ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಫಾರೆಕ್ಸ್: ರೂಪಾಯಿ ಮೌಲ್ಯ ಇಳಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫಾರೆಕ್ಸ್: ರೂಪಾಯಿ ಮೌಲ್ಯ ಇಳಿಕೆ
ಏಷ್ಯಾ ಮಾರುಕಟ್ಟೆಗಳ ದುರ್ಬಲ ವಹಿವಾಟಿನಿಂದಾಗಿ ವಿದೇಶಿ ಬಂಡವಾಳದ ಹೊರಹರಿವು ಹೆಚ್ಚಳವಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಡಾಲರ್ ಎದುರಿಗೆ ರೂಪಾಯಿ 34ಪೈಸೆ ಕುಸಿತ ಕಂಡಿದೆ.

ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನಲ್ಲಿ ಡಾಲರ್ ಎದುರಿಗೆ 49.55 ರೂಪಾಯಿಗಳಿಗೆ ಮುಕ್ತಾಯವಾಗಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 34 ಪೈಸೆ ಕುಸಿತ ಕಂಡು 49.40/41 ರೂಪಾಯಿಗಳಿಗೆ ತಲುಪಿದೆ.

ಬಿಎಸ್‌ಇ ಸೂಚ್ಯಂಕ ಆರಂಭಿಕ ವಹಿವಾಟಿನಲ್ಲಿ ದುರ್ಬಲವಾಗುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಬಂಡವಾಳದ ಹೊರಹರಿವು ಹೆಚ್ಚಳವಾಗುವ ಸಾಧ್ಯತೆಗಳಿಂದಾಗಿ ಹಾಗೂ ಏಷ್ಯಾ ಕರೆನ್ಸಿಗಳ ಎದುರು ಡಾಲರ್ ಮೌಲ್ಯ ಏರಿಕೆಯಾಗಿದ್ದರಿಂದ ರೂಪಾಯಿ ಕುಸಿತಕ್ಕೆ ಕಾರಣವಾಗಿದೆ ಎಂದು ಫಾರೆಕ್ಸ್‌ ಡೀಲರ್‌ಗಳು ಅಭಿಪ್ರಾಯಪಟ್ಟಿದ್ದಾರೆ.

ಏತನ್ಮಧ್ಯೆ ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಶೇರುಪೇಟೆ ವಹಿವಾಟಿನ ಆರಂಭಕ್ಕೆ ಶೇ.1 ರಷ್ಟು ಕುಸಿತ ಕಂಡು 16,268.03 ಅಂಕಗಳಿಗೆ ತಲುಪಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಫಾರೆಕ್ಸ್, ರೂಪಾಯಿ, ಇಳಿಕೆ, doller, rupee, sensex, mumbai
ಮತ್ತಷ್ಟು
ಸತ್ಯಂನ ಶೇ.31 ಶೇರುಗಳನ್ನು ಖರೀದಿಸಿದ ಟೆಕ್ ಮಹೀಂದ್ರಾ
ಎಸ್‌ಬಿಐನಿಂದ ಕಿಂಗ್‌ಫಿಶರ್‌‌ಗೆ 2ಸಾವಿರ ಕೋಟಿ ಸಾಲ
ಡಿಸ್ನಿ ಎಂಟರ್‌ಟೇನ್‌ಮೆಂಟ್ ಲಾಭಾಂಶ ಶೇ.46ರಷ್ಟು ಕುಸಿತ
ಲಾಟರಿ ಮೇಲೆ ಸೇವಾ ತೆರಿಗೆ ಕಾನೂನುಬಾಹಿರ
2012ರಲ್ಲಿ ಮೊಬೈಲ್ ಗ್ರಾಹಕರ ಸಂಖ್ಯೆ 500 ದಶಲಕ್ಷಕ್ಕೆ
ಎಸ್‌ಬಿಐನಿಂದ ಸಾಲ: ಕಿಂಗ್‌ಫಿಶರ್