ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಎಸ್‌ಬಿಐನಿಂದ ಠೇವಣಿ ಬಡ್ಡಿ ದರ ಕಡಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಸ್‌ಬಿಐನಿಂದ ಠೇವಣಿ ಬಡ್ಡಿ ದರ ಕಡಿತ
ದೇಶದ ನಂಬರ್ ಒನ್ ಸ್ಥಾನದಲ್ಲಿರುವ ಸಾರ್ವಜನಿಕ ಕ್ಷೇತ್ರದ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ ಮೇ 4 ರಿಂದ ಜಾರಿಯಾಗುವಂತೆ ಠೇವಣಿ ಬಡ್ಡಿದರದಲ್ಲಿ ಶೇ.0.25 ರಷ್ಟು ಕಡಿತಗೊಳಿಸಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಒಂದು ವರ್ಷದಿಂದ ಎರಡು ವರ್ಷದೊಳಗಿನ ಠೇವಣಿಗಳಿಗೆ ಮೊದಲಿದ್ದ ಶೇ.7.75ರ ಬಡ್ಡಿದರವನ್ನು ಶೇ.7.5ಕ್ಕೆ ಇಳಿಕೆ ಮಾಡಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಅದರಂತೆ, ಎರಡು ವರ್ಷಗಳಿಂದ 1 ಸಾವಿರ ದಿನಗಳವರೆಗಿನ ಠೇವಣಿಗಳಿಗೆ ಶೇ.8 ರಷ್ಟಿದ್ದ ಬಡ್ಡಿ ದರವನ್ನು ಶೇ.7.75ಕ್ಕೆ ಇಳಿಕೆ ಮಾಡಲಾಗಿದ್ದು, 1 ಸಾವಿರ ದಿನಗಳಿಗಿಂತ ಹೆಚ್ಚಿನ ಠೇವಣಿಗಳಿಗೆ ಶೇ.8.25 ರಷ್ಟಿದ್ದ ಬಡ್ಡಿದರವನ್ನು ಶೇ.8ಕ್ಕೆ ಇಳಿಕೆ ಮಾಡಲಾಗಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

1 ಸಾವಿರ ದಿನದೊಳಗಿನಿಂದ ಮೂರು ವರ್ಷಗಳಿಗಿಂತ ಕಡಿಮೆ ಮತ್ತು 3-5 ವರ್ಷದವರೆಗಿನ ಠೇವಣಿಗಳಿಗಿದ್ದ ಬಡ್ಡಿದರವನ್ನು ಶೇ.8 ರಿಂದ ಶೇ.7.75ಕ್ಕೆ ಇಳಿಕೆ ಮಾಡಿದೆ.

5-8 ವರ್ಷದೊಳಗಿನ ಠೇವಣಿಗಳಿಗೆ ಮೊದಲಿದ್ದ ಶೇ.8.25 ಬಡ್ಡಿದರವನ್ನು ಶೇ.8ಕ್ಕೆ ಮತ್ತು 8-10 ವರ್ಷದೊಳಗಿನ ಹಾಗೂ ಶೇ.8.5 ರಷ್ಟಿದ್ದ ಬಡ್ಡಿದರವನ್ನು ಶೇ.8.25ಕ್ಕೆ ಇಳಿಕೆ ಮಾಡಿದೆ ಎಂದು ಎಸ್‌ಬಿಐ ಬ್ಯಾಂಕ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೇಶದ ಆರ್ಥಿಕ ವೃದ್ಧಿ ದರ ಶೇ.6.5 ರಷ್ಟಾಗಲಿದೆ:ಪಿಎಂಇಎಸಿ
110 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿದ ಜೆಟ್ ಏರ್‌ವೇಸ್
ಸರ್ವರಿಗೂ ಆರೋಗ್ಯ ವಿಮೆ ಯೋಜನೆ ಜಾರಿ:ಅಸೋಚಾಮ್
ಏರ್‌ಇಂಡಿಯಾ ಮುಖ್ಯವ್ಯವಸ್ಥಾಪಕರಾಗಿ ಅರವಿಂದ್ ನೇಮಕ
ವಿದೇಶಿ ಮೀಸಲು ಸಂಗ್ರಹದಲ್ಲಿ ಏರಿಕೆ
ಟೈಮ್ಸ್ ಪ್ರಭಾವಿಗಳ ಪಟ್ಟಿಯಲ್ಲಿ ನಿಲೇಕಣಿ, ರೆಹಮಾನ್