ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಎರಿಕ್ಸನ್ ನಿವ್ವಳ ಲಾಭದಲ್ಲಿ ಶೇ.35 ರಷ್ಟು ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎರಿಕ್ಸನ್ ನಿವ್ವಳ ಲಾಭದಲ್ಲಿ ಶೇ.35 ರಷ್ಟು ಕುಸಿತ
ಸ್ಟಾಕ್‌ಹೋಂ ಮೊಬೈಲ್ ತಯಾರಿಕೆ ಸಂಸ್ಥೆಯಾದ ಎರಿಕ್ಸನ್‌, ಮೊದಲ ತ್ರೈಮಾಸಿಕ ಅವಧಿಯ ನಿವ್ವಳ ಲಾಭಾಂಶದಲ್ಲಿ ಶೇ.35 ರಷ್ಟು ಕುಸಿತ ಕಂಡಿದೆ.

ಸ್ಟಾಕ್‌ಹೋಂ ಮೂಲದ ಕಂಪೆನಿ ಕಳೆದ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ 2.6 ಬಿಲಿಯನ್ ಕ್ರೊನೊರ್‌ಗಳಷ್ಟು ನಿವ್ವಳ ಲಾಭಗಳಿಸಿತ್ತು. ಪ್ರಸಕ್ತ ಆರ್ಥಿಕ ವರ್ಷದ ಅವಧಿಯಲ್ಲಿ 1.7 ಬಿಲಿಯನ್ ಕ್ರೊನರ್ ನಿವ್ವಳ ಲಾಭಗಳಿಸಿ ಶೇ.35 ರಷ್ಟು ಕುಸಿತ ಕಂಡಿದೆ.

ಜಗತ್ತಿನ ಪ್ರಮುಖ ಮೊಬೈಲ್ ತಯಾರಿಕೆ ಕಂಪೆನಿಯಾದ ಎರಿಕ್ಸನ್‌, ಉಪಕರಣಗಳ ಮಾರಾಟದಲ್ಲಿ ಶೇ12 ರಷ್ಟು ಏರಿಕೆಯಾಗಿದ್ದು, 44.2 ಬಿಲಿಯನ್ ಕ್ರೊನರ್‌ಗಳಿಂದ 49.6 ಬಿಲಿಯನ್‌ ಕ್ರೊನರ್‌ಗಳಿಗೆ ಏರಿಕೆಯಾಗಿದೆ ಎಂದು ತಿಳಿಸಿದೆ.

ಜಾಗತಿಕ ಆರ್ಥಿಕ ಕುಸಿತ ಜಾಗತಿಕ ಮಟ್ಟದ ಮೊಬೈಲ್ ಕಂಪೆನಿಯ ಮೇಲೆ ಅಲ್ಪ ಪರಿಣಾಮ ಬೀರಿದೆ ಎಂದು ಎರಿಕ್ಸನ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರ್ಲ್ -ಹೆನ್ರಿಕ್ ವಾನ್‌ಬರ್ಗ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎರಿಕ್ಸನ್ ಜಂಟಿ ಸಹಭಾಗಿತ್ವದ ಸಂಸ್ಥೆಗಳಾದ ಸೋನಿ ಎರಿಕ್ಸನ್ ಮತ್ತು ವೈರ್‌ಲೆಸ್ ಟೆಕ್ನಾಲಾಜೀಸ್‌ಗಳ ಮೇಲೆ ಜಾಗತಿಕ ಆರ್ಥಿಕ ಕುಸಿತದ ಪರಿಣಾಮ ಬೀರಿದ್ದು, ಗ್ರಾಹಕರ ಬೇಡಿಕೆಯಲ್ಲಿ ಇಳಿಮುಖವಾಗಿದೆ ಎಂದು ವಾನ್‌ಬರ್ಗ್ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸ್ಟಾಕ್ ಹೋಂ, ಎರಿಕ್ಸನ್, Ericson
ಮತ್ತಷ್ಟು
ತೈಲ ಕಂಪೆನಿಗಳಿಂದ ದರ ಇಳಿಕೆ
ದೇಶಿಯ ಕಾರು ಮಾರುಕಟ್ಟೆಗೆ ಚೀನಾ ಲಗ್ಗೆ?
ಉತ್ತೇಜನ ಪ್ಯಾಕೇಜ್‌ಗಳಿಂದ ಆರ್ಥಿಕತೆ ಸುಸ್ಥಿತಿಗೆ: ಮೊಂಟೆಕ್
ಅಕ್ಷಯಾ ತೃತೀಯ ದಿನದಂದು ಚಿನ್ನ ಖರೀದಿಯಲ್ಲಿ ಕುಸಿತ
2009-10ರಲ್ಲಿ 3 ಬಿಲಿಯನ್ ಡಾಲರ್ ಹೂಡಿಕೆ:ಭಾರ್ತಿ
ಏಸರ್ ಇಂಡಿಯಾದಿಂದ 'ಇಎಲ್ 1600'