ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಎಸ್‌ಬಿಐ: ಶಿಕ್ಷಣ ಸಾಲದಲ್ಲಿ ಬಡ್ಡಿದರ ಕಡಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಸ್‌ಬಿಐ: ಶಿಕ್ಷಣ ಸಾಲದಲ್ಲಿ ಬಡ್ಡಿದರ ಕಡಿತ
PTI
ವಿದ್ಯಾರ್ಥಿಗಳಿಗೆ ಇಲ್ಲೊಂದು ಸಂತಸದ ಸುದ್ದಿಯಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ಶಿಕ್ಷಣ ಸಾಲದ ಬಡ್ಡಿದರವನ್ನು 200 ಬೇಸಿಸ್ ಪಾಯಿಟ್‌ಗಳಷ್ಟು ಕಡಿಮೆ ಮಾಡಿದೆ. ಈ ಕಡಿತ ಲಭ್ಯವಿರುವುದು ಇದೇ ಮೇ ತಿಂಗಳಿಂದ ಸೆಪ್ಟೆಂಬರ್ ತಿಂಗಳೊಳಗೆ ಶಿಕ್ಷಣ ಸಾಲ ಪಡೆದುಕೊಳ್ಳುವವರಿಗೆ ಮಾತ್ರ ಇದು ಅನ್ವಯಿಸಲಿದೆ.

ನಾಲ್ಕು ಲಕ್ಷ ರೂಪಾಯಿಗಳವರೆಗೆ, ನಾಲ್ಕು ಲಕ್ಷದಿಂದ 7.5 ಲಕ್ಷ ರೂಪಾಯಿಗಳವರೆಗೆ ಹಾಗೂ 7.5 ಲಕ್ಷ ರೂಪಾಯಿಳಿಗಿಂತ ಹೆಚ್ಚು ಸಾಲ ಪಡೆದ ಮೂರು ವರ್ಗಗಳಲ್ಲಿ ಈ ಕಡಿತಗೊಂಡ ಬಡ್ಡಿ ಅನ್ವಯವಾಗುತ್ತದೆ. ಕಡಿತಗೊಂಡ ಬಡ್ಡಿದರದ ಪ್ರಕಾರ, ಈವರೆಗೆ ಶೇ.11.75, ಶೇ.13.25 ಹಾಗೂ ಶೇ.12.25ರಷ್ಟಿದ್ದ ಬಡ್ಡಿದರಗಳು ಇನ್ನು ಮುಂದೆ ಶೇ.11.5, ಶೇ.11.25 ಹಾಗೂ ಶೇ.11ರ ಬಡ್ಡಿದರಕ್ಕೆ ಇಳಿಕೆಯಾಗಿದೆ. ಹೆಣ್ಣು ಮಕ್ಕಳಿಗೆ ಈ ಶಿಕ್ಷಣ ಸಾಲದ ಬಡ್ಡಿದರದಲ್ಲಿ ಮತ್ತೆ ಶೇ.0.5ರಷ್ಟು ಕಡಿತದಲ್ಲಿ ಲಭ್ಯವಾಗುತ್ತದೆ.

7.5 ಲಕ್ಷ ರೂಪಾಯಿಗಳ ಶಿಕ್ಷಣ ಸಾಲಕ್ಕೆ ಏಳುವರ್ಷಗಳ ಅವಧಿ ಲಭ್ಯವಿದ್ದು, ಇಎಂಐ ಕೂಡಾ ಈ ಮೊದಲಿದ್ದ 13,740 ರೂಪಾಯಿಗಳಿಂದ 12,940 ರೂಪಾಯಿಗಳಿಗೆ ಇಳಿದಿದೆ.

ಇದೀಗ ಭಾರತದಲ್ಲಿ ಶಿಕ್ಷಣ ಪಡೆಯುವುದಾದರೆ ಶಿಕ್ಷಣ ಸಾಲವನ್ನು 10 ಲಕ್ಷ ರೂಪಾಯಿಗಳವರೆಗೆ ಬ್ಯಾಂಕ್ ವಿಸ್ತರಿಸಿದ್ದು, ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿದ್ದರೆ, 20 ಲಕ್ಷ ರೂಪಾಯಿಗಳವರೆಗೂ ಸಾಲ ಲಭ್ಯವಾಗುತ್ತದೆ. ಅಲ್ಲದೆ ಸಾಲದ ಪಾವತಿಗೆ ಆಧಾರವಾಗಿಡುವ ವಸ್ತುರಹಿತ ಸಾಲವನ್ನೂ ಬ್ಯಾಂಕ್ ನೀಡುತ್ತಿದೆ. ಈ ರೀತಿಯ ಸಾಲ ಸೌಲಭ್ಯ ಕೇವಲ ನಾಲ್ಕು ಲಕ್ಷ ರೂಪಾಯಿಗಳಿಂತ ಕಡಿಮೆ ಸಾಲ ಪಡೆದವರಿಗೆ ಮಾತ್ರ ಲಭ್ಯವಾಗುತ್ತದೆ.

ಎಸ್‌ಬಿಐ 2008-09ರಲ್ಲಿ ನೀಡಿದ ಸಾಲ 2,653 ಕೋಟಿ ರೂಪಯಿಗಳಿಂದ 7,066 ಕೋಟಿ ರೂಪಾಯಿಗಳಿಗೆ ಏರಿದೆ. ಈವರೆಗೆ ಭಾರತ ಹಾಗೂ ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಿರುವ 3,56,000 ಭಾರತೀಯ ವಿದ್ಯಾರ್ಥಿಗಳಿಗೆ ಎಸ್‌ಬಿಐ ಸಾಲ ನೀಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟ್ರಾಯ್ ಅಧ್ಯಕ್ಷ ಸ್ಥಾನಕ್ಕೆ ಜೆ.ಎಸ್.ಶರ್ಮ?
ನ್ಯಾನೋ ಕಾರು ಬುಕ್ಕಿಂಗ್ ಪೂರ್ಣ, ಸಂಖ್ಯೆ ಅಲಭ್ಯ
ಬಯೋಕಾನ್: 1673 ಕೋಟಿ ರೂಪಾಯಿಗಳ ಆದಾಯ
ಹಂದಿ ಜ್ವರ: ಆರ್ಥಿಕತೆಯ ಮೇಲೆ ವಿಪರೀತ ಹೊಡೆತ
ಭರತ್ ಎನ್‌ಎಸಿಎಲ್ ಅಧ್ಯಕ್ಷ
ವಿಜಯಾ ಬ್ಯಾಂಕ್ ನಿವ್ವಳ ಲಾಭ 102.25 ಕೋಟಿ