ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಅರ್ಸೆಲರ್‌ ಮಿತ್ತಲ್‌ನಿಂದ ವೆಚ್ಚ ಕಡಿತ ಘೋಷಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅರ್ಸೆಲರ್‌ ಮಿತ್ತಲ್‌ನಿಂದ ವೆಚ್ಚ ಕಡಿತ ಘೋಷಣೆ
ಜಾಗತಿಕ ಆರ್ಥಿಕ ಕುಸಿತದಿಂದ ಕಂಗಾಲಾದ ಆರ್ಸೆಲರ್ ಮಿತ್ತಲ್ ನಿರಂತರ ತ್ರೈಮಾಸಿಕ ಅವಧಿಯ ನಿವ್ವಳ ಲಾಭದಲ್ಲಿ ನಷ್ಟ ಅನುಭವಿಸುತ್ತಿರುವುದರಿಂದ ಉತ್ಪಾದನೆ ಹಾಗೂ ಉದ್ಯೋಗ ಕಡಿತ ಮತ್ತು ವೇತನ ಇಳಿಕೆಯಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ಮಿತ್ತಲ್ ಸಂಸ್ಥೆಯ ಮೂಲಗಳು ತಿಳಿಸಿವೆ.

ಸವಾಲಿನ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ.ಕಳೆದ ಕೆಲ ತಿಂಗಳುಗಳಿಂದ ಉತ್ಪಾದನೆಯಲ್ಲಿ ಶೇ.50 ರಷ್ಟು ಕಡಿತ ಮಾಡಲಾಗಿದೆ ಎಂದು ಅರ್ಸೆಲರ್ ಮಿತ್ತಲ್ ಮುಖ್ಯಸ್ಥ ಹಾಗೂ ಸಿಇಒ ಲಕ್ಷ್ಮಿ ಮಿತ್ತಲ್ ಹೇಳಿದ್ದಾರೆ.

ಉಕ್ಕು ತಯಾರಿಕೆ ಸಂಸ್ಥೆ ಅರ್ಸೆಲರ್ ಮಿತ್ತಲ್, 9 ಸಾವಿರ ಉದ್ಯೋಗಿಗಳನ್ನು ಹೊರತುಪಡಿಸಿ ಉಳಿದ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಹಾಗೂ ಅಡಳಿತ ಮಂಡಳಿಯಲ್ಲಿರುವ ಹಿರಿಯ ಅಧಿಕಾರಿಗಳಿಗೆ ಶೇ.15 ರಷ್ಟು ವೇತನದಲ್ಲಿ ಕಡಿತ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ

ಕಂಪೆನಿಯಲ್ಲಿ ಉತ್ಪಾದಿಸಲಾದ ಸುಮಾರು 2 ಬಿಲಿಯನ್ ಡಾಲರ್‌ಗಿಂತ ಹೆಚ್ಚಿನ ಉಕ್ಕು ಮಾರಾಟವಾಗದೇ ಉಳಿದಿದ್ದು, ಸಾರ್ವತ್ರಿಕ ಹಾಗೂ ಅಡಳಿತಾತ್ಮಕ ವೆಚ್ಚಗಳಲ್ಲಿ ಗಮನಾರ್ಹವಾಗಿ ಏರಿಕೆಯಾಗಿ ನಷ್ಟ ಅನುಭವಿಸುವಂತಾಗಿದೆ ಎಂದು ಮಿತ್ತಲ್ ಆತಂಕ ವ್ಯಕ್ತಪಡಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಲಕ್ಷ್ಮೀ ಮಿತ್ತಲ್, Laxmi mittal
ಮತ್ತಷ್ಟು
ಎರಿಕ್ಸನ್ ನಿವ್ವಳ ಲಾಭದಲ್ಲಿ ಶೇ.35 ರಷ್ಟು ಕುಸಿತ
ತೈಲ ಕಂಪೆನಿಗಳಿಂದ ದರ ಇಳಿಕೆ
ದೇಶಿಯ ಕಾರು ಮಾರುಕಟ್ಟೆಗೆ ಚೀನಾ ಲಗ್ಗೆ?
ಉತ್ತೇಜನ ಪ್ಯಾಕೇಜ್‌ಗಳಿಂದ ಆರ್ಥಿಕತೆ ಸುಸ್ಥಿತಿಗೆ: ಮೊಂಟೆಕ್
ಅಕ್ಷಯಾ ತೃತೀಯ ದಿನದಂದು ಚಿನ್ನ ಖರೀದಿಯಲ್ಲಿ ಕುಸಿತ
2009-10ರಲ್ಲಿ 3 ಬಿಲಿಯನ್ ಡಾಲರ್ ಹೂಡಿಕೆ:ಭಾರ್ತಿ