ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 2009-10ರಲ್ಲಿ ಶೇ.6ರಷ್ಟು ಜಿಡಿಪಿ ಬೆಳವಣಿಗೆ: ಅಹ್ಲುವಾಲಿಯಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
2009-10ರಲ್ಲಿ ಶೇ.6ರಷ್ಟು ಜಿಡಿಪಿ ಬೆಳವಣಿಗೆ: ಅಹ್ಲುವಾಲಿಯಾ
PTI
2009-10ನೇ ಸಾಲಿನಲ್ಲಿ ಭಾರತದ ಜಿಡಿಪಿ ಶೇ.6ರಷ್ಟು ಬೆಳವಣಿಗೆ ಕಾಣಲಿದೆ ಎಂದು ಅಂದಾಜಿಸಲಾಗಿದೆ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೋಂಟೆಕ್ ಸಿಂಗ್ ಅಹ್ಲುವಾಲಿಯಾ ತಿಳಿಸಿದ್ದಾರೆ.

ಜಿ-20 ಸಚಿವಾಲಯ ಸಭೆಯ ನಂತರ ಮಾತನಾಡಿದ ಅಹ್ಲುವಾಲಿಯಾ, ಮುಂದಿನ ಹಣಕಾಸು ವರ್ಷದಲ್ಲಿ ಜಾಗತಿಕ ವಲಯದ ಆರ್ಥಿಕ ಕುಸಿತ ತಹಬಂದಿಗೆ ಬರಲಿದದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ. ಹಾಗಾಗಿ ಭಾರತದ ಆರ್ಥಿಕತೆಯಲ್ಲೂ ಮುಂದಿನ ಹಣಕಾಸು ವರ್ಷದಲ್ಲಿ ಪ್ರಗತಿ ಕಂಡುಬರಲಿದೆ ಎಂದು ಅಂದಾಜಿಸಲಾಗಿದೆ ಎಂದು ಅಭಿಪ್ರಾಯಪಟ್ಟರು.

ಆದರೂ, ಈ ಮೊದಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡಾ ಶೇ.6ರ ಬೆಳವಣಿಗೆ ಮುಂದಿನ ಆರ್ಥಿಕ ವರ್ಷದಲ್ಲಿ ಕಾಣಬಹುದು ಎಂದು ಅಂದಾಜು ಮಾಡಿದೆ. ಆದರೆ ಜಾಗತಿಕ ವಲಯದ ಮೂಲಗಳ ಆದಾರದಲ್ಲಿ ಹೇಳುವಂತೆ, ಅಂತಾರಾಷ್ಟ್ರೀಯ ಹಣಕಾಸು ನಿಧಿ ಸುಮಾರು ಶೇ.5.25ರ ಬೆಳವಣಿಗೆ ಹಾಗೂ ವಿಶ್ವಬ್ಯಾಂಕ್ ಶೇ.4ರ ಬೆಳವಣಿಗೆ ಕಾಣಬಹುದು ಎಂದು ಲೆಕ್ಕಾಚಾರ ಹಾಕಿವೆ ಎಂದರು.

ಕಳೆದ ಆರ್ಥಿಕ ವರ್ಷದಲ್ಲಿ ಮೊದಲಿಗಿಂತ ಶೇ.9ರಷ್ಟು ಆರ್ಥಿಕ ಬೆಳವಣಿಗೆಯಲ್ಲಿ ಇಳಿಕೆಯಾಗಿದೆ ಎಂದು ಅಹ್ಲುವಾಲಿಯಾ ತಿಳಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶೇಕಡಾ 6.7 ವೃದ್ಧಿ ದರ: ಸುಬ್ಬರಾವ್
ಬಿಎಸ್‌ಎನ್‌ಎಲ್-ನೋಕಿಯಾ ಒಪ್ಪಂದ
ಜಯನಗರದಲ್ಲಿ ದೀಪಂ ಸಿಲ್ಕ್‌ನ ನೂತನ ಮಳಿಗೆ
ಬಿಎಸ್‌ಎನ್‌ಎಲ್‌ನಿಂದ ವಾರ್ಷಿಕ ಪರಿಷ್ಕರಣಾ ಸಭೆ
ಸೆಪ್ಟೆಂಬರ್ ವೇಳೆಗೆ 1 ಲಕ್ಷ ಐಟಿ ಉದ್ಯೋಗಿಗಳ ವಜಾ?
ಇಂಡಿಯನ್ ಬ್ಯಾಂಕ್‌ಗೆ 394 ಕೋಟಿ ನಿವ್ವಳ ಲಾಭ