ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬಯೋಕಾನ್: 1673 ಕೋಟಿ ರೂಪಾಯಿಗಳ ಆದಾಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಯೋಕಾನ್: 1673 ಕೋಟಿ ರೂಪಾಯಿಗಳ ಆದಾಯ
ಜೈವಿಕ ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆ ಬಯೋಕಾನ್ ಈ ವರ್ಷದ ಮಾರ್ಚ್ ಅಂತ್ಯಕ್ಕೆ 1673 ಕೋಟಿ ರೂಪಾಯಿಗಳ ಆದಾಯ ಗಳಿಸಿದೆ.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ, ಸಂಸ್ಥೆಯ ಆದಾಯದಲ್ಲಿ ತೆರಿಗೆ ಪಾವತಿಯ ನಂತರ 240 ಕೋಟಿ ರೂಪಾಯಿಗಳ ಲಾಭ ಉಳಿಕೆಯಾಗಿದೆ. ಸಂಶೋಧನಾ ವಲಯದ ಮಾರಾಟದ ಆದಾಯ ಶೇ.28ರಷ್ಟು ಹೆಚ್ಚಿದೆ. ಆದರೆ ಸಂಸ್ಥೆ ಈಬಾರಿ ಸುಮಾರು 147 ಕೋಟಿ ರೂಪಾಯಿಗಳ ಮಾರುಕಟ್ಟೆ ನಷ್ಟ ದಾಖಲಿಸಿದೆ ಎಂದು ತಿಳಿಸಿದರು.

2008-09ರ ಹಣಕಾಸು ವರ್ಷ ತುಂಬ ಕಠಿಣವಾಗಿತ್ತು ಎಂದು ವಿವರಿಸಿದ ಅವರು, ಆರ್ಥಿಕ ಕುಸಿತದ ಪರಿಣಾಮ ಕಂಪನಿಯನ್ನು ಸಾಕಷ್ಟು ತಟ್ಟಿದೆ. ಇದರಿಂದ ನಷ್ಟವೂ ಆಗಿದೆ. ಆದರೆ ಬಯೋಕಾನ್ ಆರೋಗ್ಯ ವಲಯದ ಸಂಸ್ಥೆಯಾದ್ದರಿಂದ ಇತರ ಐಟಿ ವಲಯದಷ್ಟು ಪರಿಣಾಮ ಬೀರಿಲ್ಲ ಎಂದರು. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವ ಪರಿಣಾಮ 2009ರ ವರ್ಷದಲ್ಲೂ ನಷ್ಟ ಕಾಣುತ್ತಿದೆ ಎಂದು ಶಾ ವಿವರಿಸಿದರು.

ಇದಲ್ಲದೆ ಈ ವರ್ಷದಲ್ಲಿ ಆರೋಗ್ಯ ವಲಯದಲ್ಲಿ ಸಾಕಷ್ಟು ಸಂಶೋಧನೆಯನ್ನೂ ಬಯೋಕಾನ್ ಮಾಡಿದೆ ಎಂದ ತಿಳಿಸಿದ ಅವರು, ಬಯೋಕಾನ್ ವಿಶ್ವದ 20ನೇ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದರು. ಅಲ್ಲದೆ, ಭಾರತದ 10 ಪ್ರಮುಖ ಕಂಪನಿಗಳಲ್ಲಿ ಬಯೋಕಾನ್ ಸ್ಥಾನ ಪಡೆದಿದೆ ಎಂದೂ ತಿಳಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಂದಿ ಜ್ವರ: ಆರ್ಥಿಕತೆಯ ಮೇಲೆ ವಿಪರೀತ ಹೊಡೆತ
ಭರತ್ ಎನ್‌ಎಸಿಎಲ್ ಅಧ್ಯಕ್ಷ
ವಿಜಯಾ ಬ್ಯಾಂಕ್ ನಿವ್ವಳ ಲಾಭ 102.25 ಕೋಟಿ
ಅಮೆರಿಕ ಸರ್ಕಾರದಡಿ ಹೊಸ ಜನರಲ್ ಮೋಟಾರ್ಸ್
ಚುನಾವಣೆಯ ನಂತರ ಆರ್ಥಿಕ ವ್ಯವಹಾರದಲ್ಲಿ ಚೇತರಿಕೆ
ಭಾರತದಲ್ಲಿ 22 ಎಫ್‌ಡಿಐ ಪ್ರಸ್ತಾವಕ್ಕೆ ಸರ್ಕಾರದ ಅಂಕಿತ