ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಎಸ್‌ಬಿಐನಿಂದ ಕಿಂಗ್‌ಫಿಶರ್‌‌ಗೆ 2ಸಾವಿರ ಕೋಟಿ ಸಾಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಸ್‌ಬಿಐನಿಂದ ಕಿಂಗ್‌ಫಿಶರ್‌‌ಗೆ 2ಸಾವಿರ ಕೋಟಿ ಸಾಲ
ದೇಶದ ಖ್ಯಾತ ಉದ್ಯಮಿ ವಿಜಯ್ ಮಲ್ಯ ಸಂಚಾಲಿತ ಕಿಂಗ್‌ಫಿಶರ್ ಏರ್‌ಲೈನ್ಸ್ 2 ಸಾವಿರ ಕೋಟಿ ಬಂಡವಾಳ ಸಾಲಕ್ಕಾಗಿ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾಗೆ ಮನವಿ ಸಲ್ಲಿಸಿದ್ದು,ಮುಖ್ಯವಾಗಿ ಇಂಧನ ಬಾಕಿಯನ್ನು ಪಾವತಿಸಲು ಸಾಲವನ್ನು ಪಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕಿಂಗ್‌ಫಿಶರ್ ಏರ್‌ಲೈನ್ಸ್ ಸಂಸ್ಥೆ ತೈಲ ಸಂಸ್ಥೆಗಳಾದ ಐಒಸಿ ,ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್‌‌ಗೆ ಸುಮಾರು 785 ಕೋಟಿ ರೂಪಾಯಿ ಪಾವತಿಸುವ ಅಗತ್ಯವಿರುವುದರಿಂದ ಎಸ್‌ಬಿಐನಿಂದ ಸಾಲ ಪಡೆದು ಬಾಕಿಯನ್ನು ಪೂರ್ತಿಗೊಳಿಸುವ ಹುನ್ನಾರದಲ್ಲಿದೆ ಎಂದು ವೈಮಾನಿಕ ಸಂಸ್ಥೆಗಳ ಮೂಲಗಳು ತಿಳಿಸಿವೆ.

ವಿಮಾನಯಾನ ಸಂಸ್ಥೆ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾದಿಂದ 2000 ಕೋಟಿ ರೂಪಾಯಿಗಳ ಸಾಲ ಪಡೆದು ಅಗತ್ಯವಾದ ಕೊರತೆಗಳನ್ನು ಪೂರೈಸಿಕೊಳ್ಳಲು ನಿರ್ಧರಿಸಿದೆ ಎನ್ನಲಾಗಿದೆ.ಈ ಕುರಿತು ಕಿಂಗ್‌ಫಿಶರ್ ವಕ್ತಾರರನ್ನು ಸಂಪರ್ಕಿಸಿದಾಗ ವ್ಯವಹಾರಿಕ ಸಂಗತಿಗಳನ್ನು ಬಹಿರಂಗಪಡಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಡಿಸ್ನಿ ಎಂಟರ್‌ಟೇನ್‌ಮೆಂಟ್ ಲಾಭಾಂಶ ಶೇ.46ರಷ್ಟು ಕುಸಿತ
ಲಾಟರಿ ಮೇಲೆ ಸೇವಾ ತೆರಿಗೆ ಕಾನೂನುಬಾಹಿರ
2012ರಲ್ಲಿ ಮೊಬೈಲ್ ಗ್ರಾಹಕರ ಸಂಖ್ಯೆ 500 ದಶಲಕ್ಷಕ್ಕೆ
ಎಸ್‌ಬಿಐನಿಂದ ಸಾಲ: ಕಿಂಗ್‌ಫಿಶರ್
ಅಮೆರಿಕ ತೆರಿಗೆ ನೀತಿ: ಭಾರತಕ್ಕೆ ಪರಿಣಾಮ ಇಲ್ಲ
ಎಂಎಸ್‌ಇ ಕ್ಷೇತ್ರಗಳಿಗೆ ಹೆಚ್ಚಿನ ಸಾಲ:ಆರ್‌ಬಿಐ ಆದೇಶ