ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹಂದಿ ಜ್ವರ: ಆರ್ಥಿಕತೆಯ ಮೇಲೆ ವಿಪರೀತ ಹೊಡೆತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಂದಿ ಜ್ವರ: ಆರ್ಥಿಕತೆಯ ಮೇಲೆ ವಿಪರೀತ ಹೊಡೆತ
ವಿಶ್ವದೆಲ್ಲೆಡೆ ಹರಡುತ್ತಿರುವ ಹಂದಿ ಜ್ವರ ಇದೀಗ ಆರ್ಥಿಕ ಪರಿಸ್ಥಿತಿಯ ಮೇಲೂ ತನ್ನ ವಕ್ರದೃಷ್ಠಿ ಬೀರಿದೆ. ಮೆಕ್ಸಿಕೋ, ಅಮೆರಿಕ, ಕೆನಡಾ, ಇಂಗ್ಲೆಂಡ್ ಹಾಗೂ ಇತರ ಯುರೋಪಿಯನ್ ದೇಶಗಳಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಹಂದಿಜ್ವರದಿಂದಾಗಿ ವಿಶ್ವದ ಆರ್ಥಿಕತೆಯನ್ನೂ ನಡುಗಿಸಿದೆ. ಬಾರ್‌ಕ್ಲೇಸ್ ಕ್ಯಾಪಿಟಲ್ ಈಗಾಗಲೇ ತಕ್ಷಣ ಆರ್ಥಿಕ ಸುಧಾರಣೆಯತ್ತ ಗಮನ ಹರಿಸಿದರೆ ಮಾತ್ರ ಪರಿಸ್ಥಿತಿ ಸುಧಾರಣೆ ಸಾಧ್ಯ ಎಂದು ಅಭಿಪ್ರಾಯಪಟ್ಟಿದೆ.

ಹಲವು ದೇಶಗಳು ಈಗಾಗಲೇ ಮೆಕ್ಸಿಕೋ, ಅಮೆರಿಕ, ಕೆನಡಾ, ಇಂಗ್ಲೆಂಡ್, ಫ್ರಾನ್ಸ್‌ಗಳಿಗೆ ಪ್ರಯಾಣ ಬೆಳೆಸುವ ಪ್ರವಾಸಿಗರಿಗೆ ಹಂದಿಜ್ವರದ ಮುನ್ನೆಚ್ಚರಿಕೆ ಹಾಗೂ ಪರಿಹಾರ ಉಪಾಯಗಳನ್ನು ತಿಳಿಸುತ್ತಿವೆ. ಇದು ಕೇವಲ ಪ್ರವಾಸೋದ್ಯಮ ಹಾಗೂ ಏರ್‌ಲೈನ್ಸ್ ಬ್ಯುಸಿನೆಸ್ ಮೇಲೆ ಪರಿಣಾಮ ಬೀರುವುದಲ್ಲದೆ, ಸರಕು ಸಾಗಾಣೆ ವ್ಯವಹಾರದ ಮೇಲೂ ಪರಿಣಾಮ ಬೀರುತ್ತಿದೆ.

ಹಂದಿ ಜ್ವರವನ್ನು 2003ರಲ್ಲಿ ವಿಶ್ವದೆಲ್ಲೆಡೆ ಹರಡಿ 750ಕ್ಕೂ ಹೆಚ್ಚು ಮಂದಿಯ ಸಾವಿಗೆ ಕಾರಣವಾದ ಮಾರಣಾಂತಿಕ ಕಾಯಿಲೆ ಸಾರ್ಸ್ (ಸಿವಿಯರ್ ಎಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್)ಗೆ ಹೋಲಿಸಲಾಗುತ್ತಿದೆ. ಈ ಕಾಯಿಲೆ ಹರಡಿದ ಸಂದರ್ಭವೂ ಏಷ್ಯಾ ರಾಷ್ಟ್ರಗಳ ಆರ್ಥಿಕತೆಗೆ ವಿಪರೀತ ಪೆಟ್ಟು ಬಿದ್ದಿತ್ತು.

ಪ್ರವಾಸೋದ್ಯಮ, ವಾಯುಯಾನ ಮತ್ತಿತರ ಉದ್ಯಮದ ಮೇಲೆ ಹಂದಿ ಜ್ವರದ ಪರಿಣಾಮ ಬಿದ್ದರೂ ಕೆಲ ಸಮಯದ್ಲಲಿ ಪರಿಸ್ಥಿತಿ ಸುಧಾರಣೆ ಮಾಡಬಹುದು. ಆದರೆ ಆರ್ಥಿಕ ಹೊಡೆತವನ್ನು ಸುಧಾರಿಸುವುದು ಕಷ್ಟ. ಹಾಗಾಗಿ ಈಗಲೇ ಆರ್ಥಿಕ ಸುಧಾರಣೆಯತ್ತ ಗಮನ ಹರಿಸುವುದು ಸೂಕ್ತ ಎಂದೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಾರ್ಸ್ ಹೊಡೆತದ ಸಂದರ್ಭ ವ್ಯಾಪಾರ, ಸಿನೆಮಾ, ಹಾಗೂ ಮನರಂಜನೆ ಉದ್ಯಮಗಳು ಭಾರೀ ಸಂಕಷ್ಟ ಎದುರಿಸಿದ್ದವು. ಉತ್ಪಾದನಾ ವಲಯಕ್ಕೂ ಸಾಕಷ್ಟು ಪೆಟ್ಟು ಬಿದ್ದಿತ್ತು. ಈಗಾಗಲೇ ಹಂದಿಜ್ವರದ ಪರಿಣಾಮವೂ ಇದೇ ಹಾದಿಯಲ್ಲಿ ಹೋಗುತ್ತಿರುವುದರಿಂದ ವಿಶ್ವದಲ್ಲಿ ಆತಂಕ ಮನೆಮಾಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭರತ್ ಎನ್‌ಎಸಿಎಲ್ ಅಧ್ಯಕ್ಷ
ವಿಜಯಾ ಬ್ಯಾಂಕ್ ನಿವ್ವಳ ಲಾಭ 102.25 ಕೋಟಿ
ಅಮೆರಿಕ ಸರ್ಕಾರದಡಿ ಹೊಸ ಜನರಲ್ ಮೋಟಾರ್ಸ್
ಚುನಾವಣೆಯ ನಂತರ ಆರ್ಥಿಕ ವ್ಯವಹಾರದಲ್ಲಿ ಚೇತರಿಕೆ
ಭಾರತದಲ್ಲಿ 22 ಎಫ್‌ಡಿಐ ಪ್ರಸ್ತಾವಕ್ಕೆ ಸರ್ಕಾರದ ಅಂಕಿತ
ಡಾಲರ್ ಎದುರು 15 ಪೈಸೆ ಕುಸಿದ ರೂಪಾಯಿ