ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 110 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿದ ಜೆಟ್ ಏರ್‌ವೇಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
110 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿದ ಜೆಟ್ ಏರ್‌ವೇಸ್
PTI
ಹೆಚ್ಚುತ್ತಿರುವ ವೆಚ್ಚ, ಇಳಿಕೆಯಾಗುತ್ತಿರುವ ಆದಾಯದಿಂದ ಕಂಗೆಟ್ಟ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್‌ವೇಸ್, ಮೇ 1 ಕಾರ್ಮಿಕರ ದಿನದಂದು 110 ಉದ್ಯೋಗಿಗಳನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.

ವಜಾಗೊಂಡ 110 ಮಂದಿ ನೌಕರರಲ್ಲಿ 50 ಉದ್ಯೋಗಿಗಳು ಗುತ್ತಿಗೆ ಆಧಾರಿತ ಕೆಲಸದಲ್ಲಿದ್ದು, 60 ಉದ್ಯೋಗಿಗಳು ಪ್ರೋಬೇಷನರಿ ಹಂತದಲ್ಲಿದ್ದರು ಎಂದು ಜೆಟ್ ಮೂಲಗಳು ತಿಳಿಸಿವೆ.

ಸಂಸ್ಥೆಯ ಉಳಿದ 60 ಉದ್ಯೋಗಿಗಳಿಗೆ ಪಿಂಕ್‌ ಸ್ಲಿಪ್‌ ನೀಡಿದ ಕುರಿತಂತೆ ಕೇಳಿದಾಗ, ವಿಮಾನಯಾನ ಸಂಸ್ಥೆಯ ಅಡಳಿತ ಮಂಡಳಿ ಪ್ರೋಬೇಷನರಿ ಹಂತದಲ್ಲಿರುವ ಉದ್ಯೋಗಿಗಳನ್ನು ವಜಾಗೊಳಿಸುವ ತೀರ್ಮಾನ ತೆಗೆದುಕೊಂಡಿದ್ದು ಕಾನೂನಿನ ವ್ಯಾಪ್ತಿಯಲ್ಲಿ ಅವರ ಸೇವೆಯನ್ನು ವಜಾಗೊಳಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಜಾಗತಿಕ ಆರ್ಥಿಕ ಕುಸಿತದ ಸವಾಲನ್ನು ಎದುರಿಸುತ್ತಿರುವ ಜೆಟ್ ಏರ್‌ವೇಸ್, ಆರ್ಥಿಕತೆಯನ್ನು ಬಲಿಷ್ಠಗೊಳಿಸಲು ನೀತಿಗಳಲ್ಲಿ ಹೆಚ್ಚುವರಿ ಬದಲಾವಣೆ ತರಲಾಗುತ್ತಿದ್ದು, ಗುತ್ತಿಗೆ ಆಧಾರಿತ ನೌಕರರನ್ನು ಮಾತ್ರ ವಜಾಗೊಳಿಸಲಾಗಿದೆ ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಜೆಟ್ ಏರ್‌ವೇಸ್ ಸಂಸ್ಥೆ 75 ಸಾವಿರಕ್ಕಿಂತ ಹೆಚ್ಚಿನ ವೇತನ ಪಡೆಯುವ ಉದ್ಯೋಗಿಗಳ ವೇತನದಲ್ಲಿ ಶೇ.25 ರಷ್ಟು ಕಡಿತ ಘೋಷಿಸಿದ ಕೆಲವೇ ದಿನಗಳ ನಂತರ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸರ್ವರಿಗೂ ಆರೋಗ್ಯ ವಿಮೆ ಯೋಜನೆ ಜಾರಿ:ಅಸೋಚಾಮ್
ಏರ್‌ಇಂಡಿಯಾ ಮುಖ್ಯವ್ಯವಸ್ಥಾಪಕರಾಗಿ ಅರವಿಂದ್ ನೇಮಕ
ವಿದೇಶಿ ಮೀಸಲು ಸಂಗ್ರಹದಲ್ಲಿ ಏರಿಕೆ
ಟೈಮ್ಸ್ ಪ್ರಭಾವಿಗಳ ಪಟ್ಟಿಯಲ್ಲಿ ನಿಲೇಕಣಿ, ರೆಹಮಾನ್
ಡಿಎಲ್‌ಎಫ್ ನಿವ್ವಳ ಲಾಭದಲ್ಲಿ ಭಾರಿ ಕುಸಿತ
ಅರ್ಜಿ ತಿರಸ್ಕೃತ