ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸೂಕ್ತ ಸಮಯದಲ್ಲಿ ಅಧಿಕಾರ ಸ್ವೀಕರಿಸಿದ್ದೇನೆ:ಕೋಚರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೂಕ್ತ ಸಮಯದಲ್ಲಿ ಅಧಿಕಾರ ಸ್ವೀಕರಿಸಿದ್ದೇನೆ:ಕೋಚರ್
ಬ್ಯಾಂಕ್‌ಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ ಹಾಗೂ ಇಬ್ಬರು ಹಿರಿಯ ಅಧಿಕಾರಿಗಳ ರಾಜೀನಾಮೆಯ ಮಧ್ಯೆಯು ನಾನು ಸೂಕ್ತ ಸಮಯದಲ್ಲಿ ಅಧಿಕಾರವಹಿಸಿಕೊಂಡಿದ್ದು, ಹಿಂದಿದ್ದ ಕೆ.ವಿ.ಕಾಮತ್ ಮತ್ತು ಎನ್‌ ವಾಗ್ವಲ್‌ ಅವರ ಯಶೋಗಾಥೆಯನ್ನು ಮುಂದುವರಿಸುವುದಾಗಿ ಐಸಿಐಸಿಐ ಬ್ಯಾಂಕ್‌ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದಾ ಕೋಚರ್ ಹೇಳಿದ್ದಾರೆ.

ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಬದಲಾವಣೆಯಿಂದ ದೈನಂದಿನ ಕೆಲಸದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಅದಕ್ಕಾಗಿ ಯಾವದೇ ಯೋಜನೆಗಳನ್ನು ರೂಪಿಸುವ ಅಗತ್ಯವಿಲ್ಲ. ಸರಕಾರ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಧ್ಯೆ ಚರ್ಚೆ ನಡೆಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಬ್ಯಾಂಕ್‌ಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ ಕುರಿತಂತೆ ಉಂಟಾದ ಬಿಕ್ಕಟ್ಟು ತಿಳಿಯಾಗಲಿದೆ ಎಂದು ಕೋಚರ್ ತಿಳಿಸಿದ್ದಾರೆ.

ಐಸಿಐಸಿಐ ಬ್ಯಾಂಕ್‌ನ ಹಿಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೆ.ವಿ.ಕಾಮತ್, ನಾನ್ -ಎಕ್ಸಿಕ್ಯೂಟಿವ್ ಅಧ್ಯಕ್ಷರಾದ ಹಿನ್ನೆಲೆಯಲ್ಲಿ ತೆರುವಾದ ಸ್ಥಾನಕ್ಕೆ ಕೋಚರ್ ಮೇ 1ರಂದು ಅಧಿಕಾರ ಸ್ವೀಕರಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
2010ರಲ್ಲಿ ಹೊಸ ಗ್ರಾಹಕ ಬೆಲೆ ಸೂಚ್ಯಂಕ ನಿಗದಿ
ದೇಶದಲ್ಲಿ ಹೊಸದಾಗಿ 15,300 ಎಟಿಎಂ
ಸಕ್ಕರೆ ಆಮದು: ಕೇಂದ್ರ ಸರ್ಕಾರ ತೀರ್ಮಾನ
ಇನ್ಫೋಸಿಸ್ ಹೆಚ್ಚುವರಿ ನಿರ್ದೇಶಕರಾಗಿ ಕಾಮತ್‌
ಕೇಂದ್ರಕ್ಕೆ ಚು. ಆಯೋಗ ನೋಟಿಸು
ಬಿಎಸ್‌ಎನ್‌ಎಲ್ ಹೊಸ ಸಂಪರ್ಕದಲ್ಲಿ ಶೇ.11ರಷ್ಟು ಏರಿಕೆ