ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 2.03 ಲಕ್ಷ ನ್ಯಾನೋ ಬುಕ್ಕಿಂಗ್, ಹುಸಿಯಾದ ನಿರೀಕ್ಷೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
2.03 ಲಕ್ಷ ನ್ಯಾನೋ ಬುಕ್ಕಿಂಗ್, ಹುಸಿಯಾದ ನಿರೀಕ್ಷೆ
PTI
ಜನಸಾಮಾನ್ಯನ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾದ ನ್ಯಾನೋ ಮುಂಗಡ ಬುಕ್ಕಿಂಗ್ ನಿರೀಕ್ಷೆಯ ಮಟ್ಟ ತಲುಪುವಲ್ಲಿ ವಿಫಲವಾಗಿದೆ. ಒಟ್ಟು 2.03 ಲಕ್ಷ ನ್ಯಾನೋಗಳ ಬುಕ್ಕಿಂಗ್ ನಡೆದಿದ್ದು, ಉದ್ಯಮದ ಅಂದಾಜಿನ ಪ್ರಕಾರ 5 ಲಕ್ಷ ಕಾರುಗಳ ಬುಕ್ಕಿಂಗ್ ನಡೆಯಬಹುದೆಂದು ಅಂದಾಜಿಸಲಾಗಿತ್ತು. ಆದರೂ ಟಾಟಾ ಮೋಟಾರ್ಸ್ ಅಧಿಕಾರಿಗಳು ಇದೊಂದು ಉತ್ತಮ ಪ್ರೋತ್ಸಾಹದಾಯಕ ಬೆಳವಣಿಗೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಟಾಟಾದ ನ್ಯಾನೋ ಕಾರಿಗಾಗಿ ಸುಮಾರು 2.03 ಲಕ್ಷದಷ್ಟು ಸಂಪೂರ್ಣ ಪಾವತಿಯ ಬುಕ್ಕಿಂಗ್ ನಡೆದಿವೆ. ಇದರ ಮೂಲಕ ಒಟ್ಟು 2,500 ಕೋಟಿ ರುಪಾಯಿಗಳ ಸಂಗ್ರಹವಾಗಿದ್ದು, ಮಾರ್ಚ್ 23ರಂದು ಬಿಡುಗಡೆಯಾದ ಕಾರಿಗೆ ಇಷ್ಟೊಂದು ದೊಡ್ಡ ಪ್ರತಿಕ್ರಿಯೆ ಸಿಕ್ಕಿರುವುದು ನಿಜಕ್ಕೂ ಪ್ರೋತ್ಸಾಹದಾಯಕ ಎಂದು ಟಾಟಾ ಮೋಟಾರ್ಸ್ ಹೇಳಿಕೊಂಡಿದೆ.

ಉದ್ಯಮ ಪಂಡಿತರ ಲೆಕ್ಕಾಚಾರದ ಪ್ರಕಾರ, ಮೊದಲು ನಾಲ್ಕು ಚಕ್ರದ ವಾಹನ ಕೊಳ್ಳುವ ಆಸೆಯನ್ನೇ ಅದುಮಿಟ್ಟ ಮಂದಿಯ ಆಸೆಯನ್ನು ಈಡೇರಿಸುವ ಮೂಲಕ ಟಾಟಾದ ನ್ಯಾನೋ ಇದೀಗ ಕಾರು ಕೊಳ್ಳಬಯಸುವ ಹೊಸತೊಂದು ವರ್ಗವನ್ನೇ ಹುಟ್ಟುಹಾಕಿದೆ ಎಂದು ಅಬಿಪ್ರಾಯಪಟ್ಟಿದ್ದಾರೆ.

ಈವರೆಗಿನ ಬುಕ್ಕಿಂಗ್ ಟಾಟಾದ ಮೊದಲ ಉತ್ಪಾದನಾ ಸಾಮರ್ಥ್ಯಕ್ಕಿಂತಲೂ ಕಡಿಮೆಯಿದೆ. ಟಾಟಾ ಮೋಟಾರ್ಸ್‌ಗೆ 2.5 ಲಕ್ಷ ಉತ್ಪಾದಿಸುವ ಸಾಮರ್ಥ್ಯವಿದೆ ಎಂದು ಅದು ಹೇಳಿಕೊಂಡಿತ್ತು. ಈಗ ಆಗಿರುವ ಬುಕ್ಕಿಂಗ್ ಆ ಸಾಮರ್ಥ್ಯಕ್ಕಿಂತ ಕಡಿಮೆ ಇದೆ. ಪಶ್ವಿಮ ಬಂಗಾಳದಿಂದ ಹೊರದೂಡಲ್ಪಟ್ಟ ಟಾಟಾ ಗುಜರಾತ್‌ನ ಸಿಂಗೂರ್‌ನಲ್ಲಿ ತನ್ನ ಪ್ಲಾಂಟ್ ಸ್ಥಾಪಿಸಿತ್ತು.

ನ್ಯಾನೋ ಕಾರು ಬುಕ್ಕಿಂಗ್‌ಗೆ ಇರುವ ದೊಡ್ಡ ಮೊತ್ತದ ಪಾವತಿ, ಟೆಸ್ಟ್ ಡ್ರೈವ್‌ಗೆ ಗ್ರಾಹಕನಿಗೆ ಅವಕಾಶ ಇಲ್ಲದಿರುವುದು ನ್ಯಾನೋ ಬುಕ್ಕಿಂಗ್‌ ನಿರೀಕ್ಷಿತ ಮಟ್ಟ ತಲುಪದಿರಲು ಕಾರಣ ಇರಬಹುದು ಎಂದು ಉದ್ಯಮ ಪಂಡಿತರ ಲೆಕ್ಕಾಚಾರ. ಜತೆಗೆ, ರಸ್ತೆ ಪ್ರಯಾಣದ ಯೋಗ್ಯತೆಯನ್ನು ಇನ್ನೂ ಅಳೆಯದಿರುವಾಗ ನ್ಯಾನೋ ಕಾರು ಕೊಂಡರೆ ಹೇಗೆ ಎನ್ನುವುದು ಗ್ರಾಹಕರ ಹಿಂದೇಟಿಗೆ ಕಾರಣವಾಗಿರಲೂಬಹುದು ಎಂದು ಅಂದಾಜಿಸಲಾಗಿದೆ.

ಟಾಟಾ ಮೋಟಾರ್ಸ್ 95,000 ರೂಪಾಯಿಗಳ ಬುಕ್ಕಿಂಗ್ ಮೊತ್ತವನ್ನು ನಿಗದಿಪಡಿಸಿತ್ತು. ನ್ಯಾನೋ ಸ್ಟಾಂಡರ್ಡ್ ಶ್ರೇಣಿಗೆ ಶೇ.20ರಷ್ಟು ಬುಕ್ಕಿಂಗ್ ನಡೆದಿದ್ದು, ನ್ಯಾನೋ ಸಿಎಕ್ಸ್ ಶ್ರೇಣಿಗೆ ಶೇ.30ರಷ್ಟು ಹಾಗೂ ನ್ಯಾನೋ ಎಲ್‌ಎಕ್ಸ್ ಶ್ರೇಣಿಗೆ ಶೇ.50ರಷ್ಟು ಬುಕ್ಕಿಂಗ್ ನಡೆದಿದೆ. 6.10 ಲಕ್ಷ ನ್ಯಾನೋ ಅರ್ಜಿ ಪ್ರತಿಗಳು ದೇಶದ ಸುಮಾರು 30,000 ಬುಕ್ಕಿಂಗ್ ಕೇಂದ್ರಗಳಿಂದ ಖರೀದಿಸಲ್ಪಟ್ಟಿದ್ದವು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಏರ್ ಇಂಡಿಯಾ ಅಧ್ಯಕ್ಷರಾಗಿ ಅರವಿಂದ ಜಾಧವ್
ಕಾಫಿ ರಫ್ತೀನಲ್ಲಿ ಭಾರೀ ಇಳಿಕೆ
ದ್ವಿಚಕ್ರವಾಹನಗಳ ಮಾರಾಟದಲ್ಲಿ ಶೇ.33 ರಷ್ಟು ಹೆಚ್ಚಳ : ಸುಝುಕಿ
ಕಚ್ಚಾ ತೈಲ: ಪ್ರತಿ ಬ್ಯಾರೆಲ್‌ಗೆ 53.40 ಡಾಲರ್ ‌ಗೆ ಏರಿಕೆ
ರಫ್ತು ಕುಸಿತ: ಇಂಡೋ-ಅಮೆರಿಕನ್ ಚೇಂಬರ್ ಕಳವಳ
ದ್ವಿಚಕ್ರವಾಹನಗಳ ಮಾರಾಟದಲ್ಲಿ ಶೇ.33 ರಷ್ಟು ಹೆಚ್ಚಳ : ಸುಝುಕಿ