ಇನ್ಫೋಸಿಸ್ ಸಹಸಂಸ್ಥಾಪಕ ನಂದನ್ ನಿಲೇಕಣಿ ಮತ್ತು ಎ.ಆರ್ ರೆಹಮಾನ್ ಸೇರಿದಂತೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಮೆಕ್ಸಿಕೊದ ಬಿಲಿಯನೇರ್ ಕಾರ್ಲೊಸ್ ಸ್ಲಿಮ್ ಅವರುಗಳು ಅಮೆರಿಕದ ಟೈಮ್ಸ್ ಮ್ಯಾಗ್ಜಿನ್ ಪತ್ರಿಕೆ ಬಿಡುಗಡೆ ಮಾಡಿದ ಜಗತ್ತಿನ ಪ್ರಭಾವಿಗಳ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ.
ಬ್ರಿಟನ್ ಪ್ರಧಾನಿ ಗೊರ್ಡಾನ್ ಬ್ರೌನ್, ಜರ್ಮನ್ ಚಾನ್ಸೆಲರ್ ಅಂಜೆಲಾ ಮರ್ಕಲ್, ಫ್ರೆಂಚ್ ಅಧ್ಯಕ್ಷ ನಿಕೋಲಸ್ ಸರ್ಕೊಜಿ ಅಮೆಜಾನ್ ಡಾಟ್ಕಾಂ ಸಂಸ್ಥಾಪಕ ಜೆಫ್ ಬೆಝೊಸ್ ಮತ್ತು ಮಾಧ್ಯಮಗಳ ತಾರೆ ಒಪೆರಾ ವಿನ್ಫ್ರೆ ಸೇರಿದಂತೆ ಇನ್ನಿತರರು ಪ್ರಸಕ್ತ ವರ್ಷದ ಪ್ರಭಾವಿಗಳ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ ಎಂದು ಮ್ಯಾಗ್ಜಿನ್ ಮೂಲಗಳು ತಿಳಿಸಿವೆ.
ಭಾರತೀಯರಾದ ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಮತ್ತು ಇತ್ತೀಚೆಗೆ ಸ್ಲಮ್ಡಾಗ್ ಮಿಲಿಯನೇರ್ ಚಿತ್ರದ ಸಂಗೀತಕ್ಕೆ ಎರಡು ಆಸ್ಕರ್ ಪ್ರಶಸ್ತಿ ಪಡೆದ ಎ.ಆರ್.ರೆಹಮಾನ್ ಪ್ರಭಾವಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ. |