ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 2010ರಲ್ಲಿ ಹೊಸ ಗ್ರಾಹಕ ಬೆಲೆ ಸೂಚ್ಯಂಕ ನಿಗದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
2010ರಲ್ಲಿ ಹೊಸ ಗ್ರಾಹಕ ಬೆಲೆ ಸೂಚ್ಯಂಕ ನಿಗದಿ
ಹಣದುಬ್ಬರ ಸೊನ್ನೆಯ ಸಮೀಪ ಬರುತ್ತಿದ್ದರೂ ಗಗನಕ್ಕೇರುತ್ತಿರುವ ಬೆಲೆಯ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭ ಇದೀಗ ಸರ್ಕಾರ ಮುಂದಿನ ವರ್ಷ (2010) ಆಗಸ್ಟ್ ತಿಂಗಳಿಂದ ಹೊಸ ಗ್ರಾಹಕ ಬೆಲೆ ಸೂಚ್ಯಂಕವನ್ನು ಅಳವಡಿಸಲು ಚಿಂತಿಸಿದೆ. ಹೊಸ ಈ ಗ್ರಾಹಕ ಬೆಲೆ ಸೂಚ್ಯಂಕ ನಾಲ್ಕು ಉಪ ವಿಭಾಗಗಳನ್ನು ಹೊಂದಲಿದ್ದು, ಅವುಗಳು ರಾಷ್ಟ್ರೀಯ, ಗ್ರಾಮೀಣ, ನಗರ ಹಾಗೂ ರಾಜ್ಯ ಮಟ್ಟದ ವಿಭಾಗಗಳಲ್ಲಿ ತಿಂಗಳ ಆಧಾರದಲ್ಲಿ ಅಳವಡಿಸಲಾಗುತ್ತದೆ.

ಸೆಂಟ್ರಲ್ ಸ್ಟಾಟಿಸ್ಟಿಕಲ್ ಆರ್ಗನೈಸೇಶನ್‌ನ ಅಧ್ಯಕ್ಷ ಪ್ರಣಬ್ ಸೇನ್ ಹೇಳವಂತೆ, ಇದೇ ಜುಲೈ ತಿಂಗಳಿಂದಲೇ ಈ ಕುರಿತು ಗ್ರಾಮೀಣ ಹಾಗೂ ನಗರ ಮಟ್ಟದಲ್ಲಿ ಮಾಹಿತಿ ಕಲೆ ಹಾಕುವ ಬೃಹತ್ ಕಾರ್ಯಕ್ರಮ ನಡೆಯಲಿದೆ. ನಂತರ ಒಂದು ವರ್ಷದಲ್ಲಿ ಸುದೀರ್ಘ ಅವಲೋಕನದ ನಂತರ 2010ರ ಆಗಸ್ಟ್ ತಿಂಗಳಲ್ಲಿ ಹೊಸ ಗ್ರಾಹಕ ಬೆಲೆ ಸೂಚ್ಯಂಕ ಜಾರಿಗೆ ಬರಲಿದೆ.

2,400 ಪೋಸ್ಟ್‌ಮೆನ್‌ಗಳ ಸಹಾಯದಿಂದ ದೇಶದ 1,200 ಹಳ್ಳಿಗಳ ರೀಟೈಲ್ ಬೆಲೆಯ ಮಾಹಿತಿಯನ್ನು ಕಲೆಹಾಕಲಾಗುತ್ತದೆ. ಇದೇ ಮೇ ತಿಂಗಳಲ್ಲೇ ಪೋಸ್ಟ್‌ಮೆನ್‌ಗಳನ್ನು ಆಯ್ಕೆ ಮಾಡಿ ಅವರಿಗೆ ಇದಕ್ಕಾಗಿ ಜೂನ್ ತಿಂಗಳಾರಂಭದಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಪ್ರಣಬ್ ತಿಳಿಸಿದರು.

ನಗರ ಪ್ರದೇಶದಲ್ಲಿ ಹೊಸ ಗ್ರಾಹಕ ಬೆಲೆ ಸೂಚ್ಯಂಕ ಜಾರಿಗೆ ತರಲು ಈಗಾಗಲೇ ಪೂರಕ ತಯಾರಿ ಮಾರ್ಚ್ ತಿಂಗಳಲ್ಲೇ ನಡೆದಿದೆ. ದೇಶದ 100 ನಗರ ಹಾಗೂ ಪಟ್ಟಣಗಳ ರೀಟೈಲ್ ಔಟ್‌ಲೆಟ್‌ಗಳಲ್ಲಿ ಮಾಹಿತಿ ಕಲೆ ಹಾಕಲು ತಯಾರಿ ನಡೆದಿದೆ ಎಂದು ಪ್ರಣಬ್ ಸೇನ್ ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ರೀಟೈಲ್ ಬೆಲೆಯನ್ನು ಕಲೆ ಹಾಕುವುದು ಅಷ್ಟು ಸುಲಭವಲ್ಲ. ಹಾಗೂ ಇದನ್ನು ಕಲೆ ಹಾಕದೆ ಹೊಸ ಗ್ರಾಹಕ ಬೆಲೆ ಸೂಚ್ಯಂಕ ತರುವುದು ಅಷ್ಟು ಸುಲಭವೂ ಅಲ್ಲ. ಹಾಗಾಗಿ ಪೋಸ್ಟ್‌ಮೆನ್‌ಗಳನ್ನು ಈ ಕಾಯಕದಲ್ಲಿ ತೊಡಗಿಸುವ ಮೂಲಕ ಪ್ರತಿ ವರ್ಷ ಸರ್ಕಾರಕ್ಕೆ ಐದು ಕೋಟಿ ರೂಪಾಯಿಗಳಷ್ಟು ಪ್ರತಿವರ್ಷ ಉಳಿಕೆಯಾಗುತ್ತದೆ ಎಂದು ಸೇನ್ ತಿಳಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೇಶದಲ್ಲಿ ಹೊಸದಾಗಿ 15,300 ಎಟಿಎಂ
ಸಕ್ಕರೆ ಆಮದು: ಕೇಂದ್ರ ಸರ್ಕಾರ ತೀರ್ಮಾನ
ಇನ್ಫೋಸಿಸ್ ಹೆಚ್ಚುವರಿ ನಿರ್ದೇಶಕರಾಗಿ ಕಾಮತ್‌
ಕೇಂದ್ರಕ್ಕೆ ಚು. ಆಯೋಗ ನೋಟಿಸು
ಬಿಎಸ್‌ಎನ್‌ಎಲ್ ಹೊಸ ಸಂಪರ್ಕದಲ್ಲಿ ಶೇ.11ರಷ್ಟು ಏರಿಕೆ
ಕಪ್ಪುಹಣ: ಸು.ಕೋ.ಗೆ ಕೇಂದ್ರ ಪ್ರಮಾಣ ಪತ್ರ ಸಲ್ಲಿಕೆ