ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹಣದುಬ್ಬರ ದರ ಶೇ.0.57ಕ್ಕೆ ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ದರ ಶೇ.0.57ಕ್ಕೆ ಏರಿಕೆ
ಅಹಾರಧಾನ್ಯಗಳು, ತರಕಾರಿ ,ರಬ್ಬರ್ ಮತ್ತು ಖಾದ್ಯ ತೈಲ ಸೇರಿದಂತೆ ಇನ್ನಿತರ ವಸ್ತುಗಳು ದಿನನಿತ್ಯ ದರ ಏರಿಕೆ ಕಾಣುತ್ತಿರುವುದರಿಂದ ಹಣದುಬ್ಬರ ದರ ಏಪ್ರಿಲ್ 18ಕ್ಕೆ ವಾರಂತ್ಯಗೊಂಡಂತೆ ಶೇ.0.26ರಿಂದ ಶೇ.0.57ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ಷಿಕ ಹಣದುಬ್ಬರವನ್ನು ಪರಿಶೀಲಿಸಿದಲ್ಲಿ ಏಪ್ರಿಲ್‌ 18 ಕ್ಕೆ ವಾರಂತ್ಯಗೊಂಡಂತೆ ಶೇ.0.57 ರಷ್ಟು ಏರಿಕೆ ಕಂಡಿದೆ ಎಂದು ಸರಕಾರ ಬಿಡುಗಡೆಗೊಳಿಸಿದ ವರದಿಯಲ್ಲಿ ಪ್ರಕಟಿಸಿದೆ.ಕಳೆದ ವಾರ ಹಣದುಬ್ಬರ ದರ ದಾಖಲೆಯ ಶೇ.0.26ಕ್ಕೆ ಇಳಿಕೆ ಕಂಡಿತ್ತು.

ಉತ್ಪಾದಕ ವಸ್ತುಗಳು ಹಾಗೂ ಅಗತ್ಯ ದಿನಸಿ ವಸ್ತುಗಳ ದರಗಳು ಕ್ರಮವಾಗಿ ಶೇ.0.3 ಹಾಗೂ ಶೇ.1.7 ರಷ್ಟು ಏರಿಕೆ ಕಂಡಿವೆ.ಇಂಧನ, ವಿದ್ಯುತ್ ಮತ್ತು ಲೂಬ್ರಿಕಂಟ್ಸ್ ದರಗಳು ಶೇ.0.1ರಷ್ಟು ಏರಿಕೆ ಕಂಡಿವೆ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಹಣದುಬ್ಬರ ದರ ಕಳೆದ ಎಂಟು ವಾರಗಳಲ್ಲಿ ಇಳಿಕೆಯತ್ತ ಸಾಗಿ ಮಾರ್ಚ್ 14ಕ್ಕೆ ವಾರಂತ್ಯಗೊಂಡಂತೆ ಶೇ.0.27ಕ್ಕೆ ತಲುಪಿತ್ತು. ಆದರೆ ಮಾರ್ಚ್ 21ಕ್ಕೆ ವಾರಂತ್ಯಗೊಂಡಂತೆ ಹಣದುಬ್ಬರ ದರ ಶೇ.0.31 ಕ್ಕೆ ಏರಿಕೆ ಕಂಡಿತ್ತು.

ನಂತರ ಸತತ ಎರಡು ವಾರಗಳ ಅವಧಿಗೆ ಇಳಿಕೆ ಕಂಡ ಹಣದುಬ್ಬರ ದರ ಏಪ್ರಿಲ್ 18ಕ್ಕೆ ವಾರಂತ್ಯಗೊಂಡಂತೆ ಶೇ.0.26ರಿಂದ ಶೇ.0.57ಕ್ಕೆ ಏರಿಕೆ ಕಂಡಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆಹಾರಧಾನ್ಯ, ಬೆಲೆ ಏರಿಕೆ, vegetables, inflation
ಮತ್ತಷ್ಟು
ಅರ್ಸೆಲರ್‌ ಮಿತ್ತಲ್‌ನಿಂದ ವೆಚ್ಚ ಕಡಿತ ಘೋಷಣೆ
ಎರಿಕ್ಸನ್ ನಿವ್ವಳ ಲಾಭದಲ್ಲಿ ಶೇ.35 ರಷ್ಟು ಕುಸಿತ
ತೈಲ ಕಂಪೆನಿಗಳಿಂದ ದರ ಇಳಿಕೆ
ದೇಶಿಯ ಕಾರು ಮಾರುಕಟ್ಟೆಗೆ ಚೀನಾ ಲಗ್ಗೆ?
ಉತ್ತೇಜನ ಪ್ಯಾಕೇಜ್‌ಗಳಿಂದ ಆರ್ಥಿಕತೆ ಸುಸ್ಥಿತಿಗೆ: ಮೊಂಟೆಕ್
ಅಕ್ಷಯಾ ತೃತೀಯ ದಿನದಂದು ಚಿನ್ನ ಖರೀದಿಯಲ್ಲಿ ಕುಸಿತ