ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಅಮೆರಿಕ ಸರ್ಕಾರದಡಿ ಹೊಸ ಜನರಲ್ ಮೋಟಾರ್ಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೆರಿಕ ಸರ್ಕಾರದಡಿ ಹೊಸ ಜನರಲ್ ಮೋಟಾರ್ಸ್
ಭಾರೀ ನಷ್ಟದಲ್ಲಿರುವ ವಿಶ್ವದ ಖ್ಯಾತ ಆಟೋಮೇಕರ್ ಜನರಲ್ ಮೋಟಾರ್ಸ್ (ಜಿಎಂ) ತನ್ನ ಘಟಕಗಳನ್ನು ಮುಚ್ಚುಗಡೆ, ಉದ್ಯೋಗದಲ್ಲಿ ಭಾರೀ ಕಡಿತ ಹಾಗೂ ಪೋಂಟಿಯಾಕ್ ಬ್ರ್ಯಾಂಡ್ ಕಾರು ತಯಾರಿಕಾ ಘಟಕವನ್ನು ನಿಲ್ಲಿಸುವ ಮೂಲಕ ಅಮೆರಿಕ ಸರ್ಕಾರದ ಒಡೆತನದಲ್ಲಿ ಹೊಸ ಜನರಲ್ ಮೋಟಾರ್ಸ್ ರೂಪತಳೆಯುತ್ತಿದೆ.

ಸೋಮವಾರ ಜಿಎಂ ತನ್ನ ಎಂಟು ಸಾವಿರ ನೌಕಕರ ಉದ್ಯೋಗ ಕಡಿತ ಮಾಡುತ್ತದೆ ಎಂದು ಘೋಷಿಸಿತ್ತು. ಜತೆಗೆ, ನಷ್ಟದ ಹಾದಿಯಿಂದ ತಪ್ಪಿಸಿಕೊಳ್ಳಲು ಹಾಗೂ ಮತ್ತೆ ಸುಸ್ಥಿತಿಗೆ ತರುವ ಸಲುವಾಗಿ ಸಂಸ್ಥೆಯ ಪೋಂಟಿಯಾಕ್ ಕಾರು ತಯಾರಿಕೆಯನ್ನು ನಿಲ್ಲಿಸುವ ಜತೆಗೆ ತನ್ನ ಹಲವು ಘಟಕಗಳನ್ನೂ ಮುಚ್ಚುವುದಾಗಿ ಪ್ರಕಟಿಸಿತ್ತು.

ಅಮೆರಿಕ ಸರ್ಕಾರ ನೇಮಿಸಿದ ಜಿಎಂನ ಹೊಸ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಫ್ರಿಟ್ಸ್ ಹ್ಯಾಂಡರ್‌ಸನ್ ಪತ್ರಿಕಾಗೋಷ್ಠಿಯಲ್ಲಿ, ನೈಜ ಪರಿಸ್ಥಿತಿಯೊಂದಿಗೆ ಸೆಣೆಸಲೇ ಬೇಕಾಗಿರುವುದರಿಂದ ಇಷ್ಟು ಕಡಿತ ಮಾಡದಿದ್ದರೆ ಸಾಧ್ಯವೇ ಇಲ್ಲ ಎಂದು ಪರಿಸ್ಥಿತಿ ವಿವರಿಸಿದರು.

ಅಮೆರಿಕ ಸರ್ಕಾರದ ಒಡೆತನದಲ್ಲಿ ಜಿಎಂನ ಯೋಜನೆಗಳು ನಿಧಾನ ಗತಿಯಲ್ಲಿ ಸಾಗುತ್ತಿದೆ ಎಂಬ ಟೀಕೆಗಳ ಬೆನ್ನಲ್ಲೇ ಇದೀಗ 2010ರೊಳಗೆ ಜಿಎಂನ ಹಲವು ಯೋಜನೆಗಳಿಗೆ ಕತ್ತರಿ ಬೀಳಲಿದೆ. ಅಮೆರಿಕದಾದ್ಯಂತ ಇರುವ 47 ಜಿಎಂ ಮೋಟಾರು ವಾಹನ ತಯಾರಿಕಾ ಘಟಕಗಳ ಪೈಕಿ ಕೇವಲ 34ನ್ನು ಮಾತ್ರ ಉಳಿಸಿಕೊಳ್ಳುವ ನಿರ್ಧಾರ ಹೊರಬಿದ್ದಿದೆ. ಉಳಿದೆಲ್ಲ ಘಟಕಗಳಿಗೆ ಬೀಗ ಬೀಳಲಿದೆ. 40,000 ನೌಕರರ ಸಾಮರ್ಥ್ಯವನ್ನು 21,000ಕ್ಕಿಳಿಸುವ ಪ್ರಯತ್ನ ಹಂತಹಂತವಾಗಿ ನಡೆಯುತ್ತಿದೆ. ಡೀಲರ್ ನೆಟ್‌ವರ್ಕನ್ನು 6,246 ಮಳಿಗೆಗಳಿಂದ 3,605 ಮಳಿಗೆಗಳಿಗೆ ಇಳಿಸಲಿದೆ. ಒಬಾಮಾ ಆಡಳಿತದ ಜಿಎಂನ ಅಧಿಕಾರಿ ವರ್ಗ ಕಳೆದ ಕೆಲವು ತಿಂಗಳುಗಳಿಂದ ಜಿಎಂ್ನನು ಉಳಿಸಿಕೊಳ್ಳಲು ಎಲ್ಲ ಪ್ರಯತ್ನವನ್ನೂ ಮಾಡುತ್ತಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚುನಾವಣೆಯ ನಂತರ ಆರ್ಥಿಕ ವ್ಯವಹಾರದಲ್ಲಿ ಚೇತರಿಕೆ
ಭಾರತದಲ್ಲಿ 22 ಎಫ್‌ಡಿಐ ಪ್ರಸ್ತಾವಕ್ಕೆ ಸರ್ಕಾರದ ಅಂಕಿತ
ಡಾಲರ್ ಎದುರು 15 ಪೈಸೆ ಕುಸಿದ ರೂಪಾಯಿ
ಟೆಕ್ ಮಹೀಂದ್ರಾ: 230 ಕೋಟಿ ರೂ ನಿವ್ವಳ ಲಾಭ
ಆರ್ಥಿಕ ಹಿಂಜರಿತ 2010ರವರೆಗೂ ಇರುತ್ತದೆ: ಆರ್‌ಬಿಐ
ಆರ್ಥಿಕ ಚೇತರಿಕೆಯಲ್ಲಿ ವಿಶ್ವದಲ್ಲಿ ಭಾರತ, ಚೀನಾ ಮುಂದು