ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ದೇಶದ ಆರ್ಥಿಕ ವೃದ್ಧಿ ದರ ಶೇ.6.5 ರಷ್ಟಾಗಲಿದೆ:ಪಿಎಂಇಎಸಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೇಶದ ಆರ್ಥಿಕ ವೃದ್ಧಿ ದರ ಶೇ.6.5 ರಷ್ಟಾಗಲಿದೆ:ಪಿಎಂಇಎಸಿ
ದೇಶದ ಆರ್ಥಿಕ ಅಭಿವೃದ್ಧಿ ದರ 2009-10ರ ಆರ್ಥಿಕ ಸಾಲಿನಲ್ಲಿ ಶೇ.6.5 ರಿಂದ ಶೇ.7ಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ಪ್ರಧಾನಮಂತ್ರಿಗಳ ಸಲಹಾ ಸಮಿತಿ ಅಭಿಪ್ರಾಯಪಟ್ಟಿದೆ.

ಪ್ರಸಕ್ತ ವರ್ಷದ ಆರ್ಥಿಕ ಸಾಲಿನಲ್ಲಿ ವೃದ್ಧಿ ದರ ಷೇ.6.5 ರಿಂದ ಶೇ.7ಕ್ಕೆ ತಲುಪುವ ಸಾಧ್ಯತೆಗಳಿವೆ ಎಂದು ಪ್ರಧಾನ ಮಂತ್ರಿಗಳ ಸಲಹಾ ಸಮಿತಿಯ ಅಧ್ಯಕ್ಷ ಸುರೇಶ್ ತೆಂಡೂಲ್ಕರ್‌ ಹೇಳಿದ್ದಾರೆ.

ಕೇಂದ್ರ ಸರಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌ಗಳು ಬಡ್ಡಿ ದರವನ್ನು ಕಡಿತಗೊಳಿಸಿರುವುದರಿಂದ ವೃದ್ಧಿ ದರ ಏರಿಕೆಯಾಗಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ವಿತ್ತ ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರರಾದ ಅರವಿಂದ್ ವೀರಮಣಿ ಕೂಡಾ ದೇಶದ ಆರ್ಥಿಕ ಅಭಿವೃದ್ಧಿ ದರ ಶೇ6.5 ರಿಂದ ಶೇ.7.5 ರವರೆಗೆ ತಲುಪುವ ವಿಶ್ವಾಸವಿದೆ ಎಂದು ಹೇಳಿಕೆ ನೀಡಿದ್ದಾರೆ.

ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕಾನಾಮಿಕ್ ರಿಸರ್ಚ್ ವೃದ್ಧಿ ದರ ಶೇ6.5 ರ ಗುರಿಯನ್ನು ತಲುಪಲಿದೆ ಎಂದು ಹೇಳಿಕೆ ನೀಡಿದ್ದರೇ ಐಸಿಆರ್‌ಎ ಸಮೀಕ್ಷಾ ಸಂಸ್ಥೆ ಶೇ.6.5 ರಿಂದ ಶೇ.7.5ಕ್ಕೆ ತಲುಪಲಿದೆ ಎಂದು ಹೊರಡಿಸಿದ ವರದಿಯಲ್ಲಿ ಬಹಿರಂಗಪಡಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
110 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿದ ಜೆಟ್ ಏರ್‌ವೇಸ್
ಸರ್ವರಿಗೂ ಆರೋಗ್ಯ ವಿಮೆ ಯೋಜನೆ ಜಾರಿ:ಅಸೋಚಾಮ್
ಏರ್‌ಇಂಡಿಯಾ ಮುಖ್ಯವ್ಯವಸ್ಥಾಪಕರಾಗಿ ಅರವಿಂದ್ ನೇಮಕ
ವಿದೇಶಿ ಮೀಸಲು ಸಂಗ್ರಹದಲ್ಲಿ ಏರಿಕೆ
ಟೈಮ್ಸ್ ಪ್ರಭಾವಿಗಳ ಪಟ್ಟಿಯಲ್ಲಿ ನಿಲೇಕಣಿ, ರೆಹಮಾನ್
ಡಿಎಲ್‌ಎಫ್ ನಿವ್ವಳ ಲಾಭದಲ್ಲಿ ಭಾರಿ ಕುಸಿತ