ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಟ್ರಾಯ್ ಅಧ್ಯಕ್ಷ ಸ್ಥಾನಕ್ಕೆ ಜೆ.ಎಸ್.ಶರ್ಮ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟ್ರಾಯ್ ಅಧ್ಯಕ್ಷ ಸ್ಥಾನಕ್ಕೆ ಜೆ.ಎಸ್.ಶರ್ಮ?
ದೂರಸಂಪರ್ಕ ಇಲಾಖೆಯ ಮಾಜಿ ಕಾರ್ಯದರ್ಶಿ ಹಾಗೂ ಹಾಲಿ ಹೆಚ್ಚುವರಿ ಕಾರ್ಯದರ್ಶಿ ಜೆ.ಎಸ್.ಶರ್ಮ ಅವರು ಈಗ ಖಾಲಿ ಇರುವ ಟ್ರಾಯ್ ಅಧ್ಯಕ್ಷ ಸ್ಥಾನದ ಪ್ರಬಲ ಸ್ಪರ್ಧಿ ಎಂದೇ ಹೇಳಲಾಗುತ್ತಿದೆ.

ಸಚಿವಾಲಯದ ಮೂಲಗಳ ಪ್ರಕಾರ, ಟ್ರಾಯ್ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಮೂವರ ಹೆಸರನ್ನು ಅಂತ್ಯಗೊಳಿಸಲಾಗಿದ್ದು, ಈ ಮೂವರಲ್ಲಿ ಒಬ್ಬರನ್ನು ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ. ಜೆ.ಎಸ್.ಶರ್ಮ, ದೂರಸಂಪರ್ಕ ಇಲಾಖೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದ ಯಶವಂತ್ ಭಾವೆ ಹಾಗೂ ಬಿಎಸ್‌ಎನ್ಎಲ್‌ನ ಮಾಜಿ ಹಣಕಾಸು ನಿರ್ದೇಶಕ ಎಸ್.ಡಿ.ಸಕ್ಸೇನಾ ಅವರೇ ಈಗ ಆಯ್ಕೆಯಾದ ಮೂವರು ಎಂದು ಹೇಳಲಾಗಿದೆ.

ಖಚಿತ ಮೂಲಗಳ ಪ್ರಕಾರ ಈಗಾಗಲೇ ಈ ಮೂವರ ವಿವರಗಳು ಹಾಗೂ ದಾಖಲೆಗಳು ದೂರಸಂಪರ್ಕ ಸಚಿವ ಎ.ರಾಜಾ ಅವರಿಗೆ ತಲುಪಿದ್ದು ಪರಾಮರ್ಶೆಗೆ ಒಳಪಡಿಸಲಾಗುತ್ತಿದೆ. ಹಾಗೂ ಜೆ.ಎಸ್.ಶರ್ಮ ಅವರೇ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ ಎಂದರೂ, ಇನ್ನೂ ಅಧಿಕೃತ ವಿವರಗಳು ಹೊರಬಿದ್ದಿಲ್ಲ. ಆದರೆ ಶರ್ಮ ಅವರು ಈ ಬಗ್ಗೆ ತನಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದೂ ತಿಳಿಸಿದ್ದಾರೆ.

ಟ್ರಾಯ್ ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ದೂರಸಂಪರ್ಕ ಹಾಗೂ ಪ್ರಸಾರ ಸಂಬಂಧೀ ವಿಷಯಗಳನ್ನು ನಿಯಂತ್ರಿಸುವ ಕಾರ್ಯ ಮಾಡುತ್ತದೆ. ಅಲ್ಲದೆ, ದೂರಸಂಪರ್ಕ ವಲಯದ ಸೇವಾದರಗಳು, ಸಂಪರ್ಕ ಹಾಗೂ ಇತರ ದರಗಳ ಬಗ್ಗೆ ಇಲಾಖೆಗೆ ಸೂಚನೆ ಹಾಗೂ ಶಿಫಾರಸು ಮಾಡುವ ಸ್ವಾತಂತ್ರ್ಯ ಟ್ರಾಯ್‌ಗಿದೆ. ಅಷ್ಟೇ ಅಲ್ಲದೆ, ಸರ್ಕಾರದ ಮಧ್ಯಪ್ರವೇಶವಿಲ್ಲದೆ ಕೆಲವು ಸ್ವಯಂನಿರ್ಧಾನ ತೆಗೆದುಕೊಳ್ಳುವ ಅಧಿಕಾರವೂ ಇದಕ್ಕಿದೆ.

ಈ ಮೊದಲು ಡಿ.ಎಸ್.ಮಾಥುರ್ ಈ ಹುದ್ದೆಯಲ್ಲಿದ್ದು, ಡಿಸೆಂಬರ್ 2008ರಲ್ಲಿ ನಿವೃತ್ತಿ ಹೊಂದಿದ್ದರು. ನಂತರ ತೆರವುಗೊಂಡ ಸ್ಥಾನಕ್ಕೆ ಆಯ್ಕೆ ಇನ್ನು ಅಂತಿಮಗೊಳ್ಳಬೇಕಿದೆ. ಈ ಹುದ್ದೆಗೆ ತಿಂಗಳಿಗೆ ಮೂರು ಲಕ್ಷ ರೂಪಾಯಿಗಳ ಆಕರ್ಷಕ ವೇತನವೂ ಇದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನ್ಯಾನೋ ಕಾರು ಬುಕ್ಕಿಂಗ್ ಪೂರ್ಣ, ಸಂಖ್ಯೆ ಅಲಭ್ಯ
ಬಯೋಕಾನ್: 1673 ಕೋಟಿ ರೂಪಾಯಿಗಳ ಆದಾಯ
ಹಂದಿ ಜ್ವರ: ಆರ್ಥಿಕತೆಯ ಮೇಲೆ ವಿಪರೀತ ಹೊಡೆತ
ಭರತ್ ಎನ್‌ಎಸಿಎಲ್ ಅಧ್ಯಕ್ಷ
ವಿಜಯಾ ಬ್ಯಾಂಕ್ ನಿವ್ವಳ ಲಾಭ 102.25 ಕೋಟಿ
ಅಮೆರಿಕ ಸರ್ಕಾರದಡಿ ಹೊಸ ಜನರಲ್ ಮೋಟಾರ್ಸ್