ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ನ್ಯಾನೋ ಕಾರು ಬುಕ್ಕಿಂಗ್ ಪೂರ್ಣ, ಸಂಖ್ಯೆ ಅಲಭ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ್ಯಾನೋ ಕಾರು ಬುಕ್ಕಿಂಗ್ ಪೂರ್ಣ, ಸಂಖ್ಯೆ ಅಲಭ್ಯ
PTI
ಜನಸಾಮಾನ್ಯರ ಅಗ್ಗದ ಕಾರು ಹೆಗ್ಗಳಿಕೆಯ ಟಾಟಾದ ನ್ಯಾನೋ ಬುಕ್ಕಿಂಗ್ ಅವಧಿ ಮುಗಿದಿದೆ. ಆದರೆ ಈವರೆಗೆ ಎಷ್ಟು ಕಾರುಗಳ ಮುಂಗಡ ಕಾಯ್ದಿರಿಸುವಿಕೆ ನಡೆದಿದೆ ಎಂಬ ಮಾಹಿತಿ ಮಾತ್ರ ಇನ್ನೂ ಲಭ್ಯವಾಗಿಲ್ಲ.

ಟಾಟಾ ಮೋಟಾರ್ಸ್ ಸಂಸ್ಥೆಯ ಮೂಲಗಳ ಪ್ರಕಾರ, ಇನ್ನೂ ಲೆಕ್ಕಾಚಾರ ಕಾರ್ಯ ನಡೆದಿಲ್ಲದಿರುವುದರಿಂದ ಸಂಪೂರ್ಣ ಮಾಹಿತಿ ನೀಡಲು ಈಗ ಅಸಾಧ್ಯ. ಹಾಗೂ ಈವರೆಗೆ ನಡೆದ ಬುಕ್ಕಿಂಗ್‌ನ ಒಟ್ಟು ವಿವರ ಹೊರಬೀಳಲು ಇನ್ನೂ ಸ್ವಲ್ಪ ಕಾಲಾವಕಾಶ ಬೇಕಾಗಬಹುದು.

ಆದರೆ ಕುತೂಹಲ ಹುಟ್ಟಿಸಿರುವ ನ್ಯಾನೋ ಬುಕ್ಕಿಂಗ್ ಎಷ್ಟಿರಬಹುದು ಎಂಬ ಬಗ್ಗೆ ಮಾತ್ರ ಈಗಾಗಲೇ ಮಾರುಕಟ್ಟೆ ವಲಯದಲ್ಲಿ ಹಲವು ಲೆಕ್ಕಾಚಾರಗಳು ನಡೆಯುತ್ತಿವೆ. ಒಂದು ಅಂದಾಜಿನ ಪ್ರಕಾರ, ಸುಮಾರು ಎರಡು ಲಕ್ಷಗಳಿಂದ ಒಂದು ದಶಲಕ್ಷಗಳವರೆಗೂ ನ್ಯಾನೋ ಕಾರುಗಳನ್ನು ಮುಂಗಡ ಕಾಯ್ದಿರಿಸಿರಬಹುದು ಎನ್ನಲಾಗುತ್ತಿದೆ.

ಇನ್ನು ಕೆಲವೇ ದಿನಗಳಲ್ಲಿ ಈವರೆಗೆ ಬುಕ್ಕಿಂಗ್ ನಡೆದ ವಿವರಗಳನ್ನು ಟಾಟಾ ಪ್ರಕಟಿಸಲಿದೆ. ಜುಲೈ ತಿಂಗಳಿಂದ ನ್ಯಾನೋ ಕಾರು ವಿತರಣೆ ಆರಂಭಗೊಳ್ಳಲಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಯೋಕಾನ್: 1673 ಕೋಟಿ ರೂಪಾಯಿಗಳ ಆದಾಯ
ಹಂದಿ ಜ್ವರ: ಆರ್ಥಿಕತೆಯ ಮೇಲೆ ವಿಪರೀತ ಹೊಡೆತ
ಭರತ್ ಎನ್‌ಎಸಿಎಲ್ ಅಧ್ಯಕ್ಷ
ವಿಜಯಾ ಬ್ಯಾಂಕ್ ನಿವ್ವಳ ಲಾಭ 102.25 ಕೋಟಿ
ಅಮೆರಿಕ ಸರ್ಕಾರದಡಿ ಹೊಸ ಜನರಲ್ ಮೋಟಾರ್ಸ್
ಚುನಾವಣೆಯ ನಂತರ ಆರ್ಥಿಕ ವ್ಯವಹಾರದಲ್ಲಿ ಚೇತರಿಕೆ