ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜಯನಗರದಲ್ಲಿ ದೀಪಂ ಸಿಲ್ಕ್‌ನ ನೂತನ ಮಳಿಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಯನಗರದಲ್ಲಿ ದೀಪಂ ಸಿಲ್ಕ್‌ನ ನೂತನ ಮಳಿಗೆ
NRB
ದೀಪಂ ಸಿಲ್ಕ್‌, ಹೆಸರು ರೇಷ್ಮೆ ಸೀರೆಗಳ ವಲಯದಲ್ಲಿ ಜಗತ್ತಿನಲ್ಲಿಯೇ ಪ್ರಖ್ಯಾತವಾಗಿದ್ದು, ಜಯನಗರದಲ್ಲಿ ಶಾಖೆಯನ್ನು ಆರಂಭಿಸುತ್ತಿದೆ. 30ನೇ ಏಪ್ರಿಲ್ 2009 ಗುರುವಾರದಂದು ಬೆಳಿಗ್ಗೆ 10 ಗಂಟೆಗೆ ಫ್ಯಾಶನ್ ಕ್ಷೇತ್ರದ ರಾಯಭಾರಿಯಾದ ಶ್ರೀಮತಿ ರಿತು ಬೇರಿಯವರು ದೀಪಂ ಮಳಿಗೆಯನ್ನು ಉಧ್ಘಾಟಿಸಲಿದ್ದಾರೆ.

ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿ ದೀಪಂ ಸಿಲ್ಕ್‌ ಮಳಿಗೆ ಆರಂಭಿಸಿದ ನಂತರ, ಉತ್ತಮ ಗುಣಮಟ್ಟದ ರೇಷ್ಮೆ ಸೀರೆಗಳಿಂದಾಗಿ ದೇಶದಾದ್ಯಂತ ಕೆಲವೇ ದಿನಗಳಲ್ಲಿ ಮನೆಮಾತಾಗಿದೆ. ಹಲವು ವರ್ಷಗಳ ನಂತರವೂ ಫ್ಯಾಶನ್ ಪ್ರಿಯರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದ್ದು ಪ್ರತಿಷ್ಠಿತ ಬಡಾವಣೆಯಾದ ಜಯನಗರದಲ್ಲಿ ಶಾಖೆಯನ್ನು ವಿಸ್ತರಿಸುವ ತವಕದಲ್ಲಿದೆ.

ಜಯನಗರದಲ್ಲಿ ದೀಪಂ ಸಿಲ್ಕ್ ಶಾಖೆಯನ್ನು ಆರಂಭಿಸಲು ಸಂತೋಷವಾಗುತ್ತದೆ. ದೇಶದಾದ್ಯಂತ ರೇಷ್ಮೆ ಸೀರೆಗಳ ಕ್ಷೇತ್ರದಲ್ಲಿ ಐತಿಹಾಸಿಕ ಮೈಲುಗಲ್ಲನ್ನು ದಾಖಲಿಸಿ ಮುನ್ನಡೆ ಸಾಧಿಸಲಿದೆ. ರೇಷ್ಮೆ ಸೀರೆಗಳ ಬಗ್ಗೆ ನಮಗಿರುವ ಹಲವು ವರ್ಷಗಳ ಅನುಭವದಿಂದಾಗಿ ಗ್ರಾಹಕರಿಗೆ ಮನಸೆಳೆಯುವಂತಹ ಆಧುನಿಕ ಮತ್ತು ವಿಶಿಷ್ಟ ಶೈಲಿಯ ಸೀರೆಗಳನ್ನು ನೀಡುವ ಮಹತ್ತರವಾದ ಗುರಿಯನ್ನು ಹೊಂದಿದ್ದೇವೆ ಎಂದು ದೀಪಂ ಸಿಲ್ಕ್‌ನ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ್ ವಿವರಣೆ ನೀಡಿದ್ದಾರೆ.

ಬೆಂಗಳೂರಿನ ದಕ್ಷಿಣ ಭಾಗದಲ್ಲಿ ನೆಲೆಸಿರುವ ಗ್ರಾಹಕರಿಗೆ ಅನುಕೂಲವಾಗಲು ಶಾಖೆಯನ್ನು ಜಯನಗರಕ್ಕೆ ವಿಸ್ತರಿಸಿದ್ದು, ಬೇಡಿಕೆ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಬೆಂಗಳೂರಿನ ಸಂಪ್ರದಾಯಸ್ತರಿಗೆ ಜಯನಗರ ತವರುಮನೆಯಾಗಿದ್ದು, ಶ್ರೀಮಂತ್ರ ಸಾಂಸ್ಕ್ರತಿಕ ಕೇಂದ್ರವಾಗಿದ್ದು, ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ದೀಪಂ ಸಿಲ್ಕ್‌ ಬದ್ಧವಾಗಿದೆ.

