ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಶೀಘ್ರವೇ ಬರಲಿದೆ ಮೊಬೈಲ್ ಪೋರ್ಟೆಬಿಲಿಟಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೀಘ್ರವೇ ಬರಲಿದೆ ಮೊಬೈಲ್ ಪೋರ್ಟೆಬಿಲಿಟಿ
PTI
ದಿನದಿಂದ ದಿನಕ್ಕೆ ಭಾರತದಲ್ಲಿ ಮೊಬೈಲ್ ಮಾರುಕಟ್ಟೆ ಬೆಳೆಯುತ್ತಿದ್ದಂತೆಯೇ, ಇದೀಗ ಅಮೆರಿಕ ಮೂಲದ ಟೆಲಿಕಾರ್ಡಿಯಾ ಎಂಬ ಸಂಸ್ಥೆ ಮೊಬೈಲ್ ಸಂಖ್ಯೆಯ ಪೋರ್ಟೆಬಿಲಿಟ್ ಸೌಲಭ್ಯ ಜಾರಿಗೊಳಿಸಲು ಪ್ರಯತ್ನಿಸುತ್ತಿದೆ.

ದಕ್ಷಿಣ ಹಾಗೂ ಪೂರ್ವ ರಾಷ್ಟ್ರಗಳಲ್ಲಿ ಟೆಲಿಕಾರ್ಡಿಯಾ ತನ್ನ ಮೊಬೈಲ್ ಪೋರ್ಟೆಬಿಲಿಟಿ ತರುವ ಚಿಂತನೆಯಲ್ಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಭಾರತದ ದೂರಸಂಪರ್ಕ ಇಲಾಖೆಯಿಂದ ಪರವಾನಿಗೆಯನ್ನೂ ಪಡೆದು ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ.

ಟೆಲಿಕಾರ್ಡಿಯಾ ಸಂಸ್ಥೆ ಎಂಎನ್‌ಪಿ ಇಂಟರ್ ಕನೆಕ್ಷನ್ ಟೆಲಿಕಾಂ ಸೊಲ್ಯೂಷನ್ಸ್ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಕೇಂದ್ರೀಯ ಡಾಟಾಬೇಸ್ ಸೇವೆಗಳ ಕುರಿತಾಗಿ ಕಾರ್ಯಪ್ರವೃತ್ತಿಯ ಹಾದಿಯಲ್ಲಿದೆ.

ಮೊಬೈಲ್ ಪೋರ್ಟೆಬಿಲಿಟಿ ಸೌಲಭ್ಯದ ಮೂಲಕ ಯಾವುದೇ ಒಬ್ಬ ಮೊಬೈಲ್ ಗ್ರಾಹಕ ತನ್ನಲ್ಲಿರುವ ಒಂದು ಸಂಪರ್ಕವನ್ನು ಕಡಿತಗೊಳಿಸಿ ಮತ್ತೊಂದು ಸಂಪರ್ಕ ಪಡೆದರೆ ಆತನ ಮೊಬೈಲ್ ಸಂಖ್ಯೆ ಬದಲಾಯಿಸದೆ ಹಾಗೇ ಉಳಿಸಿಕೊಳ್ಳಬಹುದಾಗಿದೆ.

ಎಂಎನ್‌ಪಿ ಅಧ್ಯಕ್ಷ ರಿಚರ್ಡ್ ಜಕೋಲೆಫ್ ಹೇಳುವಂತೆ, ಮೊಬೈಲ್ ಸಂಖ್ಯೆಯ ಪೋರ್ಟೆಬಿಲಿಟಿ ಸೇವೆ ಒಂದು ಅತ್ಯಾಧುನಿಕ ತಂತ್ರಜ್ಞಾನವಾಗಿದ್ದು, ಎಲ್ಲಿಗೇ ಹೋದರೂ ಸಂಖ್ಯೆ ಬದಲಾಗುವ ತೊಂದರೆಗೆ ಒಳಗಾಗದೆ ಎಲ್ಲರೊಡನೆ ಅದೇ ಸಂಖ್ಯೆಯ ಮೂಲಕ ಸಂಪರ್ಕ ಹೊಂದಿರಬಹುದು ಎಂದು ತಿಳಿಸಿದರು. ಭಾರತ ಸಂಪರ್ಕ ಕ್ರಾಂತಿಯಲ್ಲಿ ವಿಶಿಷ್ಟ ದೇಶವಾಗಿದ್ದು, ಅದೇ ಕಾರಣಕ್ಕೆ ನಮ್ಮನ್ನು ಇಲ್ಲಿಗೆ ಎಳೆದು ತಂದಿದೆ ಎಂದೂ ಅವರು ಹೇಳಿದರು.

ಈಗಾಗಲೇ 14 ದೇಶಗಳಲ್ಲಿ ಈ ಪೋರ್ಟೆಬಿಲಿಟಿ ಸೇವೆ ಆರಂಭಿಸಿ ಸಫಲವಾಗಿರುವ ಟೆಲಿಕಾರ್ಡಿಯಾ 700 ಮಿಲಿಯನ್ ಮೊಬೈಲ್ ಸಂಪರ್ಕಗಳಿಗೆ ಪೊರ್ಟೆಬಿಲಿಟಿಯನ್ನು ತಲುಪಿಸಿದೆ. ಈ ಸೌಲಭ್ಯವನ್ನು ಭಾರತದ ಕೋಲ್ಕತ್ತಾ, ಬೆಂಗಳೂರು, ಚೆನ್ನೈಗಳಲ್ಲಿ ಆರಂಭಿಸಿ ಮತ್ತೆ ವಿಸ್ತರಿಸಲಾಗುತ್ತದೆ ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸ್ಟೈರ್‌ಲೈಟ್: ಲಾಭದಲ್ಲಿ ಶೇ.55ರಷ್ಟು ಕುಸಿತ
ಎಸ್‌ಬಿಐ: ಶಿಕ್ಷಣ ಸಾಲದಲ್ಲಿ ಬಡ್ಡಿದರ ಕಡಿತ
ಟ್ರಾಯ್ ಅಧ್ಯಕ್ಷ ಸ್ಥಾನಕ್ಕೆ ಜೆ.ಎಸ್.ಶರ್ಮ?
ನ್ಯಾನೋ ಕಾರು ಬುಕ್ಕಿಂಗ್ ಪೂರ್ಣ, ಸಂಖ್ಯೆ ಅಲಭ್ಯ
ಬಯೋಕಾನ್: 1673 ಕೋಟಿ ರೂಪಾಯಿಗಳ ಆದಾಯ
ಹಂದಿ ಜ್ವರ: ಆರ್ಥಿಕತೆಯ ಮೇಲೆ ವಿಪರೀತ ಹೊಡೆತ