ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸೆಪ್ಟೆಂಬರ್ ವೇಳೆಗೆ 1 ಲಕ್ಷ ಐಟಿ ಉದ್ಯೋಗಿಗಳ ವಜಾ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೆಪ್ಟೆಂಬರ್ ವೇಳೆಗೆ 1 ಲಕ್ಷ ಐಟಿ ಉದ್ಯೋಗಿಗಳ ವಜಾ?
PTI
ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ, ಭಾರತದಲ್ಲಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪೆನಿಗಳು ವೆಚ್ಚ ಕಡಿತದತ್ತ ಗಮನಹರಿಸಿರುವುದರಿಂದ ಮುಂದಿನ ಆರು ತಿಂಗಳಲ್ಲಿ 1 ಲಕ್ಷ ಉದ್ಯೋಗಿಗಳು ಉದ್ಯೋಗವನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳಿದ್ದಾರೆ.

ಕಂಪೆನಿಗಳು ಉದ್ಯೋಗಿಗಳ ಕೆಲಸ ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ಸಾಮರ್ಥ್ಯ ತೋರದ ಉದ್ಯೋಗಿಗಳನ್ನು ವಜಾಗೊಳಿಸಿ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಿವೆ ಎಂದು ಮೂಲಗಳು ತಿಳಿಸಿವೆ.

ಪ್ರಸಕ್ತ ವರ್ಷದ ಆರಂಭಿಕ ಆರು ತಿಂಗಳುಗಳಲ್ಲಿ ಶೇ.3 ರಿಂದ ಶೇ.5 ರಷ್ಟು ಹಿರಿಯ ಹಾಗೂ ಮಧ್ಯಮ ವರ್ಗದ ಉದ್ಯೋಗಿಗಳನ್ನು ವಜಾಗೊಳಿಸುವ ಸಾಧ್ಯತೆಗಳಿವೆ ಎಂದು ಡೆಲೊಯಿಟ್ ಮ್ಯಾನೇಜ್‌ಮೆಂಟ್ ಕನ್ಸಲ್‌ಟನ್ಸಿ ಸರ್ವಿಸಸ್‌ನ ಹಿರಿಯ ನಿರ್ದೇಶಕ ಪಿ.ತಿರುವೆಂಗದಮ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸುಮಾರು 22 ಲಕ್ಷ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು, ಮುಂಬರುವ ಸೆಪ್ಟೆಂಬರ್ ವೇಳೆಗೆ ಸುಮಾರು 1 ಲಕ್ಷ ಉದ್ಯೋಗಿಗಳು ಉದ್ಯೋಗವನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ..

ಇಂಟರ್‌ನ್ಯಾಷನಲ್ ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ ನಿರ್ದೇಶಕ ಸಿ.ಎಸ್‌.ವೆಂಕಟ್‌ರತ್ನ ಅವರು ಮಾತನಾಡಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪೆನಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಮುಂದಿನ ಆರು ತಿಂಗಳಲ್ಲಿ ಶೇ.4-5 ರಷ್ಟು ಉದ್ಯೋಗಿಗಳು ಉದ್ಯೋಗ ವಂಚಿತರಾಗಲಿದ್ದಾರೆ ಎಂದು ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇಂಡಿಯನ್ ಬ್ಯಾಂಕ್‌ಗೆ 394 ಕೋಟಿ ನಿವ್ವಳ ಲಾಭ
ಚಿನ್ನ: ಪ್ರತಿ 10 ಗ್ರಾಂಗೆ 14,741 ರೂಪಾಯಿ
ಇನ್ಫೋಸಿಸ್‌ ಹಿರಿಯ ಅಧಿಕಾರಿಗಳ ವೇತನದಲ್ಲಿ ಭಾರಿ ಏರಿಕೆ
ಶೈಕ್ಷಣಿಕ ಸಾಲದ ಬಡ್ಡಿ ದರ ಕಡಿತ:ಎಸ್‌ಬಿಐ
ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ
ಸಕ್ಕರೆ ಬೆಲೆ ಏರಿಕೆ