ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ದೇಶಿಯ ಕಾರು ಮಾರುಕಟ್ಟೆಗೆ ಚೀನಾ ಲಗ್ಗೆ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೇಶಿಯ ಕಾರು ಮಾರುಕಟ್ಟೆಗೆ ಚೀನಾ ಲಗ್ಗೆ?
ಚೀನಾದ ಪ್ರಖ್ಯಾತ ಕಾರು ತಯಾರಿಕೆ ಕಂಪೆನಿಗಳಾದ ಚೆರ್ರಿ ಅಟೋಮೊಬೈಲ್ ಮತ್ತು ಗ್ರೇಟ್ ವಾಲ್ ಮೋಟಾರ್ಸ್ ಸಂಸ್ಥೆಗಳು ಭಾರತದಲ್ಲಿ ಜಂಟಿ ಸಹಭಾಗಿತ್ವದೊಂದಿಗೆ ಕಾರು ಮಾರುಕಟ್ಟೆಯನ್ನು ಶೀಘ್ರದಲ್ಲಿ ಪ್ರವೇಶಿಸಲಿವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದಲ್ಲಿ ಕಾರುಗಳ ಮಾರಾಟಕ್ಕೆ ಉತ್ತಮ ಮಾರುಕಟ್ಟೆಯಿದ್ದು, ಜಂಟಿ ಸಹಭಾಗಿತ್ವದ ಪಾಲುದಾರಿಕೆಯೊಂದಿಗೆ ವಾಹನೋದ್ಯಮವನ್ನು ಪ್ರವೇಶಿಸಲು ಸಿದ್ದತೆ ನಡೆಸಲಾಗುತ್ತಿದೆ. ಸ್ಥಳೀಯ ಪಾಲುದಾರಿಕೆಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಚೆರ್ರಿ ಅಟೋಮೊಬೈಲ್ ಅಧ್ಯಕ್ಷ ಯೆನ್ ಟೊಂಗ್‌ಯಾವೊ ತಿಳಿಸಿದ್ದಾರೆ.

ಜಾಗತಿಕ ಆರ್ಥಿಕ ಕುಸಿತದಿಂದಾಗಿ ಅಮೆರಿಕ, ಯುರೋಪ್ ಮಾರುಕಟ್ಟೆಗಳ ವಹಿವಾಟು ದುರ್ಬಲಗೊಂಡ ಹಿನ್ನೆಲೆಯಲ್ಲಿ ಭಾರತದ ವಾಹನೋದ್ಯಮ ಕ್ಷೇತ್ರದತ್ತ ಗಮನಹರಿಸಲು ಚೀನಾ ನಿರ್ಧರಿಸಿದೆ ಎಂದು ಯೆನ್ ಹೇಳಿದ್ದಾರೆ.

ಚೆರ್ರಿ ಮೋಟಾರ್ಸ್ ಸಂಸ್ಥೆ ದೇಶದ ವಾಹನೋದ್ಯಮ ತಯಾರಿಕೆ ಕಂಪೆನಿಯಾದ ಸೋನಾಲಿಕಾದೊಂದಿಗೆ ಮಾತುಕತೆಯನ್ನು ಆರಂಭಿಸಿದ್ದು, ಮುಂಬರುವ ಕೆಲ ದಿನಗಳಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಯೆನ್ ವಿವರಣೆ ನೀಡಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉತ್ತೇಜನ ಪ್ಯಾಕೇಜ್‌ಗಳಿಂದ ಆರ್ಥಿಕತೆ ಸುಸ್ಥಿತಿಗೆ: ಮೊಂಟೆಕ್
ಅಕ್ಷಯಾ ತೃತೀಯ ದಿನದಂದು ಚಿನ್ನ ಖರೀದಿಯಲ್ಲಿ ಕುಸಿತ
2009-10ರಲ್ಲಿ 3 ಬಿಲಿಯನ್ ಡಾಲರ್ ಹೂಡಿಕೆ:ಭಾರ್ತಿ
ಏಸರ್ ಇಂಡಿಯಾದಿಂದ 'ಇಎಲ್ 1600'
ಕೆನರಾ ಬ್ಯಾಂಕ್ 718.81 ಕೋಟಿ ನಿವ್ವಳ ಲಾಭ
1300 ಉದ್ಯೋಗಿಗಳ ನೇಮಕ