ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬಿಎಸ್‌ಎನ್‌ಎಲ್‌ನಿಂದ ವಾರ್ಷಿಕ ಪರಿಷ್ಕರಣಾ ಸಭೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಎಸ್‌ಎನ್‌ಎಲ್‌ನಿಂದ ವಾರ್ಷಿಕ ಪರಿಷ್ಕರಣಾ ಸಭೆ
PTI
ಸರಕಾರಿ ಸ್ವಾಮ್ಯದ ಭಾರತ ಸಂಚಾರ್ ನಿಗಮ ಲಿಮಿಟೆಡ್, ಪ್ರಸಕ್ತ 2008-09ರ ಸಾಲಿನ ಆರ್ಥಿಕ ಫಲಿತಾಂಶಗಳನ್ನು ಕುರಿತು ಚರ್ಚಿಸಲು ಏಪ್ರಿಲ್ 27-28 ರಂದು ವಾರ್ಷಿಕ ಪರಿಷ್ಕರಣಾ ಸಭೆಯನ್ನು ಹಮ್ಮಿಕೊಂಡಿದೆ ಎಂದು ಬಿಎಸ್‌ಎನ್‌ಎಲ್ ಮೂಲಗಳು ತಿಳಿಸಿವೆ.

2008-09ರ ಆರ್ಥಿಕ ಸಾಲಿನ ಕಂಪೆನಿಯ ವಾರ್ಷಿಕ ಫಲಿತಾಂಶ, ಸಿಬ್ಬಂದಿಯ ಕೆಲಸ ನಿರ್ವಹಣೆ ಹಾಗೂ ಸೂಚನೆಗಳನ್ನು ಕುರಿತು ಚರ್ಚಿಸಲು ವಾರ್ಷಿಕ ಪರಿಷ್ಕರಣಾ ಸಭೆಯನ್ನು ನಡೆಸಲಾಗುತ್ತಿದೆ ಎಂದು ಹಿರಿಯ ಬಿಎಸ್‌ಎನ್‌ಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಸ್‌ಎನ್ಎಲ್ ಅಡಳಿತ ಮಂಡಳಿ, ನಿನ್ನೆ ನಡೆದ ಸಭೆಯಲ್ಲಿ ನೆಟ್‌ವರ್ಕ್‌ ವಿಸ್ತರಣೆ ಹಾಗೂ ಇತರ ಟೆಲಿಕಾಂ ಕಂಪೆನಿಗಳ ಜೊತೆ ಸ್ಪರ್ಧಿಸಲು ತೆಗೆದುಕೊಳ್ಳಬೇಕಾದ ಕಾರ್ಯತಂತ್ರಗಳ ಕುರಿತಂತೆ ಚರ್ಚಿಸಲಾಯಿತು ಎಂದು ಬಿಎಸ್‌ಎನ್‌ಎಲ್ ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಬಿಎಸ್‌ಎನ್‌ಎಲ್‌ ಸಂಸ್ಥೆ ಮಾರ್ಚ್ ತಿಂಗಳಲ್ಲಿ 2.5 ಮಿಲಿಯನ್ ಗ್ರಾಹಕರನ್ನು ಸೇರ್ಪಡೆಗೊಳಿಸಿ ಟೆಲಿಕಾಂ ಸಂಸ್ಥೆಗಳಲ್ಲಿ ಮೂರನೇ ಸ್ಥಾನವನ್ನು ಪಡೆದಿದೆ. ಇದರಿಂದಾಗಿ ಬಿಎಸ್‌ಎನ್‌ಎಲ್ ಒಟ್ಟು ಗ್ರಾಹಕರ ಸಂಖ್ಯೆ 46.68 ಮಿಲಿಯನ್‌ಗಳಿಗೆ ತಲುಪಿದೆ ಎಂದು ಬಿಎಸ್‌ಎನ್‌ಎಲ್ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಿಎಸ್ಎನ್ಎಲ್, ಪರಿಷ್ಕರಣಾ ಸಭೆ, BSNL
ಮತ್ತಷ್ಟು
ಸೆಪ್ಟೆಂಬರ್ ವೇಳೆಗೆ 1 ಲಕ್ಷ ಐಟಿ ಉದ್ಯೋಗಿಗಳ ವಜಾ?
ಇಂಡಿಯನ್ ಬ್ಯಾಂಕ್‌ಗೆ 394 ಕೋಟಿ ನಿವ್ವಳ ಲಾಭ
ಚಿನ್ನ: ಪ್ರತಿ 10 ಗ್ರಾಂಗೆ 14,741 ರೂಪಾಯಿ
ಇನ್ಫೋಸಿಸ್‌ ಹಿರಿಯ ಅಧಿಕಾರಿಗಳ ವೇತನದಲ್ಲಿ ಭಾರಿ ಏರಿಕೆ
ಶೈಕ್ಷಣಿಕ ಸಾಲದ ಬಡ್ಡಿ ದರ ಕಡಿತ:ಎಸ್‌ಬಿಐ
ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