ರೇಷ್ಮೆ ವಸ್ತ್ರಗಳ ಬಗ್ಗೆ ಆಗಾಧ ಜ್ಞಾನವಿರುವುದರಿಂದ ದೀಪಂ ಸಿಲ್ಕ್ ಯಶಸ್ಸು ಹಲವು ದಶಕಗಳ ನಂತರವೂ ಗ್ರಾಹಕರ ಮನಸೂರೆಗೊಳ್ಳುವಲ್ಲಿ ಮುಂಚೂಣಿಯಲ್ಲಿದೆ. ದೀಪಂ ಸಿಲ್ಕ್ ಮೊದಲ ಮಳಿಗೆಯನ್ನು 1972ರಲ್ಲಿ ಮಹಾತ್ಮ ಗಾಂಧಿ ರಸ್ತೆಯಲ್ಲಿ ಆರಂಭಿಸಲಾಯಿತು. ಇದೀಗ ದೀಪಂ ಸಿಲ್ಕ್‌ ಗುಣಮಟ್ಟದ ರೇಷ್ಮೆ ಸೀರೆಗಳಾದ ಕಾಂಜೀವರಂ, ಗಢವಾಲ್ಸ್ ,ವೆಂಕಟಗಿರಿ, ಉಪಾದಾ, ಜಮ್ದಾನಿಸ್, ಐಕಾಟ್ಸ್ ಮತ್ತು ಜಮೆವಾರ್ಸ್ ನಿಂದ ಬ್ರೊಕೆಡ್ಸ್, ಟಿಶ್ಯೂ, ವಲಕಾಲಮ್ಸ್,ಕೊರಾಸ್,ಟುಸ್ಸಾರ್ಸ್, ಕಂಠಾಸ್‌ ಬಲೂಚಾರಿಸ್ ಮತ್ತು ಬಂಧಾನಿಸ್ ವಿವಿಧ ಬ್ರ್ಯಾಂಡ್‌ಗಳ ಸೀರೆಗಳು ಲಭ್ಯವಿದ್ದು, ದೀಪಂನ ವಿನ್ಯಾಸಾಕಾರರರ ತಂಡ ನಿರಂತರವಾಗಿ ನೂತನ ಡಿಜೈನ್‌ಗಳನ್ನು ಸಂಶೋಧಿಸುವತ್ತ ಕಾರ್ಯನಿರ್ವಹಿಸುತ್ತಿದೆ.

ದೀಪಂ ಸಿಲ್ಕ್ ಸಂಸ್ಥೆ ಇತ್ತೀಚೆಗೆ ರೇಷ್ಮೆ ಸೀರೆಗಳ ಸಂಗ್ರಹವನ್ನು ಖ್ಯಾತ ವಿನ್ಯಾಸಗಾರ್ತಿ ಶೋಭಾ ಡೇ ಉಧ್ಗಾಟಿಸಿದ್ದರು. ಭಾರತೀಯ ಮಹಿಳೆಯ ಸೌಂದರ್ಯಕ್ಕೆ ಮೆರಗು ನೀಡುವ ದೀಪಂ ಸಿಲ್ಕ್ ಸೀರೆಗಳು ಜಗದ್ವಿಖ್ಯಾತವಾಗಿವೆ.

ಹೆಚ್ಚಿನ ವಿವರಗಳಿಗಾಗಿ ಕರೆ ಮಾಡಿ

ಉರ್ಮಿಳಾ ಬಿಸ್ವಾಸ್/ ಲಕ್ಷ್ಮಣ್ ಬಾಬು

ಮೊಬೈಲ್:98860 99736/ 98457 06155
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಎಸ್‌ಎನ್‌ಎಲ್‌ನಿಂದ ವಾರ್ಷಿಕ ಪರಿಷ್ಕರಣಾ ಸಭೆ
ಸೆಪ್ಟೆಂಬರ್ ವೇಳೆಗೆ 1 ಲಕ್ಷ ಐಟಿ ಉದ್ಯೋಗಿಗಳ ವಜಾ?
ಇಂಡಿಯನ್ ಬ್ಯಾಂಕ್‌ಗೆ 394 ಕೋಟಿ ನಿವ್ವಳ ಲಾಭ
ಚಿನ್ನ: ಪ್ರತಿ 10 ಗ್ರಾಂಗೆ 14,741 ರೂಪಾಯಿ
ಇನ್ಫೋಸಿಸ್‌ ಹಿರಿಯ ಅಧಿಕಾರಿಗಳ ವೇತನದಲ್ಲಿ ಭಾರಿ ಏರಿಕೆ
ಶೈಕ್ಷಣಿಕ ಸಾಲದ ಬಡ್ಡಿ ದರ ಕಡಿತ:ಎಸ್‌ಬಿಐ