ಹೊಸ ಪಿಂಚಣಿ ಯೋಜನೆಯ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಕೇಂದ್ರ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಚುನಾವಣಾ ಆಯೋಗ ನೋಟಿಸು ಕಳುಹಿಸಿದೆ. ಸುದ್ದಿ ಪತ್ರಿಕೆಗಳಲ್ಲಿ ಜಾಹೀರಾತು ನೀಡುವಾಗ ಚುನಾವಣಾ ಆಯೋಗ ನೀಡಿದ ನಿರ್ದೇಶನಗಳನ್ನು ಪಾಲಿಸಿಲ್ಲವೆಂಬ ಆರೋಪದ ಹಿನ್ನಲೆಯಲ್ಲಿ ನೋಟಿಸನ್ನು ಜ್ಯಾರಿಗೊಳಿಸಲಾಗಿದ್ದು, ಮೇ ಐದರೊಳಗೆ ವಿವರಣೆ ನೀಡಬೇಕೆಂದು ಆದೇಶಿಸಲಾಗಿದೆ. |