ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಭಾರತದಲ್ಲಿ 22 ಎಫ್‌ಡಿಐ ಪ್ರಸ್ತಾವಕ್ಕೆ ಸರ್ಕಾರದ ಅಂಕಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತದಲ್ಲಿ 22 ಎಫ್‌ಡಿಐ ಪ್ರಸ್ತಾವಕ್ಕೆ ಸರ್ಕಾರದ ಅಂಕಿತ
ಯಮಹಾ, ನೋಕಿಯಾ ಸಂಸ್ಥೆಗಳೂ ಸೇರಿದಂತೆ ಸರ್ಕಾರ ಭಾರತದಲ್ಲಿ 22 ವಿದೇಶೀ ಬಂಡವಾಳ ಹೂಡಿಕೆಯ ಪ್ರಸ್ತಾವವನ್ನು ಇತ್ಯರ್ಥಗೊಳಿಸಿದೆ.

541.25 ಕೋಟಿ ರೂಪಾಯಿಗಳ ಮೊತ್ತದ ಈ ವಿದೇಶೀ ಬಂಡವಾಳ ಹೂಡಿಕೆ ಪ್ರಸ್ತಾವ ಫಾರಿನ್ ಇನ್‌ವೆಸ್ಟ್ಮೆಂಟ್ ಪ್ರೊಮೋಶನ್ ಬೋರ್ಡು ಮೂಲಕ ಸರ್ಕಾರದ ಎದುರಿತ್ತು. ಪ್ರತಿಷ್ಠಿತ ಸಂಸ್ಥೆಗಳಾದ ಯಮಹಾ, ನೋಕಿಯಾಗಳ ಅರ್ಜಿಗಳಿಗೂ ಸರ್ಕಾರ ಅಂತಿಮವಾಗಿ ಹಸಿರು ನಿಶಾನೆ ತೋರಿದೆ.

ನೋಕಿಯಾ ಸಂಸ್ಥೆ ಎಚ್‌ಸಿಎಲ್ ಇನ್ಫೋಸಿಸ್ಟಮ್ಸ್ ಜತೆಗೆ ಕೈಜೋಡಿಸಿ ಸಿಂಗಲ್ ಬ್ರ್ಯಾಂಡ್ ರೀಟೈಲ್ ಸರಣಿಯನ್ನು ಆರಂಭಿಸಲು ಹೊರಟಿದ್ದು, ಇದರಿಂದ ಎಚ್‌ಸಿಎಲ್ ನೋಕಿಯಾ ಹ್ಯಾಂಡ್‌ಸೆಟ್‌ ಮಾರಾಟ ಯೋಜನೆಗೂ ಕೈ ಹಾಕಲಿದೆ. ಈ ಪ್ರಸ್ತಾವಕ್ಕೆ ಸರ್ಕಾರ ಅಂಕಿತ ಇದೀಗ ಬಿದ್ದಂತಾಗಿದೆ.

ಯಮಹಾ ಸಂಸ್ಥೆ ತನ್ನ ಬ್ಯುಸಿನೆಸ್‌ನ ಎಲ್ಲ ವ್ಯವಹಾರಗಳನ್ನೂ ಭಾರತಕ್ಕೆ ವರ್ಗಾಯಿಸಲು ಯೋಚಿಸುತ್ತಿದ್ದು, ಹೊಸ ಸಂಸ್ಥೆ ಯಮಹಾ ಇಂಡಿಯಾ ಮೋಟಾರ್ ಪ್ರೈವೇಟ್ ಲಿಮಿಟೆಡ್ ಮೂಲಕ ನಡೆಸಲು ಯೋಚಿಸಿದೆ. ಈ ಸಂಬಂಧ ಬಂಡವಾಳ ಹೂಡಿಕೆಗೆ ಸರ್ಕಾರದ ಅನುಮತಿ ಪಡೆಯಲು ಯಮಹಾ ಅರ್ಜಿ ಸಲ್ಲಿಸಿತ್ತು. ಈಗ ಅದ್ಕಕೂ ಅಂತಿಮ ಮುದ್ರೆ ಸಿಕ್ಕಿದೆ.

ಇದಲ್ಲದೆ, ಮುಂಬೈ ಮೂಲದ ಬ್ರಾಡ್‌ಬ್ಯಾಂಡ್ ಸಂಸ್ಥೆ ಟಿಕೋನಾ ಡಿಜಿಟಲ್ ನೆಟ್‌ವರ್ಕ್ಸ್ ಸಂಸ್ಥೆ ಅತಿ ಹೆಚ್ಚು ವಿದೇಶೀ ಬಂಡವಾಳ ಹೂಡಿಕೆಗೆ ಅರ್ಜಿ ಸಲ್ಲಿಸಿತ್ತು. ಅದರ ಮೊತ್ತ 237.26 ಕೋಟಿ ರೂಪಾಯಿಗಳು. ಕೋಲ್ಕತ್ತಾ ಮೂಲದ ಎಲೆಕ್ಟ್ರೋ ಸ್ಟೀಲ್ ಬ್ಯುಸಿನೆಸ್ ಸಂಸ್ಥೆ 157.47 ಕೋಟಿ ರೂಪಾಯಿಗಳನ್ನು ಹೂಡಲು ಅವಕಾಶ ಪಡೆದುಕೊಂಡಿದೆ. ಆದರೆ, ಅಲ್ ಖಲೀಜ್‌ರ ಸಕ್ಕರೆ ಸಂಸ್ಕರಣಾ ಘಟಕ ಸ್ಥಾಪನೆಗೆ ಹಾಕಿದ್ದ ಅರ್ಜಿಯನ್ನು ಸರ್ಕಾರ ತಿರಸ್ಕೃತಗೊಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಡಾಲರ್ ಎದುರು 15 ಪೈಸೆ ಕುಸಿದ ರೂಪಾಯಿ
ಟೆಕ್ ಮಹೀಂದ್ರಾ: 230 ಕೋಟಿ ರೂ ನಿವ್ವಳ ಲಾಭ
ಆರ್ಥಿಕ ಹಿಂಜರಿತ 2010ರವರೆಗೂ ಇರುತ್ತದೆ: ಆರ್‌ಬಿಐ
ಆರ್ಥಿಕ ಚೇತರಿಕೆಯಲ್ಲಿ ವಿಶ್ವದಲ್ಲಿ ಭಾರತ, ಚೀನಾ ಮುಂದು
2009-10ರಲ್ಲಿ ಶೇ.6ರಷ್ಟು ಜಿಡಿಪಿ ಬೆಳವಣಿಗೆ: ಅಹ್ಲುವಾಲಿಯಾ
ಶೇಕಡಾ 6.7 ವೃದ್ಧಿ ದರ: ಸುಬ್ಬರಾವ್