕೆಯಾಗಿ 394.07 ಕೋಟಿ ರೂ.ಗಳಿಗೆ ತಲುಪಿದೆ ಎಂದು ವರದಿಯಲ್ಲಿ ಪ್ರಕಟಿಸಿದೆ.

ಕಳೆದ 2007-08ರ ಆರ್ಥಿಕ ಸಾಲಿನ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ 241.67 ಕೋಟಿ ರೂಪಾಯಿ ನಿವ್ವಳ ಲಾಭಗಳಿಸಿತ್ತು ಎಂದು ಇಂಡಿಯನ್ ಬ್ಯಾಂಕ್ ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.

ಬ್ಯಾಂಕ್‌ನ ನಿವ್ವಳ ಆದಾಯ ಕಳೆದ ವರ್ಷದ ಮಾರ್ಚ್ ತಿಂಗಳ ಆದಾಯದಲ್ಲಿ 1,672.85 ಕೋಟಿ ರೂಪಾಯಿಗಳಾಗಿದ್ದು, ಪ್ರಸಕ್ತ ವರ್ಷದಲ್ಲಿ ಶೇ.28.43 ರಷ್ಟು ಏರಿಕೆಯಾಗಿ 2,148.48 ಕೋಟಿ ರೂಪಾಯಿಗಳಿಗೆ ತಲುಪಿದೆ.

ಇಂಡಿಯನ್ ಬ್ಯಾಂಕ್‌ನ ಅಡಳಿತ ಮಂಡಳಿ 10 ರೂಪಾಯಿ ಮುಖಬೆಲೆಯ ಶೇರಿಗೆ ಶೇ.50 ರಷ್ಟು ಡೆವಿಡೆಂಡ್ ಘೋಷಿಸಲಾಗಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಮಾರ್ಚ್ 31ಕ್ಕೆ ಆರ್ಥಿಕ ವರ್ಷ ಅಂತ್ಯಗೊಂಡಂತೆ ಬ್ಯಾಂಕ್‌ ಕಳೆದ ವರ್ಷ 1,008.74 ಕೋಟಿ ರೂ.ಗಳ ನಿವ್ವಳ ಲಾಭಗಳಿಸಿದ್ದು, ಪ್ರಸಕ್ತ ವರ್ಷದಲ್ಲಿ ಶೇ.23.45ರಷ್ಟು ನಿವ್ವಳ ಲಾಭದಲ್ಲಿ ಏರಿಕೆಯಾಗಿ 1,245.32 ಕೋಟಿ ರೂಪಾಯಿಗಳಿಗೆ ತಲುಪಿದೆ.

ಬ್ಯಾಂಕ್‌ನ ಒಟ್ಟು ಆದಾಯ 2007-08ರ ಆರ್ಥಿಕ ಸಾಲಿನಲ್ಲಿ 6,218.67 ಕೋಟಿ ರೂ.ಗಳಾಗಿದ್ದು, ಪ್ರಸಕ್ತ ವರ್ಷದಲ್ಲಿ 7,865.77 ಕೋಟಿ ರೂಪಾಯಿಗಳಾಗಿವೆ ಎಂದು ಬ್ಯಾಂಕ್ ಆಫ್ ಇಂಡಿಯಾ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚಿನ್ನ: ಪ್ರತಿ 10 ಗ್ರಾಂಗೆ 14,741 ರೂಪಾಯಿ
ಇನ್ಫೋಸಿಸ್‌ ಹಿರಿಯ ಅಧಿಕಾರಿಗಳ ವೇತನದಲ್ಲಿ ಭಾರಿ ಏರಿಕೆ
ಶೈಕ್ಷಣಿಕ ಸಾಲದ ಬಡ್ಡಿ ದರ ಕಡಿತ:ಎಸ್‌ಬಿಐ
ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ
ಸಕ್ಕರೆ ಬೆಲೆ ಏರಿಕೆ
ಟಿಸಿಎಸ್: ವೆಚ್ಚ ಕಡಿತಕ್ಕೆ ಸಿಬ್ಬಂದಿಗಳು ಭಾರತಕ್ಕೆ?