ಕಳಂಕಿತ ಸತ್ಯಂನ ಹೊಸ ಒಡೆಯ ಟೆಕ್ ಮಹೀಂದ್ರಾ ಸಂಸ್ಥೆ ತನ್ನ ಮಾರ್ಚ್ 31ರಲ್ಲಿ ಅಂತ್ಯವಾದ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ 230 ಕೋಟಿ ರೂಪಾಯಿಗಳ ನಿವ್ವಳ ಆದಾಯ ಗಳಿಸಿದೆ.
ಟೆಕ್ ಮಹೀಂದ್ರಾ ಇದೀಗ ತನ್ನ ನಾಲ್ಕನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದ್ದು, ವರದಿಯ ಪ್ರಕಾರ, ಕಳೆದ ವರ್ಷ ಇದೇ ಸಮಯದಲ್ಲಿ 221.4 ಕೋಟಿ ರೂಪಾಯಿಗಳ ನಿವ್ವಳ ನಷ್ಟ ಸಂಸ್ಥೆ ದಾಖಲಿಸಿತ್ತು. ಇದರಲ್ಲಿ 440 ಕೋಟಿ ರೂಪಾಯಿಗಳ ಸಂಸ್ಥೆಯ ಖರ್ಚೂ ಸೇರಿಕೊಂಡಿತ್ತು.
ಟೆಕ್ ಮಹೀಂದ್ರಾದ ಮುಖ್ಯ ಹಣಕಾಸು ಅಧಿಕಾರಿ ಸಂಜಯ್ ಕಾಲ್ರಾ ಮಾತನಾಡಿ, ಸಂಸ್ಥೆ ಈ ಗಳಿಕೆಯನ್ನು ಪಡೆಯಲು ಕಳೆದ ಬಾರಿ ಭಾರೀ ಸಾಲದ ಮೊರೆ ಹೋಗಬೇಕಾಗಿತ್ತು ಎಂದು ತಿಳಿಸಿದರು.
ಕಳೆದ ಆರ್ಥಿಕ ವರ್ಷ 218.7 ಕೋಟಿ ರೂಪಾಯಿಗಳ ಗಳಿಕೆಗಿಂತ ಈ ಬಾರಿ ಶೇ.5.3ರಷ್ಟು ಹೆಚ್ಚಾಗಿದ್ದು, 230 ಕೋಟಿ ರೂಪಯಿ ಗಳಿಕೆ ಸಾಧ್ಯವಾಗಿದೆ ಎಂದು ಕಾಲ್ರಾ ತಿಳಿಸಿದರು. |