ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್ಥಿಕ ಚೇತರಿಕೆಯಲ್ಲಿ ವಿಶ್ವದಲ್ಲಿ ಭಾರತ, ಚೀನಾ ಮುಂದು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕ ಚೇತರಿಕೆಯಲ್ಲಿ ವಿಶ್ವದಲ್ಲಿ ಭಾರತ, ಚೀನಾ ಮುಂದು
ಆರ್ಥಿಕ ಕುಸಿತ ಸದ್ಯಕ್ಕೆ ನಿಲ್ಲಲಿದ್ದು, ಇನ್ನು ಮುಂದೆ ಬೆಳವಣಿಗೆಯ ಹಾದಿ ಶುರುವಾಗಲಿದೆ ಎಂದು ಇಂಗ್ಲೆಂಡ್ ಮೂಲದ ಹಣಕಾಸು ಸೇವಾ ಸಂಸ್ಥೆ ಬಾರ್‌ಕ್ಲೇಸ್ ಭವಿಷ್ಯ ನುಡಿದಿದೆ.

ಬಾರ್‌ಕ್ಲೇಸ್ ಅಂದಾಜಿನ ಪ್ರಕಾರ, ವಿಶ್ವದ ಅರ್ಥಿಕ ಬೆಳವಣಿಗೆ ನಾಂದಿ ಹಾಡುವ ರಾಷ್ಟ್ರಗಳು ಭಾರತ ಹಾಗೂ ಚೀನಾ. ಏಷ್ಯಾದ ರಾಷ್ಟ್ರಗಳ ಪೈಕಿ ಈಗಾಗಲೇ ಭಾರತ ಹಾಗೂ ಚೀನಾ ತಮ್ಮ ಕುಸಿತದ ಹಾದಿಯನ್ನು ಸರಿಪಡಿಸಿಕೊಂಡು ಬೆಳವಣಿಗೆಯತ್ತ ದೃಷ್ಟಿ ನೆಟ್ಟಿವೆ. ಇದನ್ನೇ ಏಷ್ಯಾದ ಇತರ ರಾಷ್ಟ್ರಗಳಾದ ಥೈವಾನ್, ಇಂಡೋನೇಷ್ಯಾ, ಮಲೇಶಿಯಾ, ಫಿಲಿಪೈನ್ಸ್, ಸಿಂಗಾಪುರ, ದಕ್ಷಿಣ ಕೊರಿಯಾ, ಥಾಯ್‌ಲ್ಯಾಂಡ್ ಹಾಂಗ್‌ಕಾಂಗ್‌ಗಳು ಅನುಸರಿಸುತ್ತಿವೆ ಎಂದಿದೆ.

ವಿಶ್ವದ ಇತರ ರಾಷ್ಟ್ರಗಳಿಗಿಂತ ತುಸು ಬೇಗವೇ ಹಣಕಾಸು ಕುಸಿತದಿಂದ ಚೇತರಿಸಿಕೊಂಡು ಬೆಳವಣಿಗೆಯತ್ತ ಹೆಜ್ಜೆ ಹಾಕುವುದರಲ್ಲಿ ಏಷ್ಯಾದ ರಾಷ್ಟ್ರಗಳೇ ಮುಂದಿವೆ ಎಂದಿರುವ ಬಾರ್‌ಕ್ಲೇಸ್, ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತ ಹಾಗೂ ಚೀನಾದಲ್ಲಿ ಆರ್ಥಿಕ ಬೆಳವಣಿಗೆಯಲ್ಲಿ ಗಮನಾರ್ಹ ಚೇತರಿಕೆ ಕಂಡುಬರಲಿದೆ ಎಂದು ತಿಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
2009-10ರಲ್ಲಿ ಶೇ.6ರಷ್ಟು ಜಿಡಿಪಿ ಬೆಳವಣಿಗೆ: ಅಹ್ಲುವಾಲಿಯಾ
ಶೇಕಡಾ 6.7 ವೃದ್ಧಿ ದರ: ಸುಬ್ಬರಾವ್
ಬಿಎಸ್‌ಎನ್‌ಎಲ್-ನೋಕಿಯಾ ಒಪ್ಪಂದ
ಜಯನಗರದಲ್ಲಿ ದೀಪಂ ಸಿಲ್ಕ್‌ನ ನೂತನ ಮಳಿಗೆ
ಬಿಎಸ್‌ಎನ್‌ಎಲ್‌ನಿಂದ ವಾರ್ಷಿಕ ಪರಿಷ್ಕರಣಾ ಸಭೆ
ಸೆಪ್ಟೆಂಬರ್ ವೇಳೆಗೆ 1 ಲಕ್ಷ ಐಟಿ ಉದ್ಯೋಗಿಗಳ ವಜಾ?