ಟೆಲಿಕಾಂ ದೈತ್ಯ ಕಂಪೆನಿಯಾದ ಭಾರ್ತಿ ಏರ್ಟೆಲ್ ಮೂಲಸೌಕರ್ಯ ಹಾಗೂ ವಹಿವಾಟು ವಿಸ್ತರಣೆಗಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ 3 ಬಿಲಿಯನ್ ಡಾಲರ್ ಬಂಡವಾಳ ವೆಚ್ಚವನ್ನು ಹೂಡಿಕೆ ಮಾಡಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
3 ಬಿಲಿಯನ್ ಬಂಡವಾಳ ವೆಚ್ಚದಲ್ಲಿ 2 ಬಿಲಿಯನ್ ಡಾಲರ್ಗಳನ್ನು ಮೂಲಸೌಕರ್ಯ ಅಭಿವೃದ್ಧಿಗಾಗಿ ಹಾಗೂ 1 ಬಿಲಿಯನ್ ಡಾಲರ್ಗಳನ್ನು ಗೋಪುರಗಳ ನಿರ್ಮಾಣ ಮತ್ತಿತರ ಕಾರ್ಯಗಳಿಗಾಗಿ ಮೀಸಲಾಗಿಡಲಾಗಿದೆ ಎಂದು ಭಾರ್ತಿ ಏರ್ಟೆಲ್ ಮುಖ್ಯ ಕಾರ್ಯನಿರ್ವಾಹಕ ಮನೋಜ್ ಕೊಹ್ಲಿ ಹೇಳಿದ್ದಾರೆ.
ಮುಂದಿನ ಪೀಳಿಗೆಯ 3ಜಿ ಸೇವೆಗಳನ್ನು ಬಂಡವಾಳ ವೆಚ್ಚದ ಯೋಜನೆಯಡಿಯಲ್ಲಿ ಸೇರಿಸಲಾಗಿಲ್ಲ ಎಂದು ಕೊಹ್ಲಿ ತಿಳಿಸಿದ್ದಾರೆ.
ಶೇರುಪೇಟೆಯ ಬಿಎಸ್ಇ ಸೂಚ್ಯಂಕದಲ್ಲಿ ಶೇ.66 ರಷ್ಟು ಏರಿಕೆ ಕಂಡಿದ್ದು, ತಲಾ ಶೇರಿನ ದರ 730.50 ರೂಪಾಯಿಗಳಿಗೆ ತಲುಪಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಮನೋಜ್ ಕೊಹ್ಲಿ ಹೇಳಿದ್ದಾರೆ. |