ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 580 ನೂತನ ಶಾಖೆಗಳು ಆರಂಭ: ಐಸಿಐಸಿಐ ಬ್ಯಾಂಕ್‌
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
580 ನೂತನ ಶಾಖೆಗಳು ಆರಂಭ: ಐಸಿಐಸಿಐ ಬ್ಯಾಂಕ್‌
ದೇಶದ ಪ್ರಮುಖ ಖಾಸಗಿ ಕ್ಷೇತ್ರದ ಐಸಿಐಸಿಐ ಬ್ಯಾಂಕ್ ಪ್ರಸಕ್ತ ವರ್ಷದಲ್ಲಿ ದೇಶದಾದ್ಯಂತ 580 ಶಾಖೆಗಳನ್ನು ಆರಂಭಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಆದರೆ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳದೇ ಪ್ರಸ್ತುತವಿರುವ ಸಿಬ್ಬಂದಿಗಳನ್ನು ವಿಸ್ತರಿತಗೊಂಡ 2 ಸಾವಿರ ಶಾಖೆಗಳಿಗೆ ವರ್ಗಾಯಿಸಲಾಗುವುದು ಎಂದು ಐಸಿಐಸಿಐ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದಾ ಕೋಚರ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಪ್ರಸಕ್ತ ವರ್ಷದಲ್ಲಿ 580 ಶಾಖೆಗಳನ್ನು ಆರಂಭಿಸಲು ನಿರ್ಧರಿಸಲಾಗಿದ್ದು ಕಳೆದ ಒಂದುವರೆ ವರ್ಷಗಳ ಹಿಂದೆ ದೇಶದಲ್ಲಿ 1400 ಶಾಖೆಗಳನ್ನು ಆರಂಭಿಸಲಾಗಿತ್ತು.ನೂತನ ಶಾಖೆಗಳ ಆರಂಭದೊಂದಿಗೆ ಒಟ್ಟು 2000 ಶಾಖೆಗಳನ್ನು ಆರಂಭಿಸಿದಂತಾಗಿದೆ ಎಂದು ಕೋಚರ್ ವಿವರಣೆ ನೀಡಿದ್ದಾರೆ.

ಐಸಿಐಸಿಐ ಬ್ಯಾಂಕ್‌ನಲ್ಲಿ ಪ್ರಸ್ತುತ 36 ಸಾವಿರ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು, ಹೊಸದಾಗಿ ಉದ್ಯೋಗಿಗಳನ್ನುನ ನೇಮಕ ಮಾಡಿಕೊಳ್ಳಲಾಗುವುದಿಲ್ಲ. ನೂತನ ಶಾಖೆಗಳಿಗೆ ತರಬೇತಿ ನೀಡಿದ ನಂತರ ಉದ್ಯೋಗಿಗಳನ್ನು ವರ್ಗಾಯಿಸಲಾಗುವುದು ಎಂದು ಹೇಳಿದ್ದಾರೆ.

ಉದ್ಯೋಗಿಗಳಿಗೆ ವೇತನ ಹೆಚ್ಚಳ ಮತ್ತಿತರ ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸುವ ಯೋಜನೆಗಳ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಇಒ ಕೋಚರ್, ಈಗಾಗಲೇ ಬ್ಯಾಂಕ್‌ನ ಉದ್ಯೋಗಿಗಳಿಗೆ ವೇತನದಲ್ಲಿ ಅತ್ಯಧಿಕ ಏರಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಕೆ.ವಿ.ಕಾಮತ್ ನಾನ್‌-ಎಕ್ಸಿಕ್ಯೂಟಿವ್ ಅಧ್ಯಕ್ಷರಾದ ನಂತರ ಚಂದಾ ಕೋಚರ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿರ್ಲಾ ಸನ್‌ಲೈಫ್‌ಗೆ ಪ್ರಶಸ್ತಿಯ ಗರಿ
ಫಾರೆಕ್ಸ್: ರೂಪಾಯಿ ಮೌಲ್ಯ ಇಳಿಕೆ
ಸತ್ಯಂನ ಶೇ.31 ಶೇರುಗಳನ್ನು ಖರೀದಿಸಿದ ಟೆಕ್ ಮಹೀಂದ್ರಾ
ಎಸ್‌ಬಿಐನಿಂದ ಕಿಂಗ್‌ಫಿಶರ್‌‌ಗೆ 2ಸಾವಿರ ಕೋಟಿ ಸಾಲ
ಡಿಸ್ನಿ ಎಂಟರ್‌ಟೇನ್‌ಮೆಂಟ್ ಲಾಭಾಂಶ ಶೇ.46ರಷ್ಟು ಕುಸಿತ
ಲಾಟರಿ ಮೇಲೆ ಸೇವಾ ತೆರಿಗೆ ಕಾನೂನುಬಾಹಿರ