ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ವರ್ಷಾಂತ್ಯಕ್ಕೆ ಹುಂಡೈನಿಂದ ಐ20 ಡೀಸೆಲ್ ಕಾರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವರ್ಷಾಂತ್ಯಕ್ಕೆ ಹುಂಡೈನಿಂದ ಐ20 ಡೀಸೆಲ್ ಕಾರು
ಕೊರಿಯಾ ದೇಶದ ಪ್ರಮುಖ ವಾಹನೋದ್ಯಮ ಸಂಸ್ಥೆ ಹೊಂಡೈ ಮೋಟಾರ್ ಕಂಪೆನಿ ಡೀಸೆಲ್ ಚಾಲಿತ ಐ20 ಕಾರನ್ನು ವರ್ಷಾಂತ್ಯದ ವೇಳೆಗೆ ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ನಿರ್ಧರಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಮುಂಬರುವ ಎರಡು ವರ್ಷಗಳಲ್ಲಿ ನೂತನ ಎರಡು ಮಾದರಿಯ ಅತ್ಯಾಧುನಿಕ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಯೋಜನೆಯನ್ನು ರೂಪಿಸಿದೆ.

ದೇಶದ ಕಾರು ಮಾರುಕಟ್ಟೆಯಲ್ಲಿ ಹೊಂಡೈ ಮೋಟಾರ್ ಕಂಪೆನಿ ವಾರ್ಷಿಕವಾಗಿ 10 ಲಕ್ಷ ಕಾರುಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.

ಪ್ರಸ್ತುತ ದೇಶದ ಕಾರು ಮಾರುಕಟ್ಟೆಯಲ್ಲಿ ಶೇ.20 ರಷ್ಟು ಶೇರುಗಳನ್ನು ಹೊಂದಿದ್ದು, ವರ್ಷಾಂತ್ಯದ ವೇಳೆಗೆ ಶೇ.3 ರಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೊಂಡೈ ಮೋಟಾರ್ಸ್‌ನ ಹಿರಿಯ ಉಪಾಧ್ಯಕ್ಷ ಯಾಂಗ್ -ಕಿಲ್ ಚುನ್ ಹೇಳಿದ್ದಾರೆ.

ವಾಹನೋದ್ಯಮದ ಸಮೀಕ್ಷೆಯಂತೆ ಭಾರತದ ಕಾರು ಮಾರುಕಟ್ಟೆ ಮುಂಬರುವ 2012-13 ರಲ್ಲಿ 15 ಲಕ್ಷ ಕಾರುಗಳ ಮಾರಾಟವಾಗುವ ಸಾಧ್ಯತೆಗಳಿವೆ.

ಮುಂದಿನ ಎರಡು ವರ್ಷಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಶೇ.25ರಷ್ಟು ಪಾಲನ್ನು ಹೊಂದುವ ಗುರಿಯಿದ್ದು, 110 ರಾಷ್ಟ್ರಗಳಿಗೆ ರಫ್ತು ವಹಿವಾಟು ವಿಸ್ತರಿಸಲಿದೆ ಎಂದು ತಿಳಿಸಿದ್ದಾರೆ.

ಏಷ್ಯಾ ಮಾರುಕಟ್ಟೆಯಲ್ಲಿ ಭಾರತದ ಪಾತ್ರ ಮಹತ್ವದ್ದಾಗಿದ್ದು, 2013ರ ವೇಳೆಗೆ ಜಾಗತಿಕವಾಗಿ 60 ಲಕ್ಷ ಕಾರುಗಳನ್ನು ಮಾರಾಟ ಮಾಡುವ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಯಾಂಗ್ ವಿವರಣೆ ನೀಡಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚಿನ್ನ: ಪ್ರತಿ 10 ಗ್ರಾಂಗೆ 14,477
ಮತ್ತಷ್ಟು ಪರೋಕ್ಷ ತೆರಿಗೆ ಕಡಿತ ಅಗತ್ಯ:ಸಿಐಐ
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ತೆರಿಗೆ ಪ್ರಕರಣ: ಅಮಿತಾಭ್‌ಗೆ ನೋಟಿಸ್ ಜಾರಿ
ಭಾರತ-ಪಾಕ್ ಮಧ್ಯೆ ವಹಿವಾಟು ಏರಿಕೆ
2.03 ಲಕ್ಷ ನ್ಯಾನೋ ಬುಕ್ಕಿಂಗ್, ಹುಸಿಯಾದ ನಿರೀಕ್ಷೆ