ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸ್ಟೈರ್‌ಲೈಟ್: ಲಾಭದಲ್ಲಿ ಶೇ.55ರಷ್ಟು ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ಟೈರ್‌ಲೈಟ್: ಲಾಭದಲ್ಲಿ ಶೇ.55ರಷ್ಟು ಕುಸಿತ
ಅನಿಲ್ ಅಗರ್‌ವಾಲ್ ಒಡೆತನದ ಸ್ಟೆರ್‌ಲೈಟ್ ಇಂಡಸ್ಟ್ರೀಸ್ ತನ್ನ ನಾಲ್ಕನೇ ತ್ರೈಮಾಸಿಕ ವರದಿ ಪ್ರಕಟಿಸಿದ್ದು, ಲಾಭದಲ್ಲಿ ಶೇ.55ರಷ್ಟು ಇಳಿಕೆ ಕಂಡಿದೆ.

ಸ್ಟೆರ್‌ಲೈಟ್ ಇಂಡಸ್ಟ್ರೀಸ್ 598 ಕೋಟಿ ರೂಪಾಯಿಗಳ ನಿವ್ವಳ ಲಾಭ ಗಳಿಸಿದ್ದು, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.55ರಷ್ಟು ಕಡಿಮೆ. ಕಳೆದ ವರ್ಷ ಇದೇ ಸಮಯಕ್ಕೆ ಸಂಸ್ಥೆ 1,318 ಕೋಟಿ ರೂಪಾಯಿಗಳ ಲಾಭ ಗಳಿಸಿತ್ತು.

ಮಾರಾಟದಲ್ಲಿ ಶೇ.36ರಷ್ಟು ಕುಸಿತ ಕಂಡಿದ್ದು, ಕಳೆದ ವರ್ಷದ 6,766 ಕೋಟಿ ರೂಪಾಯಿಗಳು ಈ ವರ್ಷಕ್ಕೆ 4,336ಕ್ಕೆ ಇಳಿದಿದೆ. ಉತ್ಪಾದನಾ ವಲಯದಲ್ಲೂ ಇಳಿಕೆಯಾಗಿದೆ. ಅಲ್ಯುಮಿನಾ ಉತ್ಪಾದನೆ ಸೇ.29ರಷ್ಟು ಕುಸಿದಿದ್ದು 42,000 ಕನ್ ಉತ್ಪಾದಿಸಲಾಗಿದೆ. ಮಾರ್ಚ್‌ನಲ್ಲಿ ಇದು ಶೇ.7.6ರಷ್ಟು ಅಂದರೆ 85,000 ಟನ್‌ಗಳಿಗೆ ಕುಸಿದಿದೆ. ಕಾಪರ್ ಕ್ಯಾಥೋಡ್ ಉತ್ಪಾದನೆಯೂ 88,000 ಟನ್‌ಗಳಿಗೆ ಕುಸಿದಿದೆ.

ಸಂಸ್ಥೆಯ ಒಟ್ಟು ಆದಾಯ ಶೇ.7ರಷ್ಟು ಕುಸಿತ ಕಂಡಿದೆ. ಳೆದ ಬಾರಿ 13,274 ಕೋಟಿ ರೂಪಾಯಿಗಳಿದ್ದ ಆದಾಯ 12,376 ಕೋಟಿ ರೂಪಾಯಿಗಳಿಗೆ ಇಳಿಕೆಯಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಸ್‌ಬಿಐ: ಶಿಕ್ಷಣ ಸಾಲದಲ್ಲಿ ಬಡ್ಡಿದರ ಕಡಿತ
ಟ್ರಾಯ್ ಅಧ್ಯಕ್ಷ ಸ್ಥಾನಕ್ಕೆ ಜೆ.ಎಸ್.ಶರ್ಮ?
ನ್ಯಾನೋ ಕಾರು ಬುಕ್ಕಿಂಗ್ ಪೂರ್ಣ, ಸಂಖ್ಯೆ ಅಲಭ್ಯ
ಬಯೋಕಾನ್: 1673 ಕೋಟಿ ರೂಪಾಯಿಗಳ ಆದಾಯ
ಹಂದಿ ಜ್ವರ: ಆರ್ಥಿಕತೆಯ ಮೇಲೆ ವಿಪರೀತ ಹೊಡೆತ
ಭರತ್ ಎನ್‌ಎಸಿಎಲ್ ಅಧ್ಯಕ್ಷ